ಅಮೆಜಾನ್ ವಿರುದ್ಧ ಸುಷ್ಮಾ ಸ್ವರಾಜ್ ಕೆಂಡಾಮಂಡಲ
ಆನ್ ಲೈನ್ ಶಾಪಿಂಗ್ ತಾಣ ಅಮೆಜಾನ್.ಕಾಂನಲ್ಲಿ ದೊರೆಯುವ ಡೋರ್ ಮ್ಯಾಟ್ ಗಳ ಮೇಲೆ ಭಾರತದ ತ್ರಿವರ್ಣ ಧ್ವಜ ಮುದ್ರಿಸಿರುವುದನ್ನು ಕಂಡು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಕೆಂಡಾಮಂಡಲವಾಗಿದ್ದಾರೆ
ನವದೆಹಲಿ, ಜನವರಿ 11: ಆನ್ ಲೈನ್ ಶಾಪಿಂಗ್ ತಾಣ ಅಮೆಜಾನ್.ಕಾಂನಲ್ಲಿ ದೊರೆಯುವ ಡೋರ್ ಮ್ಯಾಟ್ ಗಳ ಮೇಲೆ ಭಾರತದ ತ್ರಿವರ್ಣ ಧ್ವಜ ಮುದ್ರಿಸಿರುವುದನ್ನು ಕಂಡು ಕೆಂಡಾಮಂಡಲವಾದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಕೂಡಲೇ ಕ್ಷಮೆಯಾಚಿಸುವಂತೆ ಅಮೆಜಾನ್ ಸಂಸ್ಥೆಗೆ ಸೂಚಿಸಿದ್ದಾರೆ. ಇಲ್ಲದಿದ್ದರೆ ವೀಸಾ ದೊರೆಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಆನ್‌ಲೈನ್ ನಲ್ಲಿ ಪ್ರಕಟವಾಗಿರುವ ಜಾಹೀರಾತು ಹಿಂಪಡೆಯಬೇಕು, ಇಲ್ಲದಿದ್ದರೆ ಕಂಪನಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಸುಷ್ಮಾ ಎಚ್ಚರಿಸಿದ್ದಾರೆ.

ಭಾರತದ ರಾಷ್ಟ್ರಧ್ವಜಕ್ಕೆ ಅಗೌರವ ಸೂಚಿಸಿರುವ ಅಮೆಜಾನ್ ಸಂಸ್ಥೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಸಂಸ್ಥೆಯ ಉತ್ಪನ್ನವನ್ನು ವೆಬ್‍ಸೈಟ್‍ನಿಂದ ತೆಗೆದು ಹಾಕಬೇಕು ಎಂದು Change.org ಅಭಿಯಾನ ಆರಂಭಿಸಿದೆ.
Amazon must tender unconditional apology. They must withdraw all products insulting our national flag immediately. /1
— Sushma Swaraj (@SushmaSwaraj) January 11, 2017
ಭಾರತದ ರಾಷ್ಟ್ರಧ್ವಜ ಕಾಯ್ಕದೆ ಪ್ರಕಾರ ರಾಷ್ಟ್ರಧ್ವಜವನ್ನು ವಾಣಿಜ್ಯ ಉದ್ದೇಶಿತವಾದ ಯಾವುದೇ ರೀತಿಯ ಉತ್ಪನ್ನಗಳಿಗಾಗಿ ಬಳಸುವಂತಿಲ್ಲ.
If this is not done forthwith, we will not grant Indian Visa to any Amazon official. We will also rescind the Visas issued earlier.
— Sushma Swaraj (@SushmaSwaraj) January 11, 2017
ಈ ಹಿಂದೆ ಕೂಡಾ ದೇವರುಗಳ ಚಿತ್ರವನ್ನು ಡೋರ್ ಮ್ಯಾಟ್ ಗಳ ಮೇಲೆ ಚಿತ್ರಿಸಿ ಆನ್ ಲೈನ್ ನಲ್ಲಿ ಮಾರಾಟಕ್ಕಿಟ್ಟಿದ್ದ ಅಮೆಜಾನ್ ವಿರುದ್ಧ ಭಾರಿ ಪ್ರತಿಭಟನೆ ನಡೆದಿತ್ತು. (ಒನ್ ಇಂಡಿಯಾ ಸುದ್ದಿ)












Click it and Unblock the Notifications