ಮೂರು ವರ್ಷದ ಬಾಲಕಿ ಮೇಲೆ ನೆರೆ ಮನೆಯಾತನಿಂದ ಅತ್ಯಾಚಾರ

ಸೂರತ್ (ಗುಜರಾತ್), ಅಕ್ಟೋಬರ್ 16: ಮೂರು ವರ್ಷದ ಬಾಲಕಿ ಮೇಲೆ ನೆರೆ ಮನೆಯಾತ ಅತ್ಯಾಚಾರ ಎಸಗಿ, ಆ ನಂತರ ಕೊಲೆ ಮಾಡಿದ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ. ಬಿಹಾರ ಮೂಲದ ವ್ಯಕ್ತಿಯೊಬ್ಬ ಹಿಮ್ಮತ್ ನಗರ್ ಜಿಲ್ಲೆಯಲ್ಲಿ ಹದಿನಾಲ್ಕು ತಿಂಗಳ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದ. ಆತನನ್ನು ಬಂಧಿಸಲಾಗಿತ್ತು.

ಈ ಘಟನೆ ಸಂಭವಿಸಿದ ಮೇಲೆ ವಲಸಿಗ ಕಾರ್ಮಿಕರ ಮೇಲೆ ಜನರು ಆಕ್ರೋಶ ವ್ಯಕ್ತಪಡಿಸಿ, ಹಿಂಸಾಚಾರ ನಡೆದಿತ್ತು. "ಮೂರು ವರ್ಷದ ಮಗು ಅಕ್ಟೋಬರ್ ಹದಿಮೂರರಿಂದ ನಾಪತ್ತೆಯಾಗಿತ್ತು. ಮಗುವಿನ ಶವವನ್ನು ಪಾಲಿಥೀನ್ ಬ್ಯಾಗ್ ನಲ್ಲಿ ಇರಿಸಿದಂತೆ ನೆರೆಮನೆಯಲ್ಲಿನ ಮುಚ್ಚಿದ ಕೋಣೆಯಲ್ಲಿ ಅಕ್ಟೋಬರ್ ಹದಿನೈದನೇ ತಾರೀಕಿನ ಸಂಜೆ ಪತ್ತೆಯಾಗಿದೆ" ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎರಡು ಅಂತಸ್ತಿನ ಕಟ್ಟಡದಲ್ಲಿ ಬಿಹಾರ ಮೂಲದ ವ್ಯಕ್ತಿ ಆ ಕೋಣೆ ಬಾಡಿಗೆಗೆ ಪಡೆದಿದ್ದ. ಹದಿನೆಂಟರಿಂದ ಇಪ್ಪತ್ತು ವರ್ಷದ ಆತನ ಹೆಸರು ಅನಿಲ್ ಯಾದವ್ ಎಂದು ತಿಳಿದುಬಂದಿದೆ. ಶನಿವಾರ ರಾತ್ರಿಯಿಂದ ಆತ ನಾಪತ್ತೆ ಆಗಿದ್ದಾನೆ. ಅದೇ ಕಟ್ಟಡದ ಮೊದಲ ಅಂತಸ್ತಿನಲ್ಲಿ ತಂದೆ-ತಾಯಿ ಜತೆಗೆ ಆ ಬಾಲಕಿ ವಾಸವಿದ್ದಳು.

Surat girl, 3, raped and killed allegedly by neighbour

"ಸಿಸಿಟಿವಿ ಫೂಟೇಜ್ ನಲ್ಲಿ ಕಂಡುಬಂದಿರುವಂತೆ ಸೊಸೈಟಿ ಗೇಟ್ ನಿಂದ ಆಚೆಗೆ ಆಕೆ ತೆರಳಿಲ್ಲ. ಆ ಕಾರಣಕ್ಕೆ ಸೊಸೈಟಿ ಒಳಗೆ ತಪಾಸಣೆ ನಡೆಸಲಾಯಿತು. ಅಕ್ಟೋಬರ್ ಹದಿನೈದರ ಸಂಜೆ ಯಾದವ್ ಮನೆಯ ಬಾಗಿಲನ್ನು ಒಡೆದು, ಒಳ ಪ್ರವೇಶಿಸಿದಾಗ ಶವ ಪತ್ತೆಯಾಯಿತು" ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಆರೋಪಿಯನ್ನು ಬಂಧಿಸುವ ತನಕ ಶವವನ್ನು ಪಡೆಯುವುದಿಲ್ಲ ಎಂದು ಬಾಲಕಿಯ ಪೋಷಕರು ಹೇಳಿದ್ದಾರೆ. ಶಂಕಿತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಆ ಸಮುದಾಯದ ಇತರರೂ ಸೇರಿ ಆಸ್ಪತ್ರೆಯ ಹೊರಭಾಗ ಪ್ರತಿಭಟನೆ ನಡೆಸಿದ್ದಾರೆ.

ಆರೋಪಿಯ ಬಂಧನಕ್ಕಾಗಿ ಎರಡು ತಂಡ ಬಿಹಾರಕ್ಕೆ ಹೋಗಿದೆ. ಬಾಲಕಿಯ ಶವ ಪಡೆದು ಅಂತ್ಯಸಂಸ್ಕಾರ ನಡೆಸುವಂತೆ ಆ ಕುಟುಂಬದವರ ಜತೆ ಪೊಲೀಸರು ಮಾತನಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+