ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂಚನೆ ಪ್ರಕರಣ: ಐಷಾರಾಮಿ ಆಫರ್ ಕೊಟ್ಟ ಸುಕೇಶ್- ನ್ಯಾಯಾಲಯದಲ್ಲಿ ನೋರಾ ಫತೇಹಿ ಹೇಳಿದ್ದೇನು?

|
Google Oneindia Kannada News

215 ಕೋಟಿ ರೂಪಾಯಿ ಸುಲಿಗೆ ಪ್ರಕರಣದಲ್ಲಿ ಜೈಲಿನಲ್ಲಿರುವ ಸುಖೇಶ್ ಚಂದ್ರಶೇಖರ್ ವಿರುದ್ಧ ಸಾಕ್ಷಿಯಾಗಿರುವ ಬಾಲಿವುಡ್ ನಟಿ ನೋರಾ ಫತೇಹಿ ಮಂಗಳವಾರ ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.

ಸುಕೇಶ್ ಚಂದ್ರಶೇಖರ್ ವಿರುದ್ಧ ನಟಿ ನೋರಾ ಫತೇಹಿ ಗಂಭೀರ ಆರೋಪವನ್ನು ಮಾಡಿದ್ದಾರೆ. ಸುಕೇಶ್ ಚಂದ್ರಶೇಖರ್ ತನ್ನ ಆಪ್ತ ಸಹಾಯಕಿ ಪಿಂಕಿ ಇರಾನಿ ಮೂಲಕ ತನ್ನಿಂದ (ನೋರಾ ಫತೇಹಿ) ಅನಗತ್ಯ ಅನುಗ್ರಹವನ್ನು ಬಯಸಿದ್ದಾನೆ ಎಂದು ನಟಿ ಹೇಳಿಕೊಂಡಿದ್ದಾಳೆ. ಸುಕೇಶ್ ಚಂದ್ರಶೇಖರ್ ತನ್ನ ಗೆಳತಿಯಾಗಲು ಒಪ್ಪಿಕೊಂಡರೆ ದೊಡ್ಡ ಮನೆ ಮತ್ತು ಐಷಾರಾಮಿ ಜೀವನಶೈಲಿಯನ್ನು ನೀಡುವುದಾಗಿ ಭರವಸೆ ನೀಡಿದ್ದರು ಎಂದು ನೋರಾ ಫತೇಹಿ ಹೇಳಿಕೊಂಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣ: ಎಎಪಿಗೆ 60 ಕೋಟಿ ರೂ. ನೀಡಿರುವುದಾಗಿ ಸುಕೇಶ್ ಆರೋಪಅಕ್ರಮ ಹಣ ವರ್ಗಾವಣೆ ಪ್ರಕರಣ: ಎಎಪಿಗೆ 60 ಕೋಟಿ ರೂ. ನೀಡಿರುವುದಾಗಿ ಸುಕೇಶ್ ಆರೋಪ

'ಪಿಂಕಿ ಇರಾನಿ ತನ್ನ ಸೋದರಸಂಬಂಧಿಯನ್ನು ಸಂಪರ್ಕಿಸಿದ್ದಾರೆ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸುಕೇಶ್ ಅವರ ಆಫರ್‌ಗಾಗಿ ಸಾಲಿನಲ್ಲಿ ಕಾಯುತ್ತಿದ್ದಾರೆ' ಎಂದು ನೋರಾ ಫತೇಹಿ ಹೇಳಿದ್ದಾರೆ. ಸುಕೇಶ್ ಅವರು ನೋರಾ ಫತೇಹಿಯನ್ನು ಬಯಸಿದ್ದರು ಎಂದು ನಟಿ ಹೇಳಿಕೊಂಡಿದ್ದಾರೆ. "ಸುಕೇಶ್‌ನ ಆಫರ್‌ಗಾಗಿ ಅನೇಕ ನಟಿಯರು ಕಾಯುತ್ತಿದ್ದಾರೆ" ಎಂದು ಪಿಂಕಿ ಇರಾನಿ ತನ್ನ ಸೋದರಸಂಬಂಧಿಗೆ ಹೇಳಿದ್ದನ್ನು ನೋರಾ ಉಲ್ಲೇಖಿಸಿದ್ದಾರೆ.

ನ್ಯಾಯಾಲಯದಲ್ಲಿ ನೋರಾ ಫತೇಹಿ ಹೇಳಿದ್ದೇನು?

ನ್ಯಾಯಾಲಯದಲ್ಲಿ ನೋರಾ ಫತೇಹಿ ಹೇಳಿದ್ದೇನು?

"ಆರಂಭದಲ್ಲಿ, ಸುಕೇಶ್ ಯಾರೆಂದು ನನಗೆ ತಿಳಿದಿರಲಿಲ್ಲ. ನಂತರ, ಅವರು ಎಲ್ಎಸ್ ಕಾರ್ಪೊರೇಶನ್ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ನಾನು ಭಾವಿಸಿದೆ. ನಾನು ಯಾವುದೇ ವೈಯಕ್ತಿಕ ಸಂಪರ್ಕವನ್ನು ಹೊಂದಿರಲಿಲ್ಲ ಅಥವಾ ನಾನು ಅವರೊಂದಿಗೆ ಯಾವುದೇ ಸಂಭಾಷಣೆಯನ್ನು ನಡೆಸಲಿಲ್ಲ" ಎಂದು ನೋರಾ ಫತೇಹಿ ನ್ಯಾಯಾಲಯದಲ್ಲಿ ಹೇಳಿದ್ದಾರೆ.

