ಮುಂಗಾರು ಚುರುಕು; ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ಭಾರೀ ಮಳೆ ಮುನ್ಸೂಚನೆ

ನವದೆಹಲಿ, ಜುಲೈ 08: ಗುರುವಾರದಿಂದ ದೇಶದ ಹಲವೆಡೆ ಮತ್ತೆ ಮುಂಗಾರು ಚುರುಕುಗೊಳ್ಳಲಿದ್ದು, ಕೆಲವು ರಾಜ್ಯಗಳಲ್ಲಿ ಭಾರೀ ಮಳೆಯಾಗಲಿರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜೂನ್ 19ರಿಂದ ನೈಋತ್ಯ ಮುಂಗಾರು ಬಿಡುವು ಪಡೆದುಕೊಂಡಿತ್ತು