ದೈತ್ಯ ಕಂಪನಿಗಳ ನಾಯಕತ್ವ ವಹಿಸಿದ್ದ 'ನಂದಿತಾ ಸಿನ್ಹಾ' ಇದೀಗ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ನೂತನ CEO

ಬೆಂಗಳೂರು: ದೈತ್ಯ ಕಂಪನಿಗಳಲ್ಲಿ ನಾಯಕತ್ವ ಹುದ್ದೆ ನಿರ್ವಹಿಸಿದ ಹಾಗೂ ಇಕಾಮರ್ಸ್ ವೇದಿಕೆ ಮಿಂತ್ರಾವನ್ನು ಲಾಭದ ಹಾದಿಗೆ ತಂದ ನಂದಿತಾ ಸಿನ್ಹಾ ಅವರು ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಕಂಪನಿಯ ಸಿಇಎ ಆಗಿ ನೇಮಕವಾಗಿದ್ದಾರೆ. ಇವರ ಹಿನ್ನೆಲೆ ಏನು?, ಈ ಹಿಂದಿನ ಕಾರ್ಯವೈಖರಿ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

ದಿನಸಿ ಹಾಗೂ ದಿನಬಳಕೆಯ ವಸ್ತುಗಳನ್ನು ಕೆಲವೇ ನಿಮಿಷಗಳಲ್ಲಿ ಮನೆ ಬಾಗಿಲಿಗೆ ತಲುಪಿಸುವ ಭಾರತದ ಪ್ರಮುಖ ಕ್ವಿಕ್ ಕಾಮರ್ಸ್ ಕಂಪನಿಯಾಗಿರುವ ಇನ್‌ಸ್ಟಾಮಾರ್ಟ್ ಸಂಸ್ಥೆಗೆ ಹೊಸ ಸಾರಥಿಯ ಆಯ್ಕೆಯಾಗಿದೆ. ಇನ್‌ಸ್ಟಾಮಾರ್ಟ್ ತನ್ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ನಂದಿತಾ ಸಿನ್ಹಾ ಅವರನ್ನು ನೇಮಕ ಮಾಡಿದೆ. ಮುಂದಿನ ತಿಂಗಳುಆಗಸ್ಟ್ 03, 2026 ರಿಂದ ಅವರು ಜಾರಿಗೆ ಬರಲಿದೆ. ಅಂದು ನಂದಿತಾ ಅವರು ಹಾಲಿ ಸಿಇಒ ಅಮಿತೇಶ್ ಝಾ ಅವರ ಸ್ಥಾನ ತುಂಬಲಿದ್ದಾರೆ.

Swiggy Instamart CEO

ನಂದಿತಾ ಸಿನ್ಹಾ ಯಾರಿವರು?

ನಂದಿತಾ ಅವರು ಇದಕ್ಕೂ ಮುನ್ನ ಪ್ರಸಿದ್ಧ ಫ್ಯಾಷನ್ ಇ-ಕಾಮರ್ಸ್ ತಾಣ ಮಿಂತ್ರಾದ (Myntra CEO) ಸಿಇಒ ಆಗಿ ಕಾರ್ಯ ನಿರ್ವಹಿಸದ್ದರು. ಇಂದಿನ ಫ್ಯಾಷನ್ ಲೋಕದಲ್ಲಿ ತೀವ್ರ ಪೈಪೋಟಿಯ ಮಾರುಕಟ್ಟೆಯಲ್ಲೂ ಮಿಂತ್ರಾವನ್ನು 2024ರಲ್ಲಿ ಲಾಭದ ಹಾದಿಗೆ ತಂದ ಶ್ರೇಯಸ್ಸು ಅವರಿಗೆ ಸಲ್ಲುಸತ್ತದೆ.

ಫ್ಲಿಪ್‌ಕಾರ್ಟ್, ಬ್ರಿಟಾನಿಯಾ ಮತ್ತು ಹಿಂದೂಸ್ತಾನ್ ಯೂನಿಲಿವರ್‌ನಂತಹ ದೈತ್ಯ ಕಂಪನಿಗಳಲ್ಲಿ ನಾಯಕತ್ವದ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಇವರು, ಕನ್ಸೂಮರ್‌ ಇಂಟರ್ನೆಟ್, ಫ್ಯಾಷನ್ ಮತ್ತು ಎಫ್‌ಎಂಸಿಜಿ ವಲಯದಲ್ಲಿ ಬರೋಬ್ಬರಿ 20 ವರ್ಷಗಳ ಅಪಾರ ಅನುಭವ ಹೊಂದಿದ್ದಾರೆ.

ಗ್ರಾಹಕಸ್ನೇಹಿ ಕಾರ್ಯ ವೈಖರಿ: ಎಂಡಿ

ಹೊಸ ಸಿಇಒ ನೇಮಕ ಕುರಿತು ಸ್ವಿಗ್ಗಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಗ್ರೂಪ್ ಸಿಇಒ ಶ್ರೀಹರ್ಷ ಮಜೇಟಿ, "ಭಾರತದ ಅತ್ಯಂತ ಯಶಸ್ವಿ ಕನ್ಸೂಮರ್ ಇಂಟರ್ನೆಟ್ ನಾಯಕಿಯರಲ್ಲಿ ಒಬ್ಬರಾಗಿರುವ ನಂದಿತಾ ಅವರನ್ನು ಇನ್‌ಸ್ಟಾಮಾರ್ಟ್ ಸಿಇಒ ಆಗಿ ಸ್ವಾಗತಿಸಲು ಅತೀವ ಸಂತೋಷವಾಗುತ್ತಿದೆ. ಅವರ ದೂರದೃಷ್ಟಿ ಮತ್ತು ಗ್ರಾಹಕಸ್ನೇಹಿ ಕಾರ್ಯ ವೈಖರಿಯಿಂದ ಇನ್‌ಸ್ಟಾಮಾರ್ಟ್ ಮತ್ತಷ್ಟು ಎತ್ತರಕ್ಕೆ ಬೆಳೆಯಲಿದೆ," ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ನಿರ್ಗಮಿತ ಸಿಇಒಗೆ ಶುಭ ಹಾರೈಸಿದ ಅವರು, "ಇನ್‌ಸ್ಟಾಮಾರ್ಟ್‌ನ ಬೆಳವಣಿಗೆಯ ನಿರ್ಣಾಯಕ ಹಂತದಲ್ಲಿ ಅಮಿತೇಶ್ ಝಾ ಅವರು ಅತ್ಯುತ್ತಮ ನಾಯಕತ್ವ ಒದಗಿಸಿದ್ದಾರೆ. ಸಂಸ್ಥೆಯನ್ನು ಬಲವಾದ ಸ್ಥಿತಿಗೆ ತಂದಿರುವ ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.

ಗ್ರಾಕರಿಗೆ ಆದ್ಯತೆ ನೀಡುವ ಸಂಸ್ಥೆ ಸ್ವಿಗ್ಗಿ: ನಂದಿತಾ ಹರ್ಷ

ಇನ್‌ಸ್ಟಾಮಾರ್ಟ್ ಸಿಇಒ ಆಗಿ ಹೊಸ ಜವಾಬ್ದಾರಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ ನಂದಿತಾ ಸಿನ್ಹಾ, "ಇನ್‌ಸ್ಟಾಮಾರ್ಟ್ ತಂಡ ಕಟ್ಟಿರುವ ಈ ವ್ಯವಹಾರವನ್ನು ನಾನು ಮೊದಲಿನಿಂದಲೂ ಮೆಚ್ಚಿದ್ದೇನೆ. ಇದೊಂದು ಗ್ರಾಹಕರಿಗೆ ಮೊದಲ ಆದ್ಯತೆ ನೀಡುವ ಅತ್ಯುತ್ತಮ ಸಂಸ್ಥೆ. ಭಾರತೀಯರು ತಮ್ಮ ದೈನಂದಿನ ಅಗತ್ಯಗಳಿಗೆ ನಡೆಸುವ ಶಾಪಿಂಗ್ ಕೇಂದ್ರಿತವಾಗಿ ಇನ್‌ಸ್ಟಾಮಾರ್ಟ್ ಬೆಳೆದಿದೆ. ಸಂಸ್ಥೆಯ ಮುಂದಿನ ಬೆಳವಣಿಗೆ ದೃಷ್ಟಿಯಿಂದ ನಮ್ಮ ತಂಡ ಮತ್ತು ಪಾಲುದಾರರೊಂದಿಗೆ ಕೆಲಸ ಮಾಡಲು ನಾನು ಉತ್ಸುಕಳಾಗಿದ್ದೇನೆ ಎಂದು ಕಂಪನಿ ಕುರಿತು ಪ್ರತಿಕ್ರಿಯಿಸಿದ್ದಾರೆ.

ಆಗಸ್ಟ್ 2020ರಲ್ಲಿ ಆರಂಭವಾದ ಇನ್‌ಸ್ಟಾಮಾರ್ಟ್ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಬೃಹತ್ ಡೆಲಿವರಿ ಪಡೆಯನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ದೇಶದ 131ಕ್ಕೂ ಹೆಚ್ಚು ನಗರಗಳಲ್ಲಿ ದಿನಸಿ ಮತ್ತು ಇತರ ದೈನಂದಿನ ಅಗತ್ಯ ವಸ್ತುಗಳನ್ನು ಕ್ಷಿಪ್ರವಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಸದ್ಯ ನೂತನವಾಗಿ ನಂದಿತಾ ಸಿನ್ಹಾ ಅವರು ಸಿಇಒ ಆಗಿ ಆಗಮಿಸುತ್ತಿದ್ದು, ಇನ್‌ಸ್ಟಾಮಾರ್ಟ್ ತನ್ನ ಗ್ರಾಹಕ ಸೇವೆಯನ್ನು ಮತ್ತಷ್ಟು ಚುರುಕುಗೊಳಿಸುವ ಜೊತೆಗೆ, ಲಾಭದಾಯಕತೆಯ ದೃಷ್ಟಿಯಿಂದ ಹೊಸ ಮೈಲಿಗಲ್ಲು ತಲುಪುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+