• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌: ಓವೈಸಿ ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ

|
Google Oneindia Kannada News

ಅಹಮದಾಬಾದ್, ನ. 08: ಗುಜರಾತ್‌ನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಯಾಣಿಸುತ್ತಿದ್ದ ವೇಳೆ ಕಲ್ಲೂ ತೂರಾಟ ನಡೆಸಲಾಗಿದೆ ಎಂದು ಪಕ್ಷದ ರಾಷ್ಟ್ರೀಯ ವಕ್ತಾರ ಹೇಳಿದ್ದಾರೆ.

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಕಿಟಕಿ ಗಾಜನ್ನು ಕೆಲವು ಅಪರಿಚಿತ ವ್ಯಕ್ತಿಗಳು ಒಡೆದಿದ್ದಾರೆ ಎಂದು ಪಕ್ಷದ ನಾಯಕ ವಾರಿಸ್ ಪಠಾಣ್ ಹೇಳಿದ್ದಾರೆ.

ಚೆನ್ನೈನಿಂದ ಮೈಸೂರಿಗೆ ಬಂದು ಸೇರಿದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಚೆನ್ನೈನಿಂದ ಮೈಸೂರಿಗೆ ಬಂದು ಸೇರಿದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು

ಅಸಾದುದ್ದೀನ್ ಓವೈಸಿ, ಪಕ್ಷದ ಗುಜರಾತ್ ರಾಜ್ಯ ಅಧ್ಯಕ್ಷ ಸಬೀರ್ ಕಬ್ಲಿವಾಲಾ ಮತ್ತು ಪಕ್ಷದ ಇತರ ನಾಯಕರು ಅಹಮದಾಬಾದ್‌ನಿಂದ ಸೂರತ್‌ಗೆ 'ವಂದೇ ಭಾರತ್ ಎಕ್ಸ್‌ಪ್ರೆಸ್' ನಲ್ಲಿ ಪ್ರಯಾಣಿಸುತ್ತಿದ್ದಾಗ ಘಟನೆ ನಡೆದಿದೆ. ಸೂರತ್ ತಲುಪಲು ಸುಮಾರು 25 ಕಿಮೀ ದೂರದಲ್ಲಿದ್ದಾಗ ಘಟನೆ ಸಂಭವಿಸಿದೆ ಎಂದು ವಾರಿಸ್ ಪಠಾಣ್ ಟ್ವೀಟ್ ಮಾಡಿದ್ದಾರೆ.

ಹಾನಿಗೊಳಗಾದ ಕಿಟಕಿಯ ಗಾಜಿನ ಚಿತ್ರಗಳನ್ನು ಹಂಚಿಕೊಂಡಿದ್ದು, "ಇಂದು ಸಂಜೆ ನಾವು ಅಸಾದುದ್ದೀನ್ ಓವೈಸಿ, ಸಬೀರ್ ಕಬ್ಲಿವಾಲಾ ಸೇರಿದಂತೆ ಪಕ್ಷದ ತಂಡವು ಅಹಮದಾಬಾದ್‌ನಿಂದ ಸೂರತ್‌ಗೆ 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಕೆಲವು ಅಪರಿಚಿತರು ಕಲ್ಲು ತೂರಿ ರೈಲಿನ ಕಿಟಕಿ ಗಾಜು ಒಡೆದರು" ಎಂದಿದ್ದಾರೆ.

ಘಟನೆ ಬಳಿಕ ಗುಜರಾತ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ವಾರಿಸ್ ಪಠಾಣ್, ಅಸಾದುದ್ದೀನ್ ಓವೈಸಿ ಕುಳಿತಿದ್ದ ಕೋಚ್ ಮೇಲೆ ಎರಡು ಕಲ್ಲುಗಳನ್ನು ಒಂದಾದ ಮೇಲೊಂದರಂತೆ ಎಸೆದರು ಎಂದು ಹೇಳಿದ್ದಾರೆ.

"ನಾವು ಅಹಮದಾಬಾದ್‌ನಿಂದ ಸೂರತ್‌ಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದೇವು. ನಾವು ಸೂರತ್‌ನಿಂದ 20 ರಿಂದ 25 ಕಿಮೀ ದೂರದಲ್ಲಿರುವಾಗ ಕಲ್ಲು ತೂರಾಟ ನಡೆಸಲಾಯಿತು, ಇದರಿಂದ ಕಿಟಕಿಯ ಗಾಜುಗಳಿಗೆ ಹಾನಿಯಾಗಿದೆ. ಓವೈಸಿ ಅವರು ಕೋಚ್‌ನಲ್ಲಿ ಕುಳಿತಿದ್ದರು. ಯಾರೋ ಎರಡು ಕಲ್ಲುಗಳನ್ನು ಒಂದಾದ ಮೇಲೊಂದರಂತೆ ಎಸೆದರು. ನೀವು ಕಲ್ಲುಗಳನ್ನು ಎಸೆಯಬಹುದು ಅಥವಾ ಬೆಂಕಿಯನ್ನು ಹಚ್ಚಬಹುದು. ಆದರೆ ನಮ್ಮ ಹಕ್ಕುಗಳಿಗಾಗಿ ಎತ್ತಿರುವ ನಮ್ಮ ಧ್ವನಿ ಎಂದಿಗೂ ನಿಲ್ಲುವುದಿಲ್ಲ" ಎಂದು ಎಐಎಂಐಎಂ ನಾಯಕ ಹೇಳಿದ್ದಾರೆ.

Stones Thrown At Vande Bharat Coach Asaduddin Owaisi Was In

ಗುಜರಾತ್ ರಾಜ್ಯದಲ್ಲಿ ಡಿಸೆಂಬರ್ 1 ಮತ್ತು 5 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷ ಸೆಪ್ಟೆಂಬರ್ 30 ರಂದು ಗಾಂಧಿನಗರದಲ್ಲಿ ಗಾಂಧಿನಗರ-ಮುಂಬೈ ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ್ದರು.

ಇನ್ನು, ದಕ್ಷಿಣ ಭಾರತದ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಪ್ರಯೋಗಿಕ ಸಂಚಾರ ಆರಂಭವಾಗಿದ್ದು, ಚೆನ್ನೈನಿಂದ ಹೊರಟಿದ್ದ ಈ ರೈಲು ಯಶಸ್ವಿಯಾಗಿ ಮೈಸೂರಿಗೆ ಬಂದು ಸೇರಿದೆ. ಈ ರೈಲನ್ನು ನವೆಂಬರ್‌ 11ಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

English summary
Stone pelting at Vande Bharat Express coach in Gujarat which AIMIM chief Asaduddin Owaisi was travelling to Surat. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X