ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೈಲ್ವೆ ಮಂಡಳಿಯ ನೂತನ ಅಧ್ಯಕ್ಷ ಹಾಗೂ ಸಿಇಒ ಆಗಿ ಸುನೀತ್ ಶರ್ಮಾ ನೇಮಕ
ನವದೆಹಲಿ, ಜನವರಿ 01: ರೈಲ್ವೆ ಮಂಡಳಿಯ ನೂತನ ಅಧ್ಯಕ್ಷ ಹಾಗೂ ಸಿಇಒ ಆಗಿ ಸುನೀತ್ ಶರ್ಮಾ ನೇಮಕಗೊಂಡಿದ್ದಾರೆ.
ಅವರು ಈ ಮೊದಲು ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ರೈಲ್ವೆ ಕಾರ್ಯಾಗಾರಗಳ ನಿರ್ವಹಣೆ ಕುರಿತು ಜರ್ಮನಿ ಮತ್ತು ಫ್ರಾನ್ಸ್‌ನಲ್ಲಿ ತರಬೇತಿ ಪಡೆದಿದ್ದಾರೆ, ಅಮೆರಿಕದ ಕಾರ್ನಿಗಿ ಮೆಲ್ಲಾನ್ ಯೂನಿವರ್ಸಿಟಿ, ಟೆಹರಾನ್‌ಗಳಲ್ಲಿ ಸಹ ತರಬೇತಿ ಪಡೆದವರು ಇವರಾಗಿದ್ದಾರೆ.
ಮೈಸೂರು-ಮಲಬಾರ್ ರೈಲು ಮಾರ್ಗಕ್ಕೆ ಕೇಂದ್ರ ಹಸಿರು ನಿಶಾನೆ
ಈಗಿರುವ ಅಧ್ಯಕ್ಷ ವಿಕೆ ಯಾದವ್ ಅವರ ಸೇವಾವಧಿಯನ್ನು ಕಳೆದ ಜನವರಿಯಲ್ಲಿ ವಿಸ್ತರಿಸಲಾಗಿತ್ತು. 1978ನೇ ಬ್ಯಾಚ್‌ನ ಸ್ಪೆಷಲ್ ಕ್ಲಾಸ್ ಅಪ್ರೆಂಟಿಸ್ ಅಧಿಕಾರಿಯಾಗಿರುವ ಶರ್ಮಾ ಅವರು ರೈಲ್ವೆ ವಿಭಾಗೀಯ ಕಚೇರಿ, ವರ್ಕ್ ಶಾಪ್‌ಗಳು, ಡೀಸೆಲ್ ಲೋಕೊ ಶೆಡ್‌ಗಳು ಸೇರಿದಂತೆ ರೈಲ್ವೆಯ ವಿವಿಧ ವಿಭಾಗಗಳಲ್ಲಿ 34 ವರ್ಷ ನಿರಂತರ ಸೇವೆ ಸಲ್ಲಿಸಿದ್ದಾರೆ.