Blue Moon 2023: ನೀಲಿ ಚಂದ್ರನ ನೋಡು ಬಾ: ಮರೆಯದಿರಿ ಮರೆತು ನಿರಾಶರಾಗದಿರಿ!
ಚಂದ್ರನ ಅಂದವ ಹೊಗಳುತ ಕೂತರೆ ಸಮಯವೇ ಸಾಲದು, ಕನಸು ಕೂಡ ಕಳೆಯದು.. ಹೀಗೆ ಚಂದ್ರ ಎಂಬ ಪದದಲ್ಲೇ ಒಂದು ಸೆಳೆತ ಇದೆ. ಈ ಕಾರಣಕ್ಕೆ ಪ್ರೇಮಿಗಳಿಂದ ಹಿಡಿದು ಸಹಸ್ರ ಚಂದ್ರನ ಕಂಡಿರುವ ಹಿರಿಯರ ತನಕ ಚಂದ್ರ ಅಂದರೆ ಅದೇನೋ ಪ್ರೀತಿ. ಇಂತಿಪ್ಪ ಚಂದ್ರ ನಾಳೆ ಬಣ್ಣ ಬದಲಿಸುತ್ತಿದ್ದಾನೆ. ಭಾರತದ ಲ್ಯಾಂಡರ್ ಚಂದ್ರನ ಮೇಲ್ಮೈಗೆ ಇಳಿದ ಕೆಲವೇ ದಿನಗಳಲ್ಲಿ ಚಂದ್ರನ ಬಣ್ಣ ಮತ್ತು ಗಾತ್ರ ಬದಲಾಗುತ್ತಿದೆ ಏಕೆ? ಮುಂದೆ ಓದಿ.
ನಾಳೆ ಅಂದರೆ ಆಗಸ್ಟ್ 30ರಂದು ನೀವು ಆಕಾಶದಲ್ಲಿ ಚಂದ್ರನನ್ನು ನೋಡೋಕೆ ಹೋದರೆ, ಬಿಳಿ ಚಂದ್ರ ಕಾಣಿಸೋದಿಲ್ಲ. ಮತ್ತೆ ಕಪ್ಪು ಚಂದ್ರ ಕಾಣುತ್ತಾನಾ? ಅಂತಾ ಪ್ರಶ್ನೆ ಹಾಕದಿರಿ ಪ್ಲೀಸ್. ಯಾಕಂದ್ರೆ ನಾಳಿನ ಚಂದ್ರನ ಕಲರ್ ಚೇಂಜ್ ಆಗಲಿದೆ. ಇದನ್ನು ʼಸೂಪರ್ ಬ್ಲೂ ಮೂನ್ʼ ಎಂದು ಕರೆಯುತ್ತಾರೆ, ಇದು ಖಗೋಳ ಕೌತುಕ. ಬುಧವಾರ ಸಂಭವಿಸುವ ಇಂಥ ಅಪರೂಪದ ಬ್ಲೂ ಮೂನ್ ಮತ್ತೆ ನೋಡಲು ಹಲವು ವರ್ಷಗಳ ತನಕ ಕಾಯಬೇಕು. ಹೀಗೆ ಸೂಪರ್ ಬ್ಲೂ ಮೂನ್ ಕಾಣಿಸುವ ದಿನ ಚಂದ್ರ ನೀಲಿ ಬಣ್ಣದಲ್ಲಿ ಕಾಣುವುದಿಲ್ಲ. ಹಾಗಾದ್ರೆ ಯಾವ ಕಲರ್‌ನಲ್ಲಿ ಎಂಟ್ರಿ ಕೊಡ್ತಾನೆ ಚಂದ್ರ? ಬನ್ನಿ ತಿಳಿಯೋಣ.

ಅಂದಹಾಗೆ ಬ್ಲೂ ಮೂನ್ ಹೆಸರಿಗೂ ಹಾಗೂ ಚಂದ್ರನ ಬಣ್ಣಕ್ಕೂ ಯಾವುದೇ ಸಂಬಂಧವಿಲ್ಲ ಅನ್ನೋದು ಸ್ಪಷ್ಟ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳುವ ಪ್ರಕಾರ ಈ ವರ್ಷವೆ 4 ಬಾರಿ ಬ್ಲೂ ಮೂನ್ ಸಂಭವಿಸಲಿದೆ. ಆಗಸ್ಟ್ 30ಕ್ಕೆ ಕಾಣಿಸುವುದು 3ನೇ ಬ್ಲೂ ಮೂನ್ ಆಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ತಿಂಗಳು ಎರಡು ದಿನ ಚಂದ್ರನು ಪೂರ್ಣ ಆಕಾರದಲ್ಲಿ ಆಗಸದಲ್ಲಿ ಉದಯಿಸಲಿದ್ದಾನೆ. ಹಾಗೇ ಸಂಪೂರ್ಣ ಚಂದ್ರನನ್ನ ಕಣ್ತುಂಬಿಕೊಳ್ಳುವ ಚಾನ್ಸ್ ಭೂಮಿ ಮೇಲಿನ ಮಾನವರಿಗೆ ಸಿಗುವುದೇ ಭಾಗ್ಯ! ಇನ್ನು ಈಗ ಸಂಭವಿಸುತ್ತಿರುವ ಚಂದ್ರನ ಈ ವಿದ್ಯಮಾನ ಅದೆಷ್ಟು ವಿಶೇಷ? ಮುಂದೆ ಓದಿ.
ಚಂದ್ರನ ಪ್ರಕಾಶಮಾನತೆ ಅಬ್ಬಬ್ಬಾ!
ಅಷ್ಟಕ್ಕೂ ಚಂದ್ರನ ಹಂತಗಳು ಸರಾಸರಿ 29.5 ದಿನದವರೆಗೆ ಇರುವುದರಿಂದ 12 ಚಂದ್ರನ ಚಕ್ರ 354 ದಿನಗಳಲ್ಲಿ ಪೂರ್ಣವಾಗಬಹುದು. ಹೀಗಾಗಿ 13ನೇ ಹುಣ್ಣಿಮೆ ಪ್ರತಿ 2.5 ವರ್ಷಕ್ಕೆ ಒಮ್ಮೆ ಅಥವಾ ನಿರ್ದಿಷ್ಟ ವರ್ಷದಲ್ಲಿ ಗೋಚರಿಸುತ್ತದೆ. ಬ್ಲೂನ್ ಮೂನ್ ದಿನವು ಚಂದ್ರನ ಆಕಾರ ದೊಡ್ಡದಾಗಿ ಕಾಣುತ್ತದೆ.

