SparkleBox.School-ನ ಹೊಸ ಅಭಿಮಾನಿಯಾಗಿ ಝಿವಾ ಧೋನಿ
ಬೆಂಗಳೂರು, ಸೆಪ್ಟೆಂಬರ್ 29: ಸ್ಪರ್ಕಲ್‌ಬಾಕ್ಸ್.ಸ್ಕೂಲ್(SparkleBox.School)ಭಾರತದಲ್ಲಿ ಶಾಲಾಪೂರ್ವಕಲಿಕೆಯ ಪರಿಕಲ್ಪನೆಗೆ ಹೊಸ ರೂಪವನ್ನು ನೀಡಿದೆ ಮತ್ತು 2-6 ವರ್ಷ ವಯಸ್ಸಿನ ಮಕ್ಕಳಿಗಾಗಿ ಹೊಸ ಚಟುವಟಿಕೆ ಆಧಾರಿತ ಕಲಿಕಾ ಕಾರ್ಯಕ್ರಮವನ್ನು ಆರಂಭಿಸಿದ್ದು, ಸಂಸ್ಥೆಯು ಇದರಿಂದ ಮನೆಮಾತಾಗಿದೆ. ಮಗುವಿನ ಬೆಳವಣಿಗೆಯ ವರ್ಷಗಳಲ್ಲಿ ಮನೆಯಲ್ಲಿ ಶಾಲಾಪೂರ್ವ ಕಲಿಕೆಗೆ ಕೌಶಲ್ಯ ಅಭಿವೃದ್ಧಿ, ಪರಿಕಲ್ಪನೆಯನ್ನುಒದಗಿಸುವುದು ಮತ್ತು ಸೃಜನಶೀಲತೆಯ ಬೆಳವಣಿಗೆಗಳ ವಿಶಿಷ್ಟ ಸಂಯೋಜನೆ ಮುಖ್ಯವಾಗಿದೆ. ಇತ್ತೀಚೆಗೆ, ಭಾರತೀಯ ಮಾಜಿ ಕ್ರಿಕೆಟಿಗ ಎಂಎಸ್‍ಧೋನಿಯವರ ಪತ್ನಿ ಸಾಕ್ಷಿಧೋನಿ, SparkleBox.Schoolನ ಹೆಮ್ಮೆಯ ಪಾಲಕರ ದೀರ್ಘ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಝಿವಾ ಅವರ ಹೆಮ್ಮೆಯ ತಾಯಿಯಾಗಿ, ಸಾಕ್ಷಿಧೋನಿ ಶೈಕ್ಷಣಿಕವಾದ ಹಾಗೂ ಆಸಕ್ತಿದಾಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ಇಷ್ಟಪಡುತ್ತಾರೆ ಮತ್ತುಆದ್ದರಿಂದ ಅವಳು SparkleBox.School ಅನ್ನುಆಯ್ಕೆ ಮಾಡಿದ್ದಾರೆ. ಸಾಕ್ಷಿಧೋನಿ ಮತ್ತು SparkleBox.School ಇಂದು ಬಿಡುಗಡೆ ಮಾಡಿರುವ ವೀಡಿಯೋದಲ್ಲಿ, ತಾಯಿ-ಮಗಳ ಜೋಡಿಯು ಕಿಟ್‍ಅನ್ನು ನೋಡುತ್ತಿರುವುದು ಮತ್ತು ವಿವಿಧ ಕಲಿಕಾ ಚಟುವಟಿಕೆಗಳನ್ನು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಮಕ್ಕಳ ಅರಿವಿನ ಬೆಳವಣಿಗೆಯನ್ನು ಉತ್ತೇಜಿಸಲು ಅದೇ ಸಮಯದಲ್ಲಿ ಮೋಜಿನ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿಕೊಳ್ಳಲು ಸಹಾಯ ಮಾಡುವ ಇಂತಹ ವಿಶಿಷ್ಟವಾದ ಕಾರ್ಯಕ್ರಮವನ್ನುSparkleBox.School ವಿನ್ಯಾಸಗೊಳಿಸಿದೆ ಎಂದು ಸಾಕ್ಷಿಧೋನಿ ಅಭಿಪ್ರಾಯ ಪಡುತ್ತಾರೆ.
SparkleBox.School, ಪೂರ್ವ-ಪ್ರಾಥಮಿಕದಿಂದ ಕೆ2 (ಯುಕೆಜಿ) ವರೆಗಿನ ಮಕ್ಕಳಿಗೆ ಎಲ್ಲವನ್ನೂಒಂದೇ ಸ್ಥಳದಲ್ಲಿ ಒದಗಿಸುವ ಸಂಸ್ಥೆಯಾಗಿದೆ ಮತ್ತು ಸಾಹಿತ್ಯ, ಸಂಖ್ಯಾಶಾಸ್ತ್ರ, ಪರಿಸರ ವಿಜ್ಞಾನ, ಕಲೆ ಮತ್ತುಕರಕುಶಲ ಕಲೆ ಮತ್ತು ನೃತ್ಯದಂತಹ ವಿಷಯಗಳನ್ನು ಒಳಗೊಂಡಿದೆ. ಕಿಟ್‍ಗಳಲ್ಲಿ ನೀಡುವ ವರ್ಕ್ ಬುಕ್‌ಗಳು, ಡ್ರಾಯಿಂಗ್ ಪುಸ್ತಕಗಳು, ಫ್ಲ್ಯಾಶ್ ಕಾರ್ಡ್‍ಗಳು, ಚಟುವಟಿಕೆ ಪ್ಯಾಕೇಜುಗಳು ಮುಂತಾದ ಪ್ರತಿಯೊಂದು ಐಟಂಅನ್ನು ಪರಿಣಿತ ಶಿಕ್ಷಕರ ಸಮಿತಿಯಿಂದ ವಿನ್ಯಾಸಗೊಳಿಸಲಾಗಿದೆ ಮತ್ತು ಪ್ರಮಾಣಿತ ಶಿಶುಪಾಲನಾ ವೃತ್ತಿಪರರುಇದನ್ನು ಅನುಮೋದಿಸಿದ್ದಾರೆ.

