ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Today's Update: ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕದಲ್ಲಿ ಎಷ್ಟು ಕೇಸ್ ಪತ್ತೆ?

|
Google Oneindia Kannada News

ದೆಹಲಿ, ಜೂನ್ 29: ಸೋಮವಾರದ ಬೆಳಿಗ್ಗಿನ ವರದಿ ಪ್ರಕಾರ ದೇಶದಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 5.48 ಲಕ್ಷ ದಾಟಿದೆ. ಇದುವರೆಗೆ ಒಟ್ಟು 16,475 ಮಂದಿ ಸಾವನ್ನಪ್ಪಿದ್ದಾರೆ. ಈ ಕರ್ನಾಟಕದಲ್ಲಿ ಇಂದು ಒಂದೇ ದಿನ 1105 ಜನರಿಗೆ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 14295ಕ್ಕೆ ಏರಿಕೆಯಾಗಿದೆ.

ಇದುವರೆಗೂ ಜಗತ್ತಿನಲ್ಲಿ ಒಟ್ಟು 1 ಕೋಟಿ (10,286,768) ಜನರಲ್ಲಿ ಕೊರೊನಾ ದೃಢವಾಗಿದೆ. ಅದರಲ್ಲಿ 505,266 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 5,583,478 ಜನರು ಈ ಸೋಂಕಿನಿಂದ ಚೇತರಿಕೆ ಕಂಡಿದ್ದಾರೆ.

Breaking: ಅನ್‌ಲಾಕ್‌2 ಮಾರ್ಗಸೂಚಿ ಪ್ರಕಟ: ಶಾಲೆ, ಜಿಮ್, ಚಿತ್ರಮಂದಿರಕ್ಕೆ ಸಿಕ್ಕಿಲ್ಲ ಅನುಮತಿBreaking: ಅನ್‌ಲಾಕ್‌2 ಮಾರ್ಗಸೂಚಿ ಪ್ರಕಟ: ಶಾಲೆ, ಜಿಮ್, ಚಿತ್ರಮಂದಿರಕ್ಕೆ ಸಿಕ್ಕಿಲ್ಲ ಅನುಮತಿ

ಮಹಾರಾಷ್ಟ್ರದಲ್ಲಿ ಜುಲೈ 31ರವರೆಗೆ ಲಾಕ್‌ಡೌನ್ ವಿಸ್ತರಣೆ ಮಾಡಿದ್ದರೆ, ನಾಗಲ್ಯಾಂಡ್‌ನಲ್ಲಿ ಜುಲೈ 15ರವರೆಗೂ ಲಾಕ್‌ಡೌನ್‌ ವಿಸ್ತರಣೆ ಮಾಡಲಾಗಿದೆ. ಇನ್ನುಳಿದಂತೆ ಇಂದು ಸಂಜೆ ವೇಳೆ ಯಾವ ರಾಜ್ಯದಲ್ಲಿ ಎಷ್ಟು ಕೇಸ್ ಪತ್ತೆಯಾಗಿದೆ? ಪೂರ್ತಿ ವಿವರ ಮುಂದೆ ಓದಿ....

ಮಹಾರಾಷ್ಟ್ರದಲ್ಲಿ 5 ಸಾವಿರಕ್ಕಿಂತ ಹೆಚ್ಚು ಕೇಸ್

ಮಹಾರಾಷ್ಟ್ರದಲ್ಲಿ 5 ಸಾವಿರಕ್ಕಿಂತ ಹೆಚ್ಚು ಕೇಸ್

* ಮಹಾರಾಷ್ಟ್ರದಲ್ಲಿ ಇಂದು ಒಂದೇ ದಿನ 5257 ಜನರಿಗೆ ಕೊರೊನಾ ವೈರಸ್ ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,69,883ಕ್ಕೆ ಏರಿಕೆಯಾಗಿದೆ. ಈವರೆಗೂ 7,610 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.

* * ದೆಹಲಿಯಲ್ಲಿ ಇಂದು 2084 ಮಂದಿಗೆ ಕೊವಿಡ್ ಸೋಂಕು ತಗುಲಿದೆ. ಈ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 85161ಕ್ಕೆ ಏರಿಕೆಯಾಗಿದೆ.

ತಮಿಳುನಾಡಿನಲ್ಲಿ 3949 ಸೋಂಕು

ತಮಿಳುನಾಡಿನಲ್ಲಿ 3949 ಸೋಂಕು

* ತಮಿಳುನಾಡಿನಲ್ಲಿ ಒಂದು 3949 ಜನರಿಗೆ ಕೊವಿಡ್ ದೃಢವಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿನ ಸಂಖ್ಯೆ 86,224ಕ್ಕೆ ಏರಿದೆ. ಈವರೆಗೂ 1,141 ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

* ಕೇರಳದಲ್ಲಿ ಹೊಸದಾಗಿ 121 ಮಂದಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4311ಕ್ಕೆ ಜಿಗಿದಿದೆ.

