ಉಗ್ರ ದುಜಾನಾ ಶವ ಒಯ್ಯುವಂತೆ ಪಾಕಿಸ್ತಾನಕ್ಕೆ ಭಾರತ ಸೂಚನೆ
ಜಮ್ಮು ಮತ್ತು ಕಾಶ್ಮೀರ, ಆಗಸ್ಟ್ 3: ಕಳೆದ 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಿಮ್ಮ ಉಗ್ರನ ಶವವನ್ನು ಕೊಂಡೊಯ್ಯಿರಿ ಎಂದು ಪಾಕಿಸ್ತಾನಕ್ಕೆ ಭಾರತ ಸೂಚಿಸಲಿದೆ.
ಪುಲ್ವಾಮಾದಲ್ಲಿ ಭದ್ರತಾ ಪಡೆಗಳಿಂದ ಮಂಗಳವಾರ ಹತ್ಯೆಯಾದ ಲಷ್ಕರ್ ಎ ತಯ್ಯಬಾ ಉಗ್ರ ಅಬು ದುಜಾನಾ ಶವವನ್ನು ಕೊಂಡೊಯ್ಯುವಂತೆ ಪಾಕಿಸ್ತಾನ ಹೈಕಮಿಷನ್‌ಗೆ ಹೇಳಲು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಅಧಿಕಾರಿಗಳು ನಿರ್ಧರಿಸಿದ್ದಾರೆ.

"ಕೇಂದ್ರ ಗೃಹ ಸಚಿವಾಲಯಕ್ಕೆ ಈ ಬಗ್ಗೆ ಪತ್ರ ಬರೆಯಲಾಗುವುದು. ಗೃಹ ಸಚಿವಾಲಯದ ಮೂಲಕ ಪಾಕಿಸ್ತಾನ ಹೈಕಮಿಷನ್ ಸಂಪರ್ಕಿಸಲಾಗುವುದು," ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾ ನಿರೀಕ್ಷಕ ಮುನೀರ್ ಖಾನ್ ತಿಳಿಸಿದ್ದಾರೆ.
ದುಜಾನಾ ಪಾಕಿಸ್ತಾನದ ಪ್ರಜೆಯಾಗಿದ್ದಾನೆ. ಆತ ತಾನು ಕರಾಚಿಯವನು ಎಂದು ಈ ಹಿಂದೆ ಆಶ್ರಯ ಕೊಟ್ಟ ಪುಲ್ವಾಮದ ಮನೆ ಮಾಲೀಕರಿಗೆ ತಿಳಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications