ಶ್ರೀರಾಮಚಂದ್ರನ ನಂತರ ಹನುಮಾನ್ ಗೆ ಕೋರ್ಟ್ ಸಮನ್ಸ್
ಪಾಟ್ನ, ಫೆ. 17: 'ಕಾನೂನಿನ ಮುಂದೆ ಯಾರು ದೊಡ್ಡವರಲ್ಲ' ಎಂಬ ಮಾತು ಕೇಳಿರಬಹುದು. ದೇವರು ಕೂಡಾ ಕಾನೂನಿನ ಕರೆಗೆ ಓಗೊಡಬೇಕಾದ ಪ್ರಸಂಗ ಎದುರಾಗಿದೆ. ಶ್ರೀರಾಮಚಂದ್ರ ವಿರುದ್ಧ ದೌರ್ಜನ್ಯದ ಕೇಸ್ ಆದ ಮೇಲೆ, ಹನುಮಾನ್ ವಿರುದ್ಧ ಕೋರ್ಟಿನಿಂದ ಸಮನ್ಸ್ ಜಾರಿಗೊಂಡಿದೆ.
ತುಂಬು ಗರ್ಭಿಣಿಯಾಗಿದ್ದ ತನ್ನ ಪತ್ನಿ ಸೀತೆಯನ್ನು ಅಗಸನ ಮಾತು ಕೇಳಿ, ಕಾಡಿಗೆ ಕಳಿಸಿದ ಮರ್ಯಾದಾ ಪುರುಷೋತ್ತಮ ರಾಮ ಹಾಗೂ ಇದಕ್ಕೆ ನೆರವು ನೀಡಿದ ರಾಮನ ತಮ್ಮ ಲಕ್ಷ್ಮಣನ ವಿರುದ್ಧ ಬಿಹಾರದಲ್ಲಿ ದೌರ್ಜನ್ಯದ ಕೇಸು ದಾಖಾಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. [ಪೂರ್ತಿ ವಿವರ ಇಲ್ಲಿ ಓದಿ]

ಈಗ ರಾಮಭಕ್ತ ಹನುಮಾನ್ ವಿರುದ್ಧ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪ ಹೊರೆಸಲಾಗಿದೆ. ರೋಹ್ಟಸ್ ಜಿಲ್ಲೆಯಲ್ಲಿರುವ ರಸ್ತೆಬದಿ ದೇಗುಲ ಈಗ ಕೋರ್ಟ್ ಸಮನ್ಸ್ ಪಡೆದುಕೊಂಡಿದೆ. ರೋಹ್ಟಸ್ ನ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಅವರು ಹನುಮಾನ್ ಅವರು ಕೋರ್ಟಿಗೆ ಹಾಜರಾಗಬೇಕು ಎಂದು ಸಮನ್ಸ್ ಜಾರಿಗೊಳಿಸಿದ್ದಾರೆ.
ಕೋರ್ಟ್ ಸಮನ್ಸ್ ಆದೇಶದ ಪ್ರತಿಯನ್ನು ಹನುಮಾನ್ ದೇವರ ವಿಗ್ರಹ ಹಾಗೂ ಪಂಚಮುಖಿ ಹನುಮಾನ್ ದೇಗುಲದ ಅಧಿಕಾರಿಗಳಿಗೆ ನೀಡಲಾಗಿದೆ. ರಸ್ತೆ ಸಂಚಾರಕ್ಕೆ ದೇಗುಲ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಲಾಗಿದೆ.
ಭಜರಂಗ ದಳ ಹಾಗೂ ಭಾರತೀಯ ಜನತಾ ದಳ ಕಾರ್ಯಕರ್ತರು ಕೋರ್ಟ್ ಸಮನ್ಸ್ ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ದೇಗುಲದವರು ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪವಿದೆ.












Click it and Unblock the Notifications