ನೂತನ ಚುನಾವಣಾ ಆಯುಕ್ತರಾಗಿ ಸುಶಿಲ್ ಚಂದ್ರ ಅಧಿಕಾರ ಸ್ವೀಕಾರ!

ನವದೆಹಲಿ, ಫೆಬ್ರವರಿ 15: ಭಾರತದ ನೂತನ ಚುನಾವಣಾ ಆಯುಕ್ತರಾಗಿ ಸುಶಿಲ್​ ಚಂದ್ರ ಅವರು ಶುಕ್ರವಾರದಂದು ಅಧಿಕಾರ ಸ್ವೀಕರಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಮತ್ತು ಚುನಾವಣಾ ಆಯುಕ್ತ ಅಶೋಕ್​ಲಾವಾಸ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

1957ರ ಮೇ 15ರಂದು ಜನಿಸಿರುವ ಸುಶಿಲ್ ಚಂದ್ರ ಅವರು ಭಾರತೀಯ ಕಂದಾಯ ಸೇವೆಯ (ಐಆರ್​ಎಸ್​) 1980ನೇ ಬ್ಯಾಚಿಗೆ ಸೇರಿದವರು. ಐಆರ್​ಎಸ್​ ಅಧಿಕಾರಿಯಾಗಿ ಇವರು ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ, ಗುಜರಾತ್​ಮತ್ತು ಮಹಾರಾಷ್ಟ್ರಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ರೂರ್ಕಿ ವಿಶ್ವವಿದ್ಯಾಲಯದಿಂದ ಪದವಿ, ಡೆಹ್ರಾಡೂನ್ ಡಿಎವಿ ಕಾಲೇಜಿನಲ್ಲಿ ಕಾನೂನು ಪದವಿ ಪಡೆದುಕೊಂಡಿದ್ದಾರೆ. ಇಂಟರ್​ನ್ಯಾಷನಲ್​ಟ್ಯಾಕ್ಸೇಷನ್​ ಮತ್ತು ಇನ್​ವೆಸ್ಟಿಗೇಷನ್​ವಿಭಾಗದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ.

Sushil Chandra takes charge as new Election Commissioner

ಭಾರತ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸುವುದಕ್ಕೂ ಮುನ್ನ ಸುಶಿಲ್​ ಚಂದ್ರ ಅವರು ಕೇಂದ್ರೀಯ ನೇರ ತೆರಿಗೆಗಳ ನಿಗಮ(ಸಿಬಿಡಿಟಿ)ದ ಚೇರ್ಮನ್​ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮುಂಬೈ, ಗುಜರಾತಿನ ಡಿಜಿ ತನಿಖಾ ವಿಭಾಗದಲ್ಲಿದ್ದರು. ಸಿಂಗಪುರ ವಾರ್ಟನ್, ಐಐಎಂ ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+