ಖರ್ಗೆಗೆ ಕೊಕ್, ಚುನಾವಣೆಯಲ್ಲಿ ಮುಗ್ಗರಿಸಿದ ರಾಹುಲ್ ವಿಪಕ್ಷ ನಾಯಕ!

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಮಾರ್ಚ್ 17: ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿ ಮುಗ್ಗರಿಸಿದ ರಾಹುಲ್ ಗಾಂಧಿ ಲೋಕಸಭೆಯ ವಿಪಕ್ಷ ನಾಯಕರಾಗಲಿದ್ದಾರೆ.

ಹಾಲಿ ಕಾಂಗ್ರೆಸ್ ಸಂಸದೀಯ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಗೆ ಕೊಕ್ ನೀಡಿ ಅವರ ಸ್ಥಾನಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ತರಲು ಕಾಂಗ್ರೆಸ್ ಆಲೋಚನೆ ಮಾಡಿದೆ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ಇಂಥಹದ್ದೊಂದು ಬದಲಾವಣೆಗೆ ಕಾಂಗ್ರೆಸ್ ಪಕ್ಷ ಕೈ ಹಾಕಿದೆ.[ಅನಾರೋಗ್ಯ ಪೀಡಿತ ಅಮ್ಮನಿಗಾಗಿ ರಾಹುಲ್ ವಿದೇಶಕ್ಕೆ]

Structural change: Rahul Gandhi to be leader of opposition

ಪಂಚ ರಾಜ್ಯಗಳ ಚುನಾವಣೆಯಲ್ಲಿ ರಾಹುಲ್ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿ ಹೀನಾಯ ಸೋಲು ಕಂಡಿದ್ದಕ್ಕೆ ಎಲ್ಲೆಡೆಯಿಂದ ಟೀಕೆಗಳು ಕೇಳಿ ಬರುತ್ತಿವೆ. 2014ರ ಲೋಕಸಭಾ ಚುನಾವಣೆಯಲ್ಲಿಯೂ ಇದೇ ರೀತಿ ಕಾಂಗ್ರೆಸ್ ಪಕ್ಷವನ್ನು ರಾಹುಲ್ ಮುನ್ನಡೆಸಿದ್ದರು. ಆಗ ಕೇವಲ 44 ಸ್ಥಾನ ಪಡೆಯಲಷ್ಟೇ ಕಾಂಗ್ರೆಸ್ ಶಕ್ತವಾಗಿತ್ತು. ಹೀಗಿದ್ದೂ ರಾಹುಲ್ ಗೆ ವಿಪಕ್ಷ ನಾಯಕನ ಪಟ್ಟ ಕಟ್ಟಲು ಹೊರಟಿರುವುದು ಕುತೂಹಲ ಹುಟ್ಟಿಸಿದೆ.[ಮೊದಲು ದಿಗ್ವಿಜಯ್ ಕಿತ್ತಾಕಿ-ರೇಣುಕಾ ಚೌಧರಿ ಗರಂ]

ಇನ್ನು ಯುವ ರಾಜಕಾರಣಿ ಜ್ಯೋತಿರಾದಿತ್ಯ ಸಿಂಧ್ಯಗೆ ಸಂಸದೀಯ ಸಮಿತಿ ಉಪನಾಯಕನ ಸ್ಥಾನ ನೀಡುವ ಸಾಧ್ಯತೆ ಇದೆ. ಈ ಮೂಲಕ ಇಬ್ಬರು ಯುವ ಮುಖಗಳಿಗೆ ದೊಡ್ಡ ಹುದ್ದೆ ಕರುಣಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ.

ನಿರ್ಗಮಿಸಿ ಸಂಸದೀಯ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸುವ ಸಾಧ್ಯತೆ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Congress is planning some structural changes. The first change that one may get to witness is Rahul Gandhi taking over as leader of the opposition a post that is held currently by Mallikarjuna Kharge.
Please Wait while comments are loading...