ಅಖಿಲೇಶ್ ಬಣಕ್ಕೆ 'ಸೈಕಲ್' ಗುರುತು ಸಿಕ್ಕಿದ್ದು ಹೇಗೆ?

Subscribe to Oneindia Kannada

ಬೆಂಗಳೂರು, ಜನವರಿ 17: ಸಮಾಜವಾದಿ ಪಕ್ಷದ ಚುನಾವಣಾ ಗುರುತು ಸೈಕಲ್ ಅಖಿಲೇಶ್ ಬಣದ ಪಾಲಾಗಿದೆ. ಚುನಾವಣಾ ಆಯೋಗ ಅಖಿಲೇಶ್ ಬಣಕ್ಕೆ ಸೈಕಲ್ ನೀಡಲು ಕಾರಣವಾಗಿದ್ದು ಅವರ ಬಣದ ಸಂಖ್ಯಾಬಲ ಎನ್ನುವುದು ಗಮನಾರ್ಹ ಸಂಗತಿ.

ಸೋಮವಾರ(ಜನವರಿ 16)ದಂದು 42 ಪುಟಗಳ ಮಹತ್ವದ ಆದೇಶ ನೀಡಿದ ಚುನಾವಣಾ ಆಯೋಗ, ಅಖಿಲೇಶ್ ಯಾದವ್ ಬಣ ನಿಜವಾದ ಸಮಾಜವಾದಿ ಪಕ್ಷ ಎಂದು ಹೇಳಿದೆ. ಮಾತ್ರವಲ್ಲದೇ ಆದೇಶದಲ್ಲಿ ಬಣದ ಸಂಖ್ಯಾಬಲವನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ. ಸಮಾಜವಾದಿ ಪಕ್ಷದ ಹೆಚ್ಚಿನ ಪದಾಧಿಕಾರಿಗಳು ಅಖಿಲೇಶ್ ಯಾದವ್ ಜತೆಗಿದ್ದಾರೆ; ಮುಲಾಯಂ ಸಿಂಗ್ ಯಾದವ್ ಜತೆಗಿಲ್ಲ ಎಂಬುದನ್ನು ಆದೇಶದಲ್ಲಿ ಹೇಳಲಾಗಿದೆ.

SP cycle feud: How the numbers added up in favour of Akhilesh

ರಾಮ್ ಗೋಪಾಲ್ ಯಾದವ್ ಚುನಾವಣಾ ಆಯೋಗಕ್ಕೆ ನೀಡಿದ ಮನವಿಯಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ 31 ಸದಸ್ಯರು, ಪಕ್ಷದ 5,242 ಪ್ರತಿನಿಧಿಗಳು, 195 ಎಂಎಲ್ಎಗಳು, 48 ಎಂಎಲ್ಸಿಗಳು ಹಾಗೂ 4 ಲೋಕಸಭಾ ಸದಸ್ಯರು ಮತ್ತು 11 ರಾಜ್ಯಸಭಾ ಸದಸ್ಯಯರು ಅಖಿಲೇಶ್ ಯಾದವ್ ಜತೆಗಿದ್ದಾರೆ ಎಂದು ಹೇಳಿದ್ದರು. ಅಲ್ಲದೆ ಇವರೆಲ್ಲಾ ಕಳೆದ ತಿಂಗಳು ಅಖಿಲೇಶ್ ಯಾದವ್ ಬೆಂಬಲಿಸಿ ನಡೆದಿ
ದ್ದ ಸಮಾವೇಶದಲ್ಲಿಯೂ ಭಾಗವಹಿಸಿದ್ದರು ಎಂದು ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದರು.

ಆದರೆ ಇದಕ್ಕೆ ಮುಲಾಯಂ ಬಣ ಪ್ರತಿವಾದ ಹೂಡಿತ್ತು. "ರಾಮ್ ಗೋಪಾಲ್ ಯಾದವ್ ಸಭೆ ಕರೆದಿದ್ದೇ ಕಾನೂನು ಬಾಹಿರ. ಯಾಕೆಂದರೆ ಅವರನ್ನು ಅದಕ್ಕೂ ಮೊದಲೇ ಪಕ್ಷದಿಂದ ಉಚ್ಚಾಟಿಸಲಾಗಿತ್ತು," ಎಂದು ಅವರು ವಾದಿಸಿದ್ದರು. ಆದರೆ ಚುನಾವಣಾ ಆಯೋಗ ಮಾತ್ರ ರಾಮ್ ಗೋಪಾಲ್ ಯಾದವ್ ಉಚ್ಛಾಟನೆಯ ವೇಳೆ ಪಕ್ಷದ ಸಂವಿಧಾನವನ್ನು ಪಾಲಿಸಲಾಗಿಲ್ಲ ಎಂದು ಹೇಳಿ ಮುಲಾಯಂ ಬಣದ ವಾದವನ್ನು ಪುರಸ್ಕರಿಸಿಲ್ಲ. "ಸ
ಭೆ ಕರೆಯುವ ಸಂದರ್ಭದಲ್ಲಿ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಮತ್ತು ಸಭೆ ಕರೆಯಲು ಅವರಿಗೆ ಹಕ್ಕುಗಳಿದ್ದವು," ಎಂದು ಚುನಾವಣಾ ಆಯೋಗ ಆದೇಶದಲ್ಲಿ ಹೇಳಿದೆ.

ಆಯೋಗವು 'ಜನಪ್ರತಿನಿಧಿ ಕಾಯಿದೆ'ಯ ಸೆಕ್ಷನ್ 29ಎ ಅಡಿಯಲ್ಲಿ ತನ್ನ ಅಂತಿಮ ಆದೇಶ ನೀಡಿದೆ. ಕಾಯಿದೆಗೆ, ೨೯ಎ ಮೂಲಕ ಪಕ್ಷದ ಸಂವಿಧಾನವನ್ನೂ ಕಾಯಿದೆಯ ಅಡಿಯಲ್ಲಿ ತರಲಾಗಿತ್ತು. ಇದಕ್ಕೂ ಹಿಂದೆ ಇಂಥ ಘಟನೆಗಳಾದಾಗ ಆದೇಶ ನೀಡುವುದು ಸುಲಭ ಸಾಧ್ಯವಾಗಿರಲಿಲ್ಲ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
SP cycle feud: How the numbers added up in favour of Akhilesh. Election Commission of India which ruled that the Akhilesh Yadav led faction was the real Samajwadi Party.
Please Wait while comments are loading...