Annamalai: ಬಿಜೆಪಿ ನಾಯಕ 'ಅಣ್ಣಾಮಲೈ' ವಿರುದ್ಧ ಪೊಲೀಸ್ ಕೇಸ್ ದಾಖಲು
ಧರ್ಮಪುರಿ, ಜನವರಿ 11: ದಕ್ಷ ಐಪಿಎಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ ಗುರುತಿಸಿಕೊಂಡು ಬಳಿಕ ಬಿಜೆಪಿ ಸೇರಿ ತಮಿಳುನಾಡಿನಲ್ಲಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿರುವ ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ (Annamalai) ವಿರುದ್ಧ ಧರ್ಮಪುರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಅವರು ಧಾರ್ಮಿಕ ದ್ವೇಷವನ್ನು ಉತ್ತೇಜಿಸಿದ ಆರೋಪದ ಮೇಲೆ ತಮಿಳುನಾಡಿನ ಧರ್ಮಪುರಿ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಇದೇ ಜನವರಿ 8 ರಂದು ಪಾಪ್ಪಿರೆಡ್ಡಿಪಟ್ಟಿ ಬಳಿಯ ಬೊಮ್ಮಿಡಿ ಪ್ರದೇಶದಲ್ಲಿ ಬಿಜೆಪಿ ಮುಖ್ಯಸ್ಥರ 'ಎನ್ ಮನ್ ಎನ್ ಮಕ್ಕಳ್' ರ್ಯಾಲಿಯಲ್ಲಿ ಅಣ್ಣಾಮಲೈ ಮತ್ತು ಕ್ರಿಶ್ಚಿಯನ್ ಯುವಕರ ಗುಂಪಿನ ನಡುವೆ ಚರ್ಚ್ ಪ್ರವೇಶವನ್ನು ವಿರೋಧಿಸಿ ವಾಗ್ವಾದ ನಡೆದಿತ್ತು.
ಚರ್ಚ್ ಪ್ರವೇಶ ಯತ್ನ: ಅಣ್ಣಮಲೈ ತಡೆದ ಗುಂಪು
ಅಣ್ಣಾಮಲೈ ಅವರು ತಮ್ಮ ರ್ಯಾಲಿಯಲ್ಲಿ ಪಾಪಿರೆಡ್ಡಿಪಟ್ಟಿಯ ಸೇಂಟ್ ಲೂರ್ಡ್ಸ್ ಚರ್ಚ್‌ನಲ್ಲಿರುವ ಮೇರಿ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಮುಂದಾಗಿದ್ದರಿಂದ ಈ ವೇಳೆ ಗಲಾಟೆ, ಮಾತಿನ ಚಕಮಕಿ ನಡೆದಿದೆ. ಮಣಿಪುರ ಹಿಂಸಾಚಾರ ಉಲ್ಲೇಖಿಸಿ ಯುವಕರ ಗುಂಪು ಅಣ್ಣಾಮಲೈ ಗುಂಪನ್ನು ಚರ್ಚ್‌ಗೆ ಪ್ರವೇಶದಂತೆ ತಡೆಯಿತು. ಜೊತೆಗೆ ಅವರ ವಿರುದ್ಧ ಘೋಷಿಸಿದರು.

ಅಣ್ಣಾಮಲೈ ಹೇಳಿಕೆ ವಿಡಿಯೋ ವೈರಲ್
ಈ ಘಟನೆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಣ್ಣಾಮಲೈ ಯುವಕರಿಗೆ ಮಣಿಪುರ ಸಮಸ್ಯೆಯನ್ನು ವಿವರಿಸುವುದು ಸಹ ಈ ವಿಡಿಯೋದಲ್ಲಿ ಸರೆಯಾಗಿದೆ. ಈ ವೇಳೆ ಅಣ್ಣಾಮಲೈ ವಿರುದ್ಧ ಚರ್ಚೆಗೆ ಬಾರದಂತೆ ತಡೆದ ಗುಂಪು ವಾಗ್ದಾಳಿ ನಡೆಸಿತು. ಇದು ಸಹ ರೆಕಾರ್ಡ್ ಆಗಿದೆ.
ನೀವು ಡಿಎಂಕೆ ರೀತಿ ಮಾತನಾಡಬೇಡಿ. ಇದು ಸಾರ್ವಜನಿಕ ಸ್ಥಳ. ನನ್ನನ್ನು ತಡೆಯಲು ನಿಮಗೆ ಯಾವ ಹಕ್ಕಿದೆ? ಎಂದು ಅಣ್ಣಾಮಲೈ ಅವರು ಆ ಗುಂಪನ್ನು ಪ್ರಶ್ನಿಸಿದ್ದಾರೆ. ನಾನು 10,000 ಜನರನ್ನು ಒಟ್ಟುಗೂಡಿಸಿ ಧರಣಿ ನಡೆಸಿದರೆ ನೀವೇನು ಮಾಡುತ್ತೀರಿ? ಎಂದು ಹೇಳಿರುವ ಅಣ್ಣಾಮಲೈ ಅವರ ವಿಡಿಯೋ ವೈರಲ್ ಆಗಿದೆ.
ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲು: ಬಿಜೆಪಿ ಖಂಡನೆ
ಸ್ಥಳದಲ್ಲಿ ಪರಿಸ್ಥಿತಿ ಬಿಗುಡಾಯಿಸುತ್ತಿದ್ದಂತೆ ಪೊಲೀಸರ ಮಧ್ಯಪ್ರವೇಶದಿಂದ, ಅಣ್ಣಾಮಲೈ ಪ್ರತಿಮೆಗೆ ಚರ್ಚ್‌ನ ಮೇರಿ ಪ್ರತಿಮೆ ಹಾರ ಹಾಕಿದರು. ಬಳಿಕ ಕಾರ್ತಿಕ್ ಎಂಬುವವರು ತಮಿಳುನಾಡಿನ ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ವಿರುದ್ಧ ದೂರು ದಾಖಲಿಸಿದರು. ಅದರ ಆಧಾರದಲ್ಲಿ ಧರ್ಮಪುರಿ ಜಿಲ್ಲೆಯ ಬೊಮ್ಮಿಡಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 153 (ಎ), 504, ಮತ್ತು 505 (2) ಅಡಿಯಲ್ಲಿ ಪ್ರಕರಣ ದಾಖಲಾಯಿತು.
ಇದೆಲ್ಲ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಘಟಕವು, ಅಣ್ಣಾಮಲೈ ಚರ್ಚ್ ಪ್ರವೇಶವನ್ನು ವಿರೋಧಿಸಿದ ಗುಂಪು ಆಡಳಿತ ಪಕ್ಷವಾದ ಡಿಎಂಕೆಗೆ ಪರವಾದದ್ದು. ಅದಕ್ಕೆ ಬೇಕು ಅಂತಲೇ ಹೀಗೆ ಮಾಡಿದೆ ಎಂದು ಅವರು ಆರೋಪಿಸಿದೆ. ಡಿಎಂಕೆ ಸರ್ಕಾರವು ಅಣ್ಣಾಮಲೈ ವಿರುದ್ಧ ಕೈಗೊಂಡ ಕಾನೂನು ಕ್ರಮವನ್ನು ಬಿಜೆಪಿ ಘಟಕ ತೀವ್ರವಾಗಿ ಖಂಡಿಸಿದೆ.












Click it and Unblock the Notifications