ನಮಗೆ ವಂದೇ ಮಾತರಂ ಹೇಳಲು ಹಕ್ಕು ಇದೆಯೇ? : ಮೋದಿ ಪ್ರಶ್ನೆ

Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 11: "ನಮಗೆ ವಂದೇ ಮಾತರಂ ಹೇಳಲು ಹಕ್ಕು ಇದೆಯೇ? ನಾವು ಕೊಚ್ಚೆಯನ್ನು ಭಾರತ ಮಾತೆಯ ಮೇಲೆ ಚೆಲ್ಲಿ, ವಂದೇ ಮಾತರಂ ಹೇಳುವಂಥವರು," ಎಂದು ಪ್ರಧಾನಿ ನರೇಂದ್ರ ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ.

ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ 125ನೇ ವರ್ಷಾಚರಣೆ ಹಾಗೂ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮ ಶತಮಾನೋತ್ಸವದ ಹಿನ್ನಲೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಅವರು ಮಾತನಾಡಿದರು.

Swami Vivekananda raised his voice against social evils : PM Narendra Modi

"ಸ್ವಾಮಿ ವಿವೇಕಾನಂದರು ಸಮಾಜಿಕ ಪಿಡುಗುಗಳ ವಿರುದ್ಧ ಧ್ವನಿ ಎತ್ತಿದ್ದರು. ಕೆಲವೇ ಶಬ್ದಗಳಲ್ಲಿ ಅವರು ಜಗತ್ತನ್ನೇ ಗೆದ್ದಿದ್ದರು. ಮತ್ತು ಜಗತ್ತಿಗೆ ಏಕತೆಯ ಶಕ್ತಿಯನ್ನು ತೋರಿಸಿದ್ದರು," ಎಂದು ನರೇಂದ್ರ ಮೋದಿ ಹೇಳಿದರು.

"ಇವತ್ತು 9/11. 2001ರ (ಅಮೆರಿಕಾ ವರ್ಲ್ಡ್ ಟ್ರೇಡ್ ಸೆಂಟರ್ ಮೇಲಿನ ದಾಳಿ) ನಂತರ ಈ ದಿನದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಆದರೆ 1893ರ ಇನ್ನೊಂದು 9/11 ನಡೆಯಿತು. ಅದನ್ನು ನಾವಿವತ್ತು ನೆನಪಿಸಿಕೊಳ್ಳುತ್ತಿದ್ದೇವೆ. ಈ 9/11 ಪ್ರೀತಿ, ಸಹೋದರತ್ವ ಮತ್ತು ಸೌಹಾರ್ದತೆಯ ಪ್ರತೀಕ," ಎಂದು ನರೇಂದ್ರ ಮೋದಿಯವರು ವಿವೇಕಾನಂದರ ಚಿಕಾಗೋ ಭಾಷಣದ ಕುರಿತು ಹೇಳಿದರು.

ಆಚರಣೆಗಳು ಮಾತ್ರ ನಮ್ಮನ್ನು ದೇವರ ಸಮೀಪಕ್ಕೆ ಕರೆದೊಯ್ಯುವುದಿಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು. 'ಜನ ಸೇವೆಯೇ ಪ್ರಭು ಸೇವೆ' ಎಂದ ವಿವೇಕಾನಂದರು, ದೇವರಿಗಿಂತ ಹೆಚ್ಚಾಗಿ ಸತ್ಯವನ್ನು ಹುಡುಕಾಡುತ್ತಿದ್ದರು ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

ವಿವೇಕಾನಂದರು ಧರ್ಮೋಪದೇಶದಲ್ಲಿ ನಂಬಿಕೆ ಇಟ್ಟುಕೊಂಡಿರಲಿಲ್ಲ. ರಾಮಕೃಷ್ಣ ಆಶ್ರಮದ ಮೂಲಕ ಅವರ ಚಿಂತನೆಗಳು ಮತ್ತು ಸಿದ್ಧಾಂತಗಳು ಸಾಂಸ್ಥಿಕ ಚೌಕಟ್ಟನ್ನು ಪಡೆದುಕೊಂಡವು ಎಂದ ಪ್ರಧಾನಿ ಮೋದಿ, ಸ್ವಾಮೀಜಿಯವರಿಗೆ ಭಾರತದ ಸ್ವಾಲಂಬನೆಯ ಬಗ್ಗೆ ಕಾಳಜಿಯಿತ್ತು. ಇದಕ್ಕೆ ವಿವೇಕಾನಂದರು ಮತ್ತು ಜೆಮ್ಶೆಡ್ಜಿ ಟಾಟಾ ನಡುವಿನ ಹೊಂದಾಣಿಕೆಯೇ ಉದಾಹರಣೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime minister Narendra Modi addresses on the occasion of Pandit Deendayal Upadhyay's centenary celebrations and 125th anniversary of Swami Vivekananda's Chicago address.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