215 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ತನಗೆ ಸಮನ್ಸ್ ನೀಡಿದಾಗಲೇ ಸುಕೇಶ್ ಚಂದ್ರಶೇಖರ್ ಒಬ್ಬ ಕಳ್ಳ ಎಂಬುದು ತನಗೆ ಗೊತ್ತಾಯಿತು ಎಂದು ನೋರಾ ಹೇಳಿಕೊಂಡಿದ್ದಾರೆ.

ನೋರಾಗೆ ಆಫರ್‌ ಕೊಟ್ಟ ಸುಕೇಶ್

ನೋರಾಗೆ ಆಫರ್‌ ಕೊಟ್ಟ ಸುಕೇಶ್

"ನನಗೆ ಈ ಬಗ್ಗೆ ಯಾವುದೇ ಸುಳಿವು ಇರಲಿಲ್ಲ ಮತ್ತು ನಾನು ಅವರನ್ನು ಎಂದಿಗೂ ಭೇಟಿ ಮಾಡಿಲ್ಲ. ಇಡಿ ತನ್ನ ಕಚೇರಿಯಲ್ಲಿ ನನ್ನನ್ನು ಪ್ರಶ್ನೆ ಮಾಡಿದಾಗ ಮಾತ್ರ ನಾನು ಅವರನ್ನು ನೋಡಿದೆ" ಎಂದು ನಟಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ. ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್‌ಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ.

ಕಳ್ಳ ಸುಕೇಶ್ ಚಂದ್ರಶೇಖರ್ ಅವರನ್ನು ಒಳಗೊಂಡ ಪ್ರಕರಣದಲ್ಲಿ ತಾನು ಬಲಿಪಶು ಎಂದು ನಟಿ ಹೇಳಿಕೊಂಡಿದ್ದಾಳೆ. ತಾವು ಯಾವುದೇ ರೀತಿಯ ಹಣ ವರ್ಗಾವಣೆಯಲ್ಲಿ ಭಾಗಿಯಾಗಿಲ್ಲ ಎಂದಿದ್ದಾರೆ. ಆದಾಗ್ಯೂ, ನೋರಾ ಅವರು ಐಷಾರಾಮಿ ಕಾರುಗಳು, ವಜ್ರಗಳು ಮತ್ತು ಬ್ಯಾಗ್‌ಗಳು ಸೇರಿದಂತೆ ಐಷಾರಾಮಿ ಉಡುಗೊರೆಗಳನ್ನು ಪಡೆದಿದ್ದಾರೆ ಎಂದು ಇಡಿ ಆರೋಪಿಸಿದೆ.

ವಂಚಿಸಿದ ಆರೋಪ

ವಂಚಿಸಿದ ಆರೋಪ

ಸುಕೇಶ್ ಚಂದ್ರಶೇಖರ್ ಡಿಸೆಂಬರ್ 2020 ರಲ್ಲಿ ನೋರಾ ಫತೇಹಿಗೆ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದರು ಎಂದು ಇಡಿ ಆರೋಪಿಸಿದೆ. ಆದರೆ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಕ್ಕಾಗಿ ಕಾರನ್ನು ಕನ್ಮನ್ ಪತ್ನಿ ಲೀನಾ ಮಾರಿಯಾ ಅವರಿಗೆ ಈ ಕಾರನ್ನು ನೀಡಿದ್ದರು ಎಂದು ನಟಿ ಸಮರ್ಥಿಸಿಕೊಂಡಿದ್ದಾರೆ. ಪ್ರಸ್ತುತ ಜೈಲಿನಲ್ಲಿರುವ ಚಂದ್ರಶೇಖರ್ ಅವರು ಮಾಜಿ ಫೋರ್ಟಿಸ್ ಹೆಲ್ತ್‌ಕೇರ್ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರಂತಹ ಉನ್ನತ ವ್ಯಕ್ತಿಗಳು ಸೇರಿದಂತೆ ಅನೇಕ ಜನರನ್ನು ವಂಚಿಸಿದ ಆರೋಪ ಹೊತ್ತಿದ್ದಾರೆ.

ಎಎಪಿ ಹಣ ನೀಡಿದ ಆರೋಪ

ಎಎಪಿ ಹಣ ನೀಡಿದ ಆರೋಪ

ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸುಕೇಶ್ ದೆಹಲಿ ಆಡಳಿತ ಸರ್ಕಾರದ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಎಎಪಿಗೆ 60 ಕೋಟಿ ರೂ.ಗಳನ್ನು ನೀಡುವುದಾಗಿ ಸುಕೇಶ್ ಹೇಳಿಕೊಂಡು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಪತ್ರ ಬರೆದಿದ್ದರು. ಸೆರೆವಾಸದಲ್ಲಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಸಚಿವ ಸತ್ಯೇಂದ್ರ ಜೈನ್ ಅವರಿಗೆ 'ರಕ್ಷಣಾ ಹಣ' ಎಂದು 10 ಕೋಟಿ ರೂಪಾಯಿಗಳನ್ನು ಪಾವತಿಸಿದ್ದೇನೆ. ಹೀಗೆ ಹೇಳಿದ ನಂತರ ನನಗೆ ಜೈಲಿನಲ್ಲಿ ಕಿರುಕುಳ ಮತ್ತು ಬೆದರಿಕೆ ಹಾಕಲಾಗಿದೆ ಎಂದು ಸುಕಕೇಶ್ ಅವರು ಹೇಳಿದ್ದಾರೆ.

English summary
Rs 215 crore extortion case: Nora Fatehi claimed in the court that Sukesh promised me a big house and luxurious life if I agreed to be his girlfriend.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X