ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ‘ಸುಪ್ರೀಂ’ ಮಹತ್ವದ ತೀರ್ಪು
ನವದೆಹಲಿ: ಇಡೀ ದೇಶದ ಗಮನ ಸೆಳೆದಿದ್ದ ಜ್ಞಾನವಾಪಿ ಮಸೀದಿ ಕೇಸ್‌ಗೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಹೊರಬಿದ್ದಿದ್ದು, 'ಶಿವಲಿಂಗ' ವೈಜ್ಞಾನಿಕ ಸಮೀಕ್ಷೆಗೆ ಅನುಮತಿ ನೀಡಿದ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಈ ಮೂಲಕ ಜ್ಞಾನವಾಪಿ ಮಸೀದಿ (Gyanvapi Mosque) ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಂತಾಗಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.
ಅಂದಹಾಗೆ ಅಲಹಾಬಾದ್ ಹೈಕೋರ್ಟ್ ಜ್ಞಾನವಾಪಿ ಮಸೀದಿಯಲ್ಲಿ ಕಂಡುಬಂದ ವಿಗ್ರಹ ಹಿಂದೂಗಳ ಶಿವಲಿಂಗವೇ ಎಂದು ನಿರ್ಧರಿಸಲು ವೈಜ್ಞಾನಿಕ ಸಮೀಕ್ಷೆಗೆ ಆದೇಶಿಸಿತ್ತು. ವೈಜ್ಞಾನಿಕ ಸಮೀಕ್ಷೆಯು ಮಸೀದಿಯೊಳಗೆ ಶಿವಲಿಂಗವಿದೆ ಎಂದು ಹೇಳಿತ್ತು. ಈ ಆದೇಶದ ವಿರುದ್ಧ ಜ್ಞಾನವಾಪಿ ಮಸೀದಿ ಆಡಳಿತ ಸಮಿತಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದ್ದು, ಜ್ಞಾನವಾಪಿ ಮಸೀದಿ (Gyanvapi Mosque) ಸಲ್ಲಿಸಿದ್ದ ಅರ್ಜಿ ಸಂಬಂಧ ಈ ತೀರ್ಪು ಹೊರಬಿದ್ದಿದೆ. ಹಾಗಾದ್ರೆ ಈ ವಿವಾದ ಶುರುವಾಗಿದ್ದು ಹೇಗೆ? ಸಂಪೂರ್ಣ ಮಾಹಿತಿ ಮುಂದೆ ಓದಿ.

ಅಂತಿಮ ತೀರ್ಪಿಗೂ ಮುನ್ನವೇ ಸರ್ವೆಗೆ ಆದೇಶ?
ಅಷ್ಟಕ್ಕೂ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಪೀಠವು ಅರ್ಜಿಯನ್ನು ತಕ್ಷಣವೇ ವಿಚಾರಣೆಗೆ ಕೈಗೆತ್ತಿಕೊಳ್ಳಲು ಒಪ್ಪಿಗೆ ಸೂಚಿಸಿತ್ತು. ಮಸೀದಿ ಆಡಳಿತ ಸಮಿತಿ ಪರವಾಗಿ ಹಿರಿಯ ವಕೀಲ ಹುಝೆಫಾ ಅಹ್ಮದಿ ವಾದ ಮಂಡಿಸಿದ್ದಾರೆ. ಅಂತಿಮ ತೀರ್ಪಿಗೂ ಮುನ್ನವೇ ಸರ್ವೆ ನಡೆಸುವಂತೆ ಹೈಕೋರ್ಟ್ ಆದೇಶಿಸಿತ್ತು. ಈ ಹಿನ್ನೆಲೆ ಮಹತ್ವದ ತೀರ್ಪು ಹೊರಬಿದ್ದಿದ್ದು, ಶಿವಲಿಂಗ ವೈಜ್ಞಾನಿಕ ಸಮೀಕ್ಷೆಗೆ ಅನುಮತಿ ನೀಡಿದ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಹಾಗಾದ್ರೆ ಇಲ್ಲಿ ವಿವಾದ ಶುರುವಾಗಿದ್ದು ಹೇಗೆ?
ಈ ವಿವಾದ ಶುರುವಾಗಿದ್ದು ಹೇಗೆ?
ಪ್ರಸಕ್ತ ಸ್ಥಳ ವರ್ಷಕ್ಕೆ ಒಮ್ಮೆ ಮಾತ್ರ ಪ್ರಾರ್ಥನೆಗೆ ತೆರೆಯುತ್ತದೆ. ಅಲ್ಲಿ ನಿತ್ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಮತ್ತು ಹಳೆಯ ದೇವಸ್ಥಾನ ಸಂಕೀರ್ಣದೊಳಗೆ ಇರುವ ಕಾಣಿಸುವ ಹಾಗೂ ಕಾಣಿಸದ ದೇವತೆಗಳಿಗೆ ಕೂಡ ಪೂಜೆಗೆ ಅನುಮತಿ ಕೊಡಬೇಕು ಎಂದು ಮಹಿಳೆಯರು ಮನವಿ ಮಾಡಿದ್ದರು. ಆದರೆ ಇದು ದೇವಸ್ಥಾನವಲ್ಲ ಇದು ಮಸೀದಿ, ಜೊತೆಗೆ ಇಲ್ಲಿ ಯಾವುದೇ ವಿಗ್ರಹಗಳಿಲ್ಲ ಎಂದು ಮಸೀದಿ ಆಡಳಿತ ಸಮಿತಿ ವಾದಿಸುತ್ತಾ ಬಂದಿತ್ತು. ಹೀಗಾಗಿಯೇ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಕೋರ್‌ನಲ್ಲಿ ಏನಾಯ್ತು ಎಂಬುದರ ಮಾಹಿತಿ ತಿಳಿಯೋಣ.

ವಿವಾದ ಕೋರ್ಟ್ ಮೆಟ್ಟಿಲೇರಿದ್ದು ಹೇಗೆ?
ಇನ್ನು ಜ್ಞಾನವ್ಯಾಪಿ ಮಸೀದಿ ಸಂಕೀರ್ಣದಲ್ಲಿನ ಪಶ್ಚಿಮ ಗೋಡೆಯ ಹಿಂದೆ ಇರುವ ಹಿಂದೂ ದೇಗುಲಕ್ಕೆ ವರ್ಷ ಪೂರ್ತಿ ದರ್ಶನ ಮತ್ತು ಪೂಜೆ ಅವಕಾಶ ಕಲ್ಪಿಸಬೇಕು ಎಂದು ಕೋರಿ ಐವರು ಹಿಂದೂ ಮಹಿಳೆಯರು ಕೋರಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ್ದ ಕೋರ್ಟ್ ತಪಾಸಣೆ ನಡೆಸುವಂತೆ ಆದೇಶಿಸಿತ್ತು. ಇನ್ನು ತಪಾಸಣೆ ನಡೆಸುವ ವೇಳೆ ಒಳಗಡೆ ಶಿವಲಿಂಗ ಆಕಾರದಂತಿರುವ ವಸ್ತು ಪತ್ತೆಯಾಗಿದೆ ಎನ್ನಲಾಗಿತ್ತು. ಇದನ್ನು ಹಿಂದೂಗಳು ಶಿವಲಿಂಗ ಎಂದು ಕರೆದರೆ ಮಸೀದಿಯು ಕಾರಂಜಿ ಎಂದು ಕರೆದಿತ್ತು. ಹೀಗಾಗಿ ಈ ವಿಚಾರ ಇನ್ನೂ ಕೋರ್ಟ್‌ನಲ್ಲಿದೆ.
ಒಟ್ಟಾರೆ ಹೇಳುವುದಾದರೆ ಈ ಮಹತ್ವದ ಕೇಸ್‌ನಲ್ಲಿ ಇಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಶಿವಲಿಂಗ ವೈಜ್ಞಾನಿಕ ಸಮೀಕ್ಷೆಗೆ ಅನುಮತಿ ನೀಡಿದ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಈ ಮೂಲಕ ಜ್ಞಾನವಾಪಿ ಮಸೀದಿ ಕೇಸ್‌ಗೆ ದೊಡ್ಡ ತಿರುವು ಸಿಕ್ಕಂತಾಗಿದೆ. ಇದರ ನಡುವೆ ಈ ಕೇಸ್‌ನ ಅಂತಿಮ ತೀರ್ಪಿಗೆ ಜ್ಞಾನವ್ಯಾಪಿ ಮಸೀದಿ ಆಡಳಿತ ಸಮಿತಿ ಮತ್ತು ಭಕ್ತರು ಕಾಯುತ್ತಿದ್ದಾರೆ. ಕೋರ್ಟ್ ತೀರ್ಪಿನಲ್ಲಿ ಯಾರಿಗೆ ಜಯವಾಗುತ್ತೆ? ಎಂಬ ವಿಚಾರವನ್ನ ಕಾದು ನೋಡಬೇಕಿದೆ.












Click it and Unblock the Notifications