Train Accident: ಭದ್ರಕ್- ಚೆನ್ನೈ ವಿಶೇಷ ರೈಲಿಗೆ ಮೃತದೇಹ ಸಾಗಿಸುವ ವ್ಯಾನ್ ಜೋಡಣೆ ಸಾಧ್ಯತೆ
ನವದೆಹಲಿ, ಜೂನ್. 04: ದೇಶವನ್ನೇ ಬೆಚ್ಚಿಬೀಳಿಸಿರುವ ಒಡಿಶಾ ಭೀಕರ ರೈಲು ಅಪಘಾತದಿಂದ ಪಾರಾಗಿರುವ ಚೆನ್ನೈನ ಪ್ರಯಾಣಿಕರನ್ನು ತಮ್ಮ ಸ್ಥಳಗಳಿಗೆ ತಲುಪಿಸಲು ಭಾನುವಾರ ಒಂದು ವಿಶೇಷ ರೈಲು ತೆರಳಲಿದೆ. ಭಾನುವಾರ (ಜೂನ್. 04) ಮಧ್ಯಾಹ್ನ 1 ಗಂಟೆಗೆ ಭದ್ರಕ್‌ನಿಂದ ಈ ವಿಶೇಷ ರೈಲು ಹೊರಡಲಿದೆ ಎಂದು ಒಡಿಶಾದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಾಹಿತಿ ನೀಡಿದೆ.
"ಮಧ್ಯಾಹ್ನ 1 ಗಂಟೆಗೆ ಭದ್ರಕ್‌ನಿಂದ ವಿಶೇಷ ರೈಲು ಹೊರಡಲಿದ್ದು, ಚೆನ್ನೈಗೆ ತೆರಳಲಿದೆ. ಇದು ಸಿಟಿಸಿ, ಬಿಬಿಆರ್‌ಸಿ ಮತ್ತು ಎಲ್ಲಾ ಪ್ರಮುಖ ಸ್ಥಳಗಳಲ್ಲಿ ನಿಲುಗಡೆಗಳನ್ನು ಹೊಂದಿರುತ್ತದೆ. ಅಗತ್ಯವಿದ್ದರೆ ದುರಂತದಲ್ಲಿ ಮೃತಪಟ್ಟ ಪ್ರಯಾಣಿಕರ ಮೃತ ದೇಹವನ್ನು ಸಾಗಿಸಲು ರೈಲಿನಲ್ಲಿ ಪಾರ್ಸೆಲ್ ವ್ಯಾನ್ ಅನ್ನು ಸಹ ಜೋಡಿಸಲಾಗುತ್ತದೆ" ಎಂದು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.

ಶನಿವಾರ ಸುಮಾರು ಹನ್ನೆರಡು ಕುಟುಂಬಗಳ ಪ್ರಯಾಣಿಕರು, ಹೆಚ್ಚಾಗಿ ಬಿಹಾರ ಮತ್ತು ಪಶ್ಚಿಮ ಬಂಗಾಳದ ಸ್ಥಳೀಯರು, ಶನಿವಾರ ಸಂಜೆ ಚೆನ್ನೈನಿಂದ ವಿಶೇಷ ರೈಲಿನಲ್ಲಿ ಹೊರದ್ದಾರೆ. ಅಪಘಾತಕ್ಕೆ ಒಳಗಾದ ರೈಲಿನಲ್ಲಿದ್ದ ಪ್ರಯಾಣಿಕರ ಸಂಬಂಧಿಕರು. ಕೆಲವರು ತಮ್ಮ ಗಾಯಗೊಂಡ ಪ್ರೀತಿಪಾತ್ರರಿಗೆ ಸಹಾಯ ಮಾಡಲು ಹೋಗುತ್ತಿದ್ದರೆ, ಇತರರು ತಮ್ಮವರ ಜೊತೆಗೆ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ತೆರಳಿದ್ದಾರೆ.
#TrainAccidentInOdisha
— I & PR Department, Odisha (@IPR_Odisha) June 4, 2023
A special train will start from Bhadrak at 1 pm and will run to Chennai. It will have stoppages at CTC, BBSR and all major places enroute.
The train will also have a parcel van attached to carry dead body, if required.
ಪಶ್ಚಿಮ ಬಂಗಾಳದ ಶಾಲಿಮಾರ್‌ನಿಂದ ಚೆನ್ನೈಗೆ ಹೊರಟಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ಶುಕ್ರವಾರ ರಾತ್ರಿ ಬಾಲಸೋರ್‌ನಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಹಳಿತಪ್ಪಿತು. ಕೋರಮಂಡಲ್ ಎಕ್ಸ್‌ಪ್ರೆಸ್‌ನ ಕೆಲವು ಬೋಗಿಗಳು ಇತರ ಹಳಿಗಳ ಮೇಲೆ ಬಿದ್ದವು, ಮತ್ತು ಇನ್ನೊಂದು ರೈಲು, ಯಶವಂತಪುರ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದು ಅದರ ಕೆಲವು ಬೋಗಿಗಳನ್ನು ಹಳಿತಪ್ಪಿಸಿ ಮತ್ತೊಂದು ದುರಂತಕ್ಕೆಕಾರಣವಾಯಿತು. ಅಪಘಾತದಲ್ಲಿ ಕನಿಷ್ಠ 288 ಜನರು ಸಾವನ್ನಪ್ಪಿದರು ಮತ್ತು 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಶನಿವಾರ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದ ಕಾಯುವ ಕೊಠಡಿಯಲ್ಲಿ ಜನರು ವಿಶೇಷ ರೈಲು ಹತ್ತಲು ಕಾದು ಕುಳಿತಿದ್ದರು. ಶನಿವಾರ ಬೆಳಗಿನ ಆರಂಭಿಕ ವರದಿಗಳ ಪ್ರಕಾರ ಅಪಘಾತದಲ್ಲಿ ಸುಮಾರು 35 ತಮಿಳುನಾಡಿನ ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 80 ಮಂದಿ ಗಾಯಗೊಂಡಿದ್ದಾರೆ ಎಂದು ಸೂಚಿಸಿದೆ. ಆದರೆ, ಬಳಿಕ ಮೃತರು ಚೆನ್ನೈಗೆ ತೆರಳುವ ಪಶ್ಚಿಮ ಬಂಗಾಳದ ನಿವಾಸಿಗಳು ಎಂದು ರಾಜ್ಯದ ಹಿರಿಯ ಅಧಿಕಾರಿಯೊಬ್ಬರು ನಂತರ ಸ್ಪಷ್ಟಪಡಿಸಿದ್ದಾರೆ. ಪರಿಣಾಮವಾಗಿ, ಅವರನ್ನು ಪಶ್ಚಿಮ ಬಂಗಾಳದ ಪ್ರಯಾಣಿಕರು ಎಂದು ಮರು ವರ್ಗೀಕರಿಸಲಾಯಿತು.

