ಭಾರತದ ನೌಕಾಪಡೆಗೆ ಸುನೀಲ್ ಲಂಬಾ ಹೊಸ ಸಾರಥಿ

Written By:
Subscribe to Oneindia Kannada

ನವದೆಹಲಿ, ಮೇ 31 : ಭಾರತದ ನೌಕಾಪಡೆಗೆ ಹೊಸ ಮುಖ್ಯಸ್ಥರ ನೇಮಕವಾಗಿದೆ. ವೈಸ್ ಅಡ್ಮಿರಲ್ ಸುನೀಲ್ ಲಂಬಾ ಭಾರತೀಯ ನೌಕಾ ಪಡೆಯ ನೂತನ ಮುಖ್ಯಸ್ಥರಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ. ಜನರಲ್ ಆರ್.ಕೆ.ಧವನ್ ನಿವೃತ್ತರಾಗಿದ್ದು ಅವರ ಸ್ಥಾನಕ್ಕೆ ಸುನೀಲ್ ನೇಮಕವಾಗಿದೆ.

58 ವರ್ಷದ ಲಂಬಾ ಅವರು 2019ರ ಮೇ 31ರವರೆಗೆ ಮೂರು ವರ್ಷಗಳ ಕಾಲ ನೌಕಾಪಡೆ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ. ಮೇ 6ರಂದು ಕೇಂದ್ರ ಸರ್ಕಾರ ಸುನೀಲ್ ಲಂಬಾ ಅವರನ್ನು ಆ ಹುದ್ದೆಗೆ ನೇಮಕ ಮಾಡಿತ್ತು.[ಸಿಯಾಚಿನ್ ನಲ್ಲಿ ಸಿಕ್ಕಿದ್ದ ಹನುಮಂತಪ್ಪ ಬದುಕಿ ಬಂದ ಕತೆ]

indiam army

ನೌಕಾಪಡೆಯಲ್ಲಿ 38 ವರ್ಷ ಕಾಲ ಸೇವೆ ಸಲ್ಲಿಸಿರುವ ಸುನೀಲ್ ಲಂಬಾ ಹಲವು ಜವಾಬ್ದಾರಿ ನಿಭಾಯಿಸಿಲಕೊಂಡು ಬಂದಿದ್ದಾರೆ. ನಾಲ್ಕು ಯುದ್ಧನೌಕೆಗಳಿಗೆ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದ್ದಾರೆ.[ಕರ್ನಾಟಕದ ಕರಾವಳಿ ಮೇಲೆ ಐಸಿಜಿಎಸ್ ಶೂರ್ ಕಣ್ಗಾವಲು]

ಸುನೀಲ್ ಲಂಬಾ ಅವರ ಸೇವೆಯನ್ನು ಗುರುತಿಸಿದ್ದ ಸರ್ಕಾರವಿಶಿಷ್ಟ್ ಸೇವಾ ಪದಕ ಹಾಗೂ ಪರಮ್ ವಿಶಿಷ್ಟ್ ಸೇವಾ ಪದಕಗಳನ್ನು ನೀಡಿ ಗೌರವಿಸಿತ್ತು. ಇದೀಗ ನೌಕಾದಳದ ನೇತೃತ್ವವನ್ನು ನೀಡಿದ್ದು ಅಧಿಕಾರ ವಹಿಸಿಕೊಂಡಿದ್ದಾರೆ.

-
-
-
-
-
-
-
-

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Vice Admiral Sunil Lanba, on Tuesday, took charge as the Chief of Naval Staff in New Delhi as the current CNS Admiral R.K.Dhowan retired after four decade of service. On May 6, 2016, the government appointed Lanba, the Flag Officer Commanding-in-Chief, Western Naval Command as the Chief of Naval Staff.
Please Wait while comments are loading...