ಕೋವಿಡ್ 19 ಲಸಿಕೆ ಸ್ಪುಟ್ನಿಕ್ V 50 ನಗರಗಳಿಗೆ ವಿಸ್ತರಣೆ
ಹೈದರಾಬಾದ್, ಜುಲೈ 13: ಡಾ. ರೆಡ್ಡೀಸ್ ಲ್ಯಾಬೊರೇಟರಿಯು ಕೋವಿಡ್ 19 ಲಸಿಕೆ ಸ್ಪುಟ್ನಿಕ್ V ಪ್ರಾಯೋಗಿಕ ಯೋಜನೆಯನ್ನು 30 ನಗರಗಳಿಗೆ ವಿಸ್ತರಿಸಿದೆ.
ರಷ್ಯಾದ ಕೋವಿಡ್-19 ಲಸಿಕೆ ಸ್ಪುಟ್ನಿಕ್ Vಯನ್ನು ಭಾರತದಲ್ಲಿ ಮೇ 14ರಂದು ಬಳಕೆಗೆ ತರಲಾಗಿತ್ತು. ಈ ಬಗ್ಗೆ ಟ್ವೀಟ್ ಮಾಡಿರುವ ಡಾ ರೆಡ್ಡೀಸ್ ಲ್ಯಾಬೊರೇಟರಿ, ಮುಂದಿನ ವಾರಗಳಲ್ಲಿ ಸ್ಪುಟ್ನಿಕ್ V ಲಸಿಕೆಯನ್ನು ವಾಣಿಜ್ಯಾತ್ಮಕವಾಗಿ ಬಳಕೆಗೆ ವಿಸ್ತರಿಸುವಂತೆ ಮಾಡಲಾಗುವುದು ಎಂದು ಹೇಳಿದೆ.
ಗಮಲೇಯ ನ್ಯಾಷನಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಆಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್-V ಲಸಿಕೆಯ ನಿರ್ಬಂಧಿತ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಕ ಅನುಮತಿ ನೀಡಿದೆ.

ಹೈದರಾಬಾದ್ ನಲ್ಲಿ ಆರಂಭವಾದ ಲಸಿಕೆ ದೇಶದ 50ಕ್ಕೂ ಹೆಚ್ಚು ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ವಿಸ್ತರಿಸುವಂತೆ ತ್ವರಿತಗೊಳಿಸಲಾಗುವುದು ಎಂದು ಟ್ವೀಟ್ ಮೂಲಕ ಹೇಳಿದೆ.
ನೇರ ಹೂಡಿಕೆ ನಿಧಿಯಡಿ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ಸುಮಾರು 3 ಮಿಲಿಯನ್ ಡೋಸ್ ಗಳನ್ನು ಡಾ ರೆಡ್ಡೀಸ್ ಪಡೆದುಕೊಂಡಿದ್ದು, 125 ಮಿಲಿಯನ್ ಜನರಿಗೆ ಡೋಸ್ ಗಳನ್ನು ಭಾರತದಲ್ಲಿ ಮಾರಾಟ ಮಾಡಲಿದೆ.
ವೈಸಗ್, ಬೆಂಗಳೂರು, ಮುಂಬೈ, ನವಿ ಮುಂಬೈ, ಕೋಲ್ಕತ್ತಾ, ದೆಹಲಿ, ಎನ್‌ಸಿಆರ್, ಚೆನ್ನೈ, ಮಿರ್ಯಾಲಗುಡ, ವಿಜಯವಾಡ, ಬಡ್ಡಿ, ಕೊಲ್ಹಾಪುರ, ಕೊಚ್ಚಿ, ರಾಯಪುರ್, ಚಂಡೀಗಢ, ಪುಣೆ, ನಾಗ್ಪುರ್, ನಾಸಿಕ್ ಸೇರಿದಂತೆ ಹಲವೆಡೆ ವಿಸ್ತರಿಸಲಾಗುತ್ತಿದೆ.












Click it and Unblock the Notifications