5 ರಾಜ್ಯಗಳಿಂದ ರೈಲು, ವಿಮಾನ ಸಂಚಾರ ನಿಲ್ಲಿಸಿ: ಕೇಂದ್ರಕ್ಕೆ ಸಿಎಂ ಮಮತಾ ಆಗ್ರಹ5 ರಾಜ್ಯಗಳಿಂದ ರೈಲು, ವಿಮಾನ ಸಂಚಾರ ನಿಲ್ಲಿಸಿ: ಕೇಂದ್ರಕ್ಕೆ ಸಿಎಂ ಮಮತಾ ಆಗ್ರಹ

ಹಿಮಾಚಲ ಪ್ರದೇಶದಲ್ಲಿ ಎಷ್ಟು ಸೋಂಕು?

ಹಿಮಾಚಲ ಪ್ರದೇಶದಲ್ಲಿ ಎಷ್ಟು ಸೋಂಕು?

* ಉತ್ತರ ಪ್ರದೇಶದಲ್ಲಿ ಇಂದು 672 ಕೊರೊನಾ ಕೇಸ್ ದಾಖಲಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 22,828ಕ್ಕೆ ಜಿಗಿದಿದೆ. 685 ಜನರು ಪ್ರಾಣ ಕಳೆದುಕೊಂಡಿದ್ದಾರೆ.

* ಹಿಮಾಚಲ ಪ್ರದೇಶದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತರ ಸಂಖ್ಯೆ 919ಕ್ಕೆ ಏರಿಕೆಯಾಗಿದೆ. ಈ ಪೈಕಿ 363 ಸಕ್ರಿಯ ಪ್ರಕರಣಗಳಾಗಿದ್ದು, 536 ಜನರು ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇದುವರೆಗೂ 7 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.

* ಗುಜರಾತ್‌ನಲ್ಲಿ ಹೊಸದಾಗಿ 626 ಜನರಿಗೆ ಕೊರೊನಾ ಅಂಟಿಕೊಂಡಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 32,023ಕ್ಕೆ ಜಿಗಿದಿದೆ.

ಆಂಧ್ರಪ್ರದೇಶದಲ್ಲಿ ಎಷ್ಟು ಕೇಸ್?

ಆಂಧ್ರಪ್ರದೇಶದಲ್ಲಿ ಎಷ್ಟು ಕೇಸ್?

* ಆಂಧ್ರ ಪ್ರದೇಶದಲ್ಲಿ ಇಂದು 783 ಜನರಿಗೆ ಕೊವಿಡ್ ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 13,891 ಏರಿದೆ.

* ತೆಲಂಗಾಣದಲ್ಲಿ ಹೊಸದಾಗಿ 975 ಜನರಿಗೆ ಕೊರೊನಾ ತಗುಲಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15,394ಕ್ಕೆ ಏರಿಕೆಯಾಗಿದೆ.

* ಉತ್ತರಾಖಂಡದಲ್ಲಿ ಹೊಸದಾಗಿ 8 ಕೊವಿಡ್ ಕೇಸ್ ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,831ಕ್ಕೆ ಏರಿದೆ.

* ಪಂಜಾಬ್‌ನಲ್ಲಿ ಇಂದು 202 ಜನರಿಗೆ ಕೊರೊನಾ ಮಹಾಮಾರಿ ವಕ್ಕರಿಸಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5418ಕ್ಕೆ ಏರಿದೆ.

ಪಶ್ಚಿಮ ಬಂಗಾಳದಲ್ಲಿ 624 ಪ್ರಕರಣ

ಪಶ್ಚಿಮ ಬಂಗಾಳದಲ್ಲಿ 624 ಪ್ರಕರಣ

* ಪಶ್ಚಿಮ ಬಂಗಾಳದಲ್ಲಿ ಇಂದು 624 ಮಂದಿಗೆ ಕೊರೊನಾ ಅಂಟಿಕೊಂಡಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 17,907ಕ್ಕೆ ಏರಿಕೆಯಾಗಿದೆ. 5,535 ಪ್ರಕರಣಗಳು ಸಕ್ರಿಯವಾಗಿದ್ದು, ಈವರೆಗೂ ರಾಜ್ಯದಲ್ಲಿ 653 ಜನರು ಸಾವನ್ನಪ್ಪಿದ್ದಾರೆ.

* ಪುದುಚೇರಿಯಲ್ಲಿ 42 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 690ಕ್ಕೆ ಏರಿಕೆಯಾಗಿದೆ.

* ಒಡಿಶಾದಲ್ಲಿ ಕಳೆದ ಗಂಟೆಯಲ್ಲಿ 245 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ಪತ್ತೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 6859ಕ್ಕೆ ಏರಿಕೆಯಾಗಿದೆ.

English summary
Statewise Coronavirus Cases: maharashtra reported 5257 cases and tamilnadu reported 3949 cases today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X