SparkleBox.Schoolನ ಬಿಸಿನೆಸ್ ಹೆಡ್ ಸಾಜೀದ್ ಮುನ್ಶಿ, " SparkleBox.Schoolನ ನಾವು ಮನೆಯೆ ಮೊದಲ ಪಾಠಶಾಲೆ ಎನ್ನುವ ನಾಣ್ಣುಡಿಯನ್ನು ನಂಬುತ್ತೇವೆ. ಮನೆಯಲ್ಲಿ ಪರಿಣಾಮಕಾರಿ ಶಾಲಾಪೂರ್ವಕಲಿಕೆಯು ಮುಗ್ದ ಮತ್ತು ಚಿಕ್ಕ ಮಕ್ಕಳ ಮನಸ್ಸುಗಳನ್ನು ಉತ್ತಮವಾಗಿರೂಪಿಸುತ್ತದೆ. ನಮ್ಮ ಪ್ರೀ ಸ್ಕೂಲ್ ಪಠ್ಯಕ್ರಮವನ್ನು ಪೂರ್ವ-ಪ್ರಾಥಮಿಕ ವಿದ್ಯಾರ್ಥಿಗಳಿಗೆ ಹೇಳಿ ಮಾಡಿಸಿದ ಕಲಿಕಾ ಕಾರ್ಯಕ್ರಮವಾಗಿ ಸಿದ್ಧಪಡಿಸಲಾಗಿದೆ.
ನಮ್ಮ ಚಟುವಟಿಕೆ ಆಧಾರಿತ ಕಲಿಕಾ ಕಾರ್ಯಕ್ರಮವು ಕನಿಷ್ಟ ಪರದೆಯ ಸಮಯದೊಂದಿಗೆ ಆರಂಭಿಕ ಅಡಿಪಾಯ ಕಲಿಕೆಯನ್ನು ಪ್ರೋತ್ಸಾಹಿಸುತ್ತದೆ. "ನಮ್ಮ ಪ್ರಯತ್ನಗಳನ್ನು ನಮ್ಮಎಲ್ಲಾ ಪಾಲಕರು ಪ್ರಶಂಸಿಸಿದ್ದಾರೆ ಮತ್ತು ವಿಶೇಷವಾಗಿ ನಮ್ಮಕಾರ್ಯಕ್ರಮದಲ್ಲಿ ಸಾಕ್ಷಿಧೋನಿ ಅವರು ಆಸಕ್ತಿಯನ್ನು ತೋರಿಸಿದ್ದಾರೆ ಮತ್ತುಅವರು ಈ ಕಾರ್ಯಕ್ರಮವನ್ನು ಅನುಮೋದಿಸಿದ್ದಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ" ಎಂದು ಹೇಳಿದರು.

SparkleBox.School ಕುರಿತು:
SparkleBox.School 2020 ರ ಮಧ್ಯದಲ್ಲಿ ಕೋವಿಡ್ -19 ಸಾಂಕ್ರಾಮಿಕಮತ್ತುಅದರ ನಂತರದ ಲಾಕ್‌ಡೌನ್‌ನಲ್ಲಿ ಪ್ರಾರಂಭವಾಯಿತು. ಈ ಕಾರ್ಯಕ್ರಮವು ಮನೆ-ಶಾಲೆಯನ್ನು ವಿನೋದಮಯವಾಗಿಸುವ ಮತ್ತುಶೈಕ್ಷಣಿಕವಾಗಿಸುವ ಗುರಿಯನ್ನು ಹೊಂದಿದೆ. ಕೆ2 ಪಠ್ಯಕ್ರಮದ ಈ ಪೂರ್ವಪ್ರಾಥಮಿಕ ಕಲಿಕೆಯು ಮಕ್ಕಳನ್ನು ಮೋಜಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಕ್ಕಳಲ್ಲಿಅರಿವಿನ ಬೆಳವಣಿಗೆಗೆ ಸಹಾಯಮಾಡುತ್ತದೆ.
ಇದು ಮಕ್ಕಳಿಗೆ ಅತ್ಯಂತ ಪರಿಣಾಮಕಾರಿ ಕಲಿಕಾ ಅನುಭವವನ್ನುಒದಗಿಸಲು ರಚಿಸಲಾದ ಸಮಗ್ರ ಪೂರ್ವಪ್ರಾಥಮಿಕ ಕಲಿಕಾ ಕಾರ್ಯಕ್ರಮವಾಗಿದೆ. SparkleBox.Schoolಅನ್ನು ಮಕ್ಕಳ ಶಾಲಾ ಪೂರ್ವ ಕಲಿಕೆಗಾಗಿ ವಿನ್ಯಾಸಗೊಳಿಸಲಾಗಿದ್ದು, ಮಗುವಿಗೆ ಅಗತ್ಯವಿರುವ ಎಲ್ಲವನ್ನೂಅವರ ಮನೆಯ ಅನುಕೂಲಕ್ಕೆ ತಕ್ಕಂತೆ ಒದಗಿಸಲಾಗುತ್ತದೆ.












Click it and Unblock the Notifications