• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ- ಬಾಂಗ್ಲಾ ಗಡಿಯಲ್ಲಿ ಅನುಮಾನಾಸ್ಪದ ಚಟುವಟಿಕೆ: ಚೀನಾದ ವ್ಯಕ್ತಿ ಬಂಧನ

|
Google Oneindia Kannada News

ನವದೆಹಲಿ, ಜೂನ್ 10: ಭಾರತ ಹಾಗೂ ಬಾಂಗ್ಲಾದೇಶದ ಗಡಿ ಪ್ರದೇಶದಲ್ಲಿ ಅನುಮಾನಾಸ್ಪದ ಚಟುವಟಿಕೆಯನ್ನು ನಡೆಸುತ್ತಿದ್ದ 35 ವರ್ಷದ ಚೀನಾ ಮೂಲದ ವ್ಯಕ್ತಿಯನ್ನು ಗಡಿ ಭದ್ರತಾ ಪಡೆಯ ಸಿಬ್ಬಂದಿಗಳು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಮಲ್ಡಾ ಜಿಲ್ಲೆಯ ಗಡಿ ಪ್ರದೇಶದ ಸಮೀಪ ಈಗ "ಅನುಮಾನಾಸ್ಪದ ಚಟುವಟಿಕೆ"ಯಲ್ಲಿ ನಿರತನಾಗಿದ್ದ ಎಂದು ತಿಳಿದು ಬಂದಿದೆ.

ಚೀನಾದ ಪಾಸ್‌ಪೋರ್ಟ್ ಹೊಂದಿದ್ದ ಈತನ ಬಳಿ ಬಾಂಗ್ಲಾದೇಶದ ವೀಸಾ ದೊರೆತಿದೆ. ಒಂದು ಲ್ಯಾಪ್‌ಟಾಪ್ ಹಾಗೂ ಮೂರು ಸಿಮ್‌ಕಾರ್ಡ್‌ಗಳನ್ನು ಈತನಿಂದ ವಶಕ್ಕೆ ಪಡೆಯಲಾಗಿದೆ. ಆತನಲ್ಲಿದ್ದ ದಾಖಲೆಗಳಲ್ಲಿ ಇತನ ಹೆಸರು ಹಾನ್ ಜುನ್ವೇ ಎಂಬುದಾಗಿ ಇದೆ ಎಂದು ಭದ್ರತಾ ಪಡೆಗಳು ತಿಳಿಸಿದೆ.

"ಚೀನಾ- ಭಾರತ ಪರಸ್ಪರ ಸಹಕರಿಸಬೇಕೇ ವಿನಾ ವಿರುದ್ಧ ನಿಲ್ಲಬಾರದು"

"ಬೆಳಗ್ಗೆ 7 ಗಂಟೆಯ ವೇಳೆಗೆ ಗಡಿ ಪ್ರದೇಶದಲ್ಲಿ ಈತನನ್ನು ತಡೆಹಿಡಿದು ವಶಕ್ಕೆ ಪಡೆದುಕೊಳ್ಳಾಗಿದೆ. ಆತನನ್ನು ಕಲಿಯಾಚಕ್ ಪೋಸ್ಟ್‌ಗೆ ಕರೆತರಲಾಗಿದ್ದು ಇತರ ಭದ್ರತಾ ಏಜೆನ್ಸಿಗಳಿಗೆ ಮಾಹಿತಿಯನ್ನು ನೀಡಲಾಗಿದೆ. ಆತನನ್ನು ಈಗ ಪ್ರಶ್ನಿಸಲಾಗುತ್ತಿದೆ" ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ಎನ್‌ಡಿಟಿವಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ವಿವರಿಸಿದ್ದಾರೆ.

"ಒಳನುಸುಳಿದ್ದ ವ್ಯಕ್ತಿಗೆ ಇಂಗ್ಲೀಷ್ ಬಾರದ ಕಾರಣ ಆರಂಭದಲ್ಲಿ ವಿಚಾರಣೆಗೆ ಕಷ್ಟವಾಯಿತು. ಆ ನಂತರ ಮ್ಯಾಂಡರಿನ್ ಭಾಷೆ ಬಲ್ಲ ಭದ್ರತಾ ಅಧಿಕಾರಿಯೊಬ್ಬರನ್ನು ಕರೆಸಲಾಗಿದೆ. ಆತನನ್ನು ಈಗ ಗುಪ್ತಚರ ಸಂಸ್ಥೆಗಳು ವಿಚಾರಣೆ ನಡೆಸುತ್ತಿವೆ" ಎಂದು ಅಧಿಕಾರಿ ಮಾಹಿತಿಯನ್ನು ನೀಡಿದ್ದಾರೆ.

ಮಾಲ್ಡಾ ಜಿಲ್ಲೆ ಬಾಂಗ್ಲಾದೇಶದೊಂದಿಗೆ ಅಂತಾರಾಷ್ಟ್ರೀಯ ಗಡಿಯನ್ನು ಹಂಚಿಕೊಳ್ಳುತ್ತಿದ್ದು ಹೆಚ್ಚಿನ ಭದ್ರತೆಯನ್ನು ಹೊಂದಿಲ್ಲದ ಪ್ರದೇಶವಾಗಿದೆ. ಹೀಗಾಗಿ ಈ ಗಡಿ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳು ಸಾಮಾನ್ಯವೆಂಬಂತೆ ನಡೆಯುತ್ತಿರುತ್ತದೆ.

ಹಾನ್ ಜುನ್ವೇ ಒಬ್ಬನೇ ಭಾರತದ ಗಡಿ ಪ್ರದೇಶವನ್ನು ಪ್ರವೇಶಿಸಿದ್ದಾನೆಯೇ ಅಥವಾ ಬೇರೆ ಯಾರಾದರೂ ಆತನೊಂದಿಗೆ ಭಾರತ ಗಡಿ ಪ್ರದೇಶವನ್ನು ನುಸುಳಿದ್ದಾರೆಯೇ ಎಂಬ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ. ಜೊತೆಗೆ ಬಾಂಗ್ಲಾದೇಶಕ್ಕೆ ತೆರಳಿರುವ ಉದ್ದೇಶದ ಬಗ್ಗೆಯೂ ಈತನಿಂದ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ.

English summary
Over "Suspicious Activities" a 35 year old Chinese man was arrested at the India-Bangladesh border. The officers found a Chinese passport, a Bangladeshi visa, a laptop, and three SIM cards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X