ಎಸ್‌ಸಿ/ಎಸ್‌ಟಿ ಕಾಯ್ದೆ ವಿವಾದ: ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ

Recommended Video

      ಎಸ್/ಎಸ್ ಟಿ ಕಾಯ್ದೆ ವಿವಾದ : ಸುಪ್ರೀಂ ಕೋರ್ಟ್ ನಲ್ಲಿ ಫೆಬ್ರವರಿ 19ರಂದು ವಿಚಾರಣೆ | Oneindia Kannada

      ನವದೆಹಲಿ, ಜನವರಿ 30: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ತಿದ್ದುಪಡಿ ಕಾಯ್ದೆ (ದೌರ್ಜನ್ಯ ತಡೆ), 2018ಅನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಅಂತಿಮ ವಿಚಾರಣೆಯನ್ನು ಸುಪ್ರೀಂಕೋರ್ಟ್ ಫೆಬ್ರುವರಿ 19ರಂದು ನಿಗದಿಪಡಿಸಿದೆ.

      ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ವಿರುದ್ಧ ಜಾತಿ ನಿಂದನೆ ಪ್ರಕರಣದಲ್ಲಿ ಆರೋಪಿಯಾದ ವ್ಯಕ್ತಿಯನ್ನು ದೂರು ದಾಖಲಾದ ಕೂಡಲೇ ಬಂಧಿಸಬಾರದು ಮತ್ತು ಎಫ್‌ಐಆರ್ ಸಿದ್ಧಪಡಿಸಬಾರದು ಎಂದು ಸುಪ್ರೀಂಕೋರ್ಟ್ ಮಾರ್ಚ್ 20ರಂದು ತೀರ್ಪು ನೀಡಿತ್ತು.

      ಸಂಸತ್‌ನಲ್ಲಿ ಅನುಮೋದನೆಗೊಂಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ತಿದ್ದುಪಡಿ ಕಾಯ್ದೆ, 2018ಯನ್ನು ಅನುಷ್ಠಾನಗೊಳಿಸುವುದಕ್ಕೆ ತಡೆ ನೀಡಲು ನ್ಯಾಯಮೂರ್ತಿಗಳಾದ ಉದಯ್ ಲಲಿತ್ ಮತ್ತು ಇಂದೂ ಮಲ್ಹೋತ್ರಾ ಅವರನ್ನು ಒಳಗೊಂಡ ನ್ಯಾಯಪೀಠ ನಿರಾಕರಿಸಿತ್ತು.

      Supreme court to hear pleas against amendments sc st act on february 19

      ತಿದ್ದುಪಡಿ ಮತ್ತು ಮಾರ್ಚ್ 20ರ ತೀರ್ಪಿನ ವಿರುದ್ಧದ ಪರಾಮರ್ಶೆಯ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆಗೆ ಒಳಪಡಿಸಬೇಕು ಎಂದು ನ್ಯಾಯಾಲಯ ಹೇಳಿತ್ತು.

      ಮಾರ್ಚ್ 20ರಂದು ತೀರ್ಪು ನೀಡಿದ್ದ ಕೋರ್ಟ್, ಕಾಯ್ದೆಯಡಿ ದೂರು ದಾಖಲಾದ ಕೂಡಲೇ ಆರೋಪಿಯನ್ನು ಬಂಧಿಸುವಂತಿಲ್ಲ ಎಂದು ಹೇಳಿತ್ತು. ಅಲ್ಲದೆ, ಕಾಯ್ದೆಯ ಅಡಿ ನಿರೀಕ್ಷಣಾ ಜಾಮೀನು ಅನುಕೂಲತೆಯನ್ನೂ ಒಳಪಡಿಸಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+