ಸಾಮಾನ್ಯವಾಗಿ ಸೂಪರ್ ಮೂನ್ ದಿನ ಚಂದ್ರ ಇತರ ಹುಣ್ಣಿಮೆ ದಿನಗಳಲ್ಲಿ ಕಾಣಿಸುವುದಕ್ಕು ಶೇಕಡಾ 16ರಷ್ಟು ಹೆಚ್ಚು ಪ್ರಕಾಶಮಾನವಾಗಿ ಕಾಣಿಸುವ ಪ್ರತಿತಿ ಇದೆ. ಇನ್ನೊಂದ್ಕಡೆ ಚಂದ್ರ ಪೂರ್ಣವಾಗಿದ್ದಾಗ & ಅದರ ಕಕ್ಷೆ ಭೂಮಿಗೆ ಹತ್ತಿರದಲ್ಲಿದ್ದಾಗ ಈ ವಿದ್ಯಮಾನ ನಡೆಯುತ್ತದೆ. ಆಗಸ್ಟ್ 30, 2023 ರ ರಾತ್ರಿ 9.36ಕ್ಕೆ ಸರಿಯಾಗಿ ಬ್ಲೂ ಮೂನ್ ಗರಿಷ್ಠ ಪ್ರಕಾಶಮಾನತೆ ಹಂತ ಮುಟ್ಟುತ್ತದೆ ಅಂತಿದ್ದಾ ಬಾಹ್ಯಾಕಾಶ ವಿಜ್ಞಾನಿಗಳು. ಹೀಗಾಗಿ ಇಡೀ ಜಗತ್ತಿನ ಬಾಹ್ಯಾಕಾಶ ಪ್ರೇಮಿಗಳು ತಮ್ಮ ತಮ್ಮ ದೇಶದಲ್ಲಿ ಎಷ್ಟೊತ್ತಿಗೆ ಬ್ಲೂ ಮೂನ್ ದರ್ಶನವಾಗುತ್ತೆ ಅಂತಾ ಟೆಲಿಸ್ಕೋಪ್ ಹಿಡಿದು ಕಾಯುತ್ತಿದ್ದಾರೆ.

ಒಟ್ನಲ್ಲಿ ಈ ಬಾರಿಯ ಸೂಪರ್ ಮೂನ್ ಹಾಗೂ ಬ್ಲೂ ಮೂನ್ ಸಮಾಗಮ ಭಾರತೀಯ ವಿಜ್ಞಾನಿಗಳಿಗೆ ಸಖತ್ ಸ್ಪೆಷಲ್. ಒಂದು ಕಡೆ ಭಾರತದ ನೌಕೆ ಚಂದ್ರನ ಮೇಲೆ ಲ್ಯಾಂಡರ್ ಇಳಿಸಿದೆ. ಇನ್ನೊಂದು ಕಡೆ ದಕ್ಷಿಣ ಧ್ರುವದ ಮೇಲೆ ಭಾರತದ ರೋವರ್ ಅಧ್ಯಯನವನ್ನು ನಡೆಸುತ್ತಿದೆ. ಇದೇ ಸಂದರ್ಭದಲ್ಲಿ ಬ್ಲೂ ಮೂನ್ ಕೂಡ ಭಾರತಕ್ಕೆ ಸರ್ಪ್ರೈಸ್ ಕೊಡ್ತಿದೆ. ಹೀಗಾಗಿ ನಾಳೆ ಚಂದ್ರನ ದರ್ಶನ ಪಡೆಯಲು ಮರೆಯದಿರಿ.. ಮರೆತು ನಿರಾಶರಾಗದಿರಿ. ಈ ವಿದ್ಯಾಮಾನ ಕಣ್ಣು ತಪ್ಪಿದರೆ ಮತ್ತೆ ನೋಡಲು ಹಲವು ವರ್ಷಗಳೇ ಬೇಕು ನೆನಪಿರಲಿ.












Click it and Unblock the Notifications