ವಿಮಾನದಿಂದ ಇಳಿದು ಬಸ್ ಹತ್ತಿ ಎಂದ ಸ್ಪೈಸ್ ಜೆಟ್

ವಾರಣಾಸಿ, ಜೂನ್ 1: ವಿಮಾನದಲ್ಲಿ ಹೊರಟಿದ್ದ ಪ್ರಯಾಣಿಕರನ್ನು ಮಾರ್ಗಮಧ್ಯೆಯೇ ಇಳಿಸಿ ಬಸ್ ಹತ್ತುವಂತೆ ಸೂಚಿಸಿದ ಪ್ರಸಂಗ ಗುರುವಾರ ನಡೆದಿದೆ.

ದೆಹಲಿಯಿಂದ ಪಟ್ನಾಕ್ಕೆ ರಾತ್ರಿ ಹೊರಟಿದ್ದ ಸ್ಪೈಸ್‌ ಜೆಟ್‌ನ ವಿಮಾನವು ಪ್ರತಿಕೂಲ ಹವಾಮಾನದ ಕಾರಣ ಮಾರ್ಗ ಬದಲಿಸಿ 10.40 ಸಮಯದಲ್ಲಿ ವಾರಣಾಸಿಯಲ್ಲಿ ಇಳಿಯಿತು.

ವಾತಾವರಣ ಸಮರ್ಪಕವಾಗಿಲ್ಲ ಕಾರಣ ರಾತ್ರಿ 11.50ರ ವೇಳೆಗೆ ಎಲ್ಲರನ್ನೂ ವಿಮಾನದಿಂದ ಇಳಿಸಿ ಬಸ್‌ನಲ್ಲಿ ತೆರಳುವಂತೆ ಸೂಚಿಸಲಾಯಿತು. ಆದರೆ ಕೆಲವು ಪ್ರಯಾಣಿಕರು ವಿಮಾನದೊಳಗೆ ಗದ್ದಲ ಆರಂಭಿಸಿದ್ದರಿಂದ ಮತ್ತೆ ಅದನ್ನು 'ಬೇ'ಗೆ ಮರಳಿ ತರಬೇಕಾಯಿತು.

spicejet

ಪಟ್ನಾಗೆ ವಿಮಾನ ಹಾರಾಟ ನಡೆಸಲು ಸಾಧ್ಯವಿರುವ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಲಾಯಿತು. ಆದರೆ ಕೆಟ್ಟ ಹವಾಮಾನ ಮತ್ತು ಕೆಲವು ಪ್ರಯಾಣಿಕರ ಆಕ್ಷೇಪದ ಕಾರಣ ವಿಳಂಬವಾಯಿತು. ಅಲ್ಲದೆ, ವಿಮಾನ ಸಿಬ್ಬಂದಿಯ ಕರ್ತವ್ಯದ ಅವಧಿ ಮುಗಿಯುತ್ತಾ ಬಂದಿದ್ದರಿಂದ ಸಂಕಷ್ಟ ಹೆಚ್ಚಾಯಿತು ಎಂದು ಸ್ಪೈಸ್ ಜೆಟ್ ಹೇಳಿಕೆ ತಿಳಿಸಿದೆ.

ದೆಹಲಿ ಮೂಲಕ ಪಟ್ನಾಗೆ ತೆರಳಲು ನಿರ್ಧಾರ ಕೈಗೊಳ್ಳಲಾಗಿತ್ತು. ದೆಹಲಿಯಲ್ಲಿ ವಿಮಾನವನ್ನು ಬದಲಿಸದೆಯೇ ಅದೇ ವಿಮಾನದಲ್ಲಿ ಪಟ್ನಾಗೆ ಹೋಗುವುದಾಗಿ ಹೇಳಲಾಯಿತು. ಆದರೆ, 20 ಪ್ರಯಾಣಿಕರು ವಿಮಾನವನ್ನೇರಲು ನಿರಾಕರಿಸಿದರು.

ಪಟ್ನಾದ ಹವಾಮಾನ ಅನಿಶ್ಚಿತವಾಗಿದ್ದರಿಂದ ಪಟ್ನಾಕ್ಕೆ ಹಾರಾಟ ನಡೆಸಿದರೆ ಮತ್ತೆ ವಾರಣಾಸಿಗೆ ಮರಳಬೇಕಾದ ಸಾಧ್ಯತೆ ಹೆಚ್ಚಿದ್ದರಿಂದ ವಿಮಾನ ಹಾರಾಟ ನಡೆಸಲಿಲ್ಲ. ಬಳಿಕ ಬೆಳಿಗ್ಗೆ ವಾತಾವರಣ ಸಹಜ ಸ್ಥಿತಿಗೆ ಬಂದಿದ್ದರಿಂದ ವಿಮಾನ ಹಾರಾಟ ನಡೆಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+