"ಕಾಯ್ದಿರಿಸಿದ ಪ್ರಯಾಣಿಕರ ಪಟ್ಟಿಯ ನಮ್ಮ ವಿಶ್ಲೇಷಣೆಯು ತಮಿಳುನಾಡು ಮೂಲದ ಕನಿಷ್ಠ ಸಾವುನೋವುಗಳನ್ನು ಸೂಚಿಸುತ್ತದೆ. ಸಂಭಾವ್ಯವಾಗಿ ಒಂದು ಅಥವಾ ಇಬ್ಬರು ಮೃತಪಟ್ಟಿರಬಹುದು. ಆದರೆ, ಸುಮಾರು 50-60 ತಮಿಳರು ಗಾಯಗೊಂಡಿದ್ದಾರೆ ಎಂದು ನಾವು ದೃಢೀಕರಿಸಬಹುದು. ಹೌರಾದಿಂದ ಚೆನ್ನೈಗೆ 350 ಬುಕಿಂಗ್‌ಗಳಲ್ಲಿ ಸುಮಾರು 100 ತಮಿಳುನಾಡು ಮೂಲದವರಿಂದ ಬಂದವು. ನಾವು ಖಚಿತವಾದ ಹೇಳಿಕೆಗಳನ್ನು ನೀಡುವ ಮೊದಲು ನಾವು ಇನ್ನೂ ಕಾಯ್ದಿರಿಸದ ಕೋಚ್‌ಗಳಿಂದ ಸಾವುನೋವುಗಳ ವರದಿ ಪಡೆಯುತ್ತಿದ್ದೇವೆ" ಎಂದು ಅಧಿಕಾರಿ ಹೇಳಿದ್ದಾರೆ.
ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ದಿವಂಗತ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಶತಮಾನೋತ್ಸವ ಆಚರಣೆಯ ವಿಶೇಷ ಕಾರ್ಯಕ್ರಮಗಳನ್ನು ಬಿಟ್ಟು, ಪರಿಹಾರ ಕ್ರಮಗಳ ಮೇಲ್ವಿಚಾರಣೆಗಾಗಿ ಚೆನ್ನೈ ಸೆಂಟ್ರಲ್ ಸ್ಟೇಷನ್‌ನಲ್ಲಿರುವ ಸಹಾಯ ಕೇಂದ್ರ ಮತ್ತು ನಿಯಂತ್ರಣ ಕಚೇರಿಗೆ ಭೇಟಿ ನೀಡಿದರು. ಇವರೊಂದಿಗೆ ಮುಖ್ಯ ಕಾರ್ಯದರ್ಶಿ ಇರಾಯಂಬು, ಡಿಜಿಪಿ ಸೈಲೇಂದ್ರ ಬಾಬು ಇದ್ದರು.












Click it and Unblock the Notifications