ಲಸಿಕೆ ಪಡೆಯಿರಿ; 97 ವರ್ಷದ ಮಹಿಳೆ ವಿಡಿಯೋ ವೈರಲ್
ನವದೆಹಲಿ, ಮೇ 10; ಕೇಂದ್ರ ಸರ್ಕಾರ ಜನರು ಯಾವುದೇ ಭಯಪಡದೇ ಕೋವಿಡ್ ವಿರುದ್ಧದ ಲಸಿಕೆ ಪಡೆಯಿರಿ ಎಂದು ಕರೆ ನೀಡುತ್ತಿದೆ. ಕೆಲವು ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಯೊಂದು ವೈರಲ್ ಆಗಿದೆ. 97 ವರ್ಷದ ವೃದ್ಧೆಯೊಬ್ಬರು ಲಸಿಕೆ ಪಡೆಯಿರಿ ಎಂದು ಕರೆ ನೀಡಿದ್ದಾರೆ. ವೃದ್ಧೆ ಈಗಾಗಲೇ ಎರಡು ಹಂತದ ಲಸಿಕೆಯನ್ನು ಪಡೆದಿದ್ದಾರೆ.
"ನಾನು ಲಸಿಕೆ ಪಡೆದಿದ್ದೇನೆ. ಯಾವುದೇ ನೋವಿಲ್ಲ, ಯಾವುದೇ ಅಡ್ಡ ಪರಿಣಾಮಗಳು ಆಗಿಲ್ಲ" ಎಂದು ವೃದ್ಧೆ ಜನರಿಗೆ ಧೈರ್ಯ ಹೇಳಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಜನರು ಸಹ ವೃದ್ಧೆ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ಎಲ್ಲರೂ ಹೆದರದೇ ಲಸಿಕೆ ಪಡೆದುಕೊಳ್ಳಿ. ಇದು ನಿಮಗೆ ಮತ್ತು ನಿಮ್ಮ ಸುತ್ತಮುತ್ತಲಿನ ಜನರಿಗೆ ಸಹಾಯಕವಾಗಲಿದೆ" ಎಂದು ವೃದ್ಧೆ ವಿಡಿಯೋದಲ್ಲಿ ಹೇಳಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲವಾರು ಸೆಲೆಬ್ರಿಟಿಗಳು ಸಹ ವಿಡಿಯೋ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೇ 1ರಿಂದ ದೇಶದಲ್ಲಿ 18-44 ವರ್ಷದವರಿಗೂ ಲಸಿಕೆ ಪಡೆಯಲು ಅವಕಾಶ ನೀಡಲಾಗಿದೆ. ಆರೋಗ್ಯ ಸೇತು ಅಪ್ಲಿಕೇಶನ್, ಕೋವಿನ್ ಅಪ್ಲಿಕೇಶನ್ ಮೂಲಕ ನೋಂದಣಿ ಮಾಡಿಸಿಕೊಂಡು ಲಸಿಕೆಯನ್ನು ಪಡೆಯಬಹುದು.












Click it and Unblock the Notifications