11300 ಕೋಟಿ ರೂ ಸ್ಪೆಕ್ಟ್ರಂ ಹರಾಜು: ಆದಾಯ ಯಾರಿಗೆ?

spectrum-round-3-auction-starts-rs-11300-cr-revenue-expected
ನವದೆಹಲಿ, ಫೆ. 3: ದೂರ ಸಂಪರ್ಕ ಇಲಾಖೆಯು ತನ್ನ ಅಧೀನದಲ್ಲಿರುವ ಸ್ಪೆಕ್ಟ್ರಂ ಅನ್ನು ಖಾಸಗಿ ಸೇವಾ ಕಂಪನಿಗಳಿಗೆ ಹರಾಜು ಮೂಲಕ ಇಂದು ವಿತರಿಸಲಿದೆ. ಹರಾಜು ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.

ಆದರೆ ಈ ಸಂದರ್ಭದಲ್ಲಿ 2ಜಿ ಸ್ಪೆಕ್ಟ್ರಂ ಹಗರಣವೇ ದುಃಸ್ವಪ್ನವಾಗಿ ಕಾಣುತ್ತಿದೆ. ಸರಕಾರದ ಸೇವೆಯೊಂದು ಲಕ್ಷಾಂತರ ಕೋಟಿ ರೂ. ಭ್ರಷ್ಟಚಾರಕ್ಕೆ ಕಾರಣವಾಗಿದ್ದು ನಿಜಕ್ಕೂ ಇಡೀ ದೇಶವನ್ನು ಬೆಚ್ಚಿಬೀಳಿಸಿತ್ತು. 2ಜಿ ಸ್ಪೆಕ್ಟ್ರಂ ಹಗರಣದ ಸತ್ಯಾಸತ್ಯತೆ ಬಹಿರಂಗವಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಈ ಮಧ್ಯೆ ಮತ್ತೊಂದು ಸ್ಪೆಕ್ಟ್ರಂ ಹರಾಜು ನಡೆದಿದೆ.

ಹಾಗಂತ ಇಲಾಖೆ ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳುವಂತಿಲ್ಲ. ತನ್ನ ಅಧೀನದಲ್ಲಿರುವ ಸ್ಪೆಕ್ಟ್ರಂ ಅನ್ನು ಖಾಸಗಿ ಸೇವಾ ಕಂಪನಿಗಳಿಗೆ ವಿತರಿಸಲೇಬೇಕು.

ಗಮನಾರ್ಹವೆಂದರೆ ಈ ಬಾರಿ ಸ್ಪೆಕ್ಟ್ರಂ ಹರಾಜಿನಿಂದ 11,300 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಇದರಲ್ಲಿ ಒಂದು ನಯಾ ಪೈಸೆಯೂ ಲಂಚದ ಲೆಕ್ಕಕ್ಕೆ ಹೋಗದೆ ಅಷ್ಟೂ ಸರಕರಿ ಖಜಾನೆ ಸೇರಲಿ ಎಂಬುದು ದೇಶದ ಪ್ರತಿಯೊಬ್ಬ ಪ್ರಜೆಯ ಆಶಯವಾಗಿದೆ.

ಆದರೆ ಹಿಂದಿನ ಅನುಭವ ಮತ್ತು ಮುಂದಿರುವ ಲೋಕಸಭಾ ಚುನಾವಣೆಯನ್ನು ಗಮನಿಸಿದಾಗ ಇದು ಸಾಧ್ಯವಾದೀತಾ? ಎಂಬುದೇ ಬಿಲಿಯನ್ ಡಾಲರ್ ಪ್ರಶ್ನೆ.

ಇದು ದೇಶದಲ್ಲಿ ನಡೆಯುತ್ತಿರುವ ಮೂರನೆಯ ಸುತ್ತಿನ ಸ್ಪೆಕ್ಟ್ರಂ ಹರಾಜು. ಎಂಟು ಟೆಲಿಕಾಂ ಕಂಪನಿಗಳು ಸ್ಪೆಕ್ಟ್ರಂ ಬೇಡಿಕೆಯಿಟ್ಟು, ಹರಾಜಿನಲ್ಲಿ ಪಾಲ್ಗೊಂಡಿವೆ. ಈ ಹರಾಜಿನಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಕನಿಷ್ಟ 11,300 ಕೋಟಿ ರೂ. ಸಂದಾಯವಾಗಲಿದೆ.

ದೂರ ಸಂಪರ್ಕ ಇಲಾಖೆಯು (Department of Telecom) ಸುಮಾರು 1800 ಮೆಗಾ ಹರ್ಟ್ಸ್ (MHz) ಬ್ಯಾಂಡ್‌ ನಲ್ಲಿ 385 ಮೆಗಾ ಹರ್ಟ್ಸ್ ರೇಡಿಯೋ ತರಾಂಗಂತರ ಹಾಗೂ 900 ಮೆಗಾ ಹರ್ಟ್ಸ್ ಬ್ಯಾಂಡ್‌ನಲ್ಲಿ 46 ಮೆಗಾ ಹರ್ಟ್ಸ್ ತರಂಗಾಂತರವನ್ನು ಹರಾಜಿಗೆ ಇಟ್ಟಿದೆ.

ಪ್ರಸಕ್ತ ವರ್ಷ ಇಷ್ಟೊಂದು ಪ್ರಮಾಣದ ಸ್ಪೆಕ್ಟ್ರಂ ಹರಾಜಿನಿಂದ ಒಂದು ಬಾರಿ ಪಾವತಿಸುವ ಸ್ಪೆಕ್ಟ್ರಂ ಶುಲ್ಕ, ವಾರ್ಷಿಕ ಪರವಾನಿಗಿ ಶುಲ್ಕ ಮತ್ತು ಹಾಲಿ ಹರಾಜು ಮೊತ್ತ ಸೇರಿ ಒಟ್ಟು 40,874.50 ಕೋಟಿ ರೂ. ಆದಾಯ ಬರುವ ಅಂದಾಜಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+