ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಪ್ಪುರಂಧ್ರದ ಬಳಿ ಬೃಹತ್ ಜ್ವಾಲೆ ಪತ್ತೆ ಹಚ್ಚಿದ ನಾಸಾ

|
Google Oneindia Kannada News

ನ್ಯೂಯಾರ್ಕ್, ಜ. 7: ನಮ್ಮ ಗ್ಯಾಲಕ್ಸಿ ಕ್ಷೀರ ಪಥದ ಮಧ್ಯದಲ್ಲಿ ಬೃಹತ್ ಗಾತ್ರದ ಕಪ್ಪು ರಂಧ್ರವೊಂದರ ಬಳಿ ಬೃಹತ್ ಬೆಂಕಿ ಜ್ವಾಲೆ ಇರುವುದನ್ನು ನಾಸಾದ 'ಚಂದ್ರ ಎಕ್ಸ್ ರೆ ಅಬ್ಸರ್ವೇಟರಿ' ಪತ್ತೆಹಚ್ಚಿದೆ. ನಾಸಾ ಈ ಕಪ್ಪು ರಂಧ್ರದ ಜ್ವಾಲೆಯನ್ನು ಎಸ್ ಜಿಆರ್-ಎ* ಎಂದು ಕರೆದಿದೆ.

ಇದೊಂದು ಅನಿರೀಕ್ಷಿತ ಸಂಶೋಧನೆಯಾಗಿದೆ. ಜಿ-2 ಎಂದು ಕರೆಯಲ್ಪಡುವ ಅನಿಲ ಮೋಡ ಮತ್ತು ಬೃಹತ್ ಗಾತ್ರದ ಕಪ್ಪು ರಂಧ್ರದ ನಡುವೆ ಜ್ವಾಲೆ ಪತ್ತೆಯಾಗಿದ್ದು ಕುತೂಹಲ ಕೆರಳಿಸಿದೆ.[ಬಾಹ್ಯಾಕಾಶದಲ್ಲಿ ಹಾರಾಡಿದ ಭಾರತೀಯರು ವಾಪಸ್!]

nasa

ಒಂದು ವೇಳೆ ಜಿ-2 ದೂರ ಸರಿದಿದ್ದೇ ಆದರೆ ಕಪ್ಪು ರಂಧ್ರ ಮತ್ತು ಜ್ವಾಲೆಯ ನಿಖರ ಗಾತ್ರ ಗುರುತಿಸಬಹುದಾಗಿತ್ತು. ನಿಸರ್ಗದ ವೈಚಿತ್ರ್ಯಗಳೇ ಹೀಗಿರುತ್ತವೆ ಎಂದು ಮ್ಯಾಸಚೂಸೆಟ್ಸ್ ವಿವಿಯ ಸಂಶೋಧಕ ಡರೆಲ್ ಹಗಾರ್ಡ್ ತಿಳಿಸಿದ್ದಾರೆ.

2014 ರಲ್ಲಿ ಜಿ-2 ಅನಿಲ ಮೋಡಕ್ಕೆ ಕಪ್ಪು ರಂಧ್ರ ತುಂಬಾ ಹತ್ತಿರದಲ್ಲಿತ್ತು. ಆದರೆ ಇದರ ಸ್ಥಾನಪಲ್ಲಟದ ಬಗ್ಗೆ ನಿಖರವಾದ ಮಾಹಿತಿಗಳು ದೊರೆತಿಲ್ಲ, ಅನಿಲ ಮೋಡ ಮತ್ತು ಅದರ ಚಲನೆಯನ್ನು ವಿಶ್ಲೇಷಿಸಿ ಕಪ್ಪು ರಂಧ್ರದ ಬಳಿಯ ಜ್ವಾಲೆಯ ಗಾತ್ರ ಅಂದಾಜಿಸಲಾಗಿದೆ ಎಂದು ಖಗೋಳ ಶಾಸ್ತ್ರಜ್ಞರು ತಿಳಿಸಿದ್ದಾರೆ.[ಮಂಗಳನ ಅಂಗಳದಲ್ಲಿ ಕೆರೆ ಕಂಡ ಕ್ಯೂರಿಯಾಸಿಟಿ]

ಗುರುತ್ವಾಕರ್ಷಣ ಶಕ್ತಿಯ ಪರಿಣಾಮ ಕಪ್ಪು ರಂಧ್ರದ ಬಳಿಯ ಜ್ವಾಲೆ ಮತ್ತು ಮೋಡ ಒಂದಕ್ಕೊಂದು ಹತ್ತಿರ ಬಂದಿದ್ದವು ಎಂದು ಒಂದು ಸಿದ್ಧಾಂತ ಹೇಳಿದರೆ, ಆಯಸ್ಕಾಂತೀಯ ಶಕ್ತಿಯೂ ಇವೆರಡು ಪರಸ್ಪರ ಸಂಧಿಸಲು ಕಾರಣವಾಗಿದೆ ಎಂದು ಮತ್ತೊಂದು ವಿಶ್ಲೇಷಣೆ ಹೇಳುತ್ತದೆ.

ಆದರೆ ಈ ಬಗೆಯ ಆಯಸ್ಕಾಂತೀಯ ಅಲೆಗಳು ಸೂರ್ಯನಲ್ಲಿ ಮಾತ್ರ ಕಂಡುಬರುತ್ತವೆ. ಸೂರ್ಯನಿಗೆ ಕಪ್ಪುರಂಧ್ರವನ್ನು ಹೋಲಿಕೆ ಮಾಡಿ ಹೇಳಲು ಸಾಧ್ಯವಿಲ್ಲವಾದರೂ ಗಾತ್ರದಲ್ಲಿ ಸೂರ್ಯನನ್ನು ಮೀರಿಸುತ್ತದೆ. ನಮ್ಮ ಗ್ಯಾಲಕ್ಸಿಯಲ್ಲೇ ಇಷ್ಟು ದೊಡ್ಡ ಜ್ವಾಲೆ ಕಂಡುಬಂದಿರುವುದು ಇದೇ ಮೊದಲು, ಈ ಬಗ್ಗೆ ಇನ್ನು ಹೆಚ್ಚಿನ ವಿವರಗಳನ್ನು ಕಲೆಹಾಕಬೇಕಿದೆ ಎಂದು ಜರ್ಮನಿಯ ವಿಜ್ಞಾನಿ ಗೆರಿಬೆಲ್ ಪೊಂಟಿ ಹೇಳುತ್ತಾರೆ.

English summary
NASA's Chandra X-ray Observatory has observed the largest flare detected from a supermassive black hole at the centre of the Milky Way. The black hole is called Sagittarius A* (Sgr A*) and is estimated to contain about 4.5 million times the mass of our sun. Astronomers made the unexpected discovery while using Chandra to observe how Sgr A* would react to a nearby cloud of gas known as G2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X