ಜೈಪುರದ ಬಳಿ ಪಾಕಿಸ್ತಾನದ ಶಂಕಿತ ಗೂಢಾಚಾರಿ ಬಂಧನ

Posted By:
Subscribe to Oneindia Kannada

ಜೈಪುರ, ಫೆಬ್ರವರಿ 12: ಇಲ್ಲಿಗೆ ಸಮೀಪದ ಭಾರತ- ಪಾಕಿಸ್ತಾನ ಗಡಿ ಭಾಗದಲ್ಲಿರುವ ಜೈಸ್ಲಾಮರ್ ನಲ್ಲಿ ಪಾಕಿಸ್ತಾನದವನೆಂದು ಹೇಳಲಾದ ಶಂಕಿತ ಗೂಢಾಚಾರನನ್ನು ಬಂಧಿಸಲಾಗಿದೆ.

ಬಂಧಿತನನು ಸಾಧಿಕ್ ಎಂಬ ಹೆಸರಿನಿಂದ ತನ್ನನ್ನು ತಾನು ಪರಿಚಯಿಸಿಕೊಂಡಿದ್ದು, ಆತನಿಂದ ವಶಪಡಿಸಿಕೊಳ್ಳಲಾದ ಕೆಲವಾರು ವಸ್ತುಗಳನ್ನು ತಪಾಸಣೆಗೊಳಪಡಿಲಾಗಿದೆ ಎಂದು ಜೈಪುರ ಪೊಲೀಸರು ತಿಳಿಸಿದ್ದಾರೆ.

Suspected Pakistani spy arrested near Indo-Pak border in Jaisalmer

ಈತ ವಿರುದ್ಧ 1929ರ ಅಧಿಕೃತ ರಹಸ್ಯಗಳ ಕಾಯ್ದೆಯ ಪ್ರಕರಣದ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ವಾರವಷ್ಟೇ, ಇದೇ ಪ್ರಾಂತ್ಯದಲ್ಲಿ ಸುಮಾರು 11 ಮಂದಿಯ ಶಂಕಿತ ಗೂಢಾಚಾರರ ತಂಡವೊಂದನ್ನು ಬಂಧಿಸಲಾಗಿತ್ತು. ಇನ್ನು, ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ರಾಜಸ್ತಾನ ಪೊಲೀಸರು ಪಾಕಿಸ್ತಾನಕ್ಕೆ ಸೇರಿದವರನೆನ್ನಲಾದ ಶಂಕಿತ ಗೂಢಾಚಾರಿಯನ್ನೊಬ್ಬನನ್ನು ಬಂಧಿಸಿದ್ದರು.

ಇವರೆಲ್ಲರೂ ಪಾಕಿಸ್ತಾನದ ಐಎಸ್ಐನಿಂದ ತರಬೇತಿ ಪಡೆದು ಭಾರತದೊಳಕ್ಕೆ ನುಸುಳಿದ್ದಾರೆಂದು ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Jaipura police has arrested a suspected spy from Pakistan near Jaisalmer of Jaipur on Sunday. This is the second incident within one week of time as police arrested 11 men team suspected spies trained from Pakistan's ISI.
Please Wait while comments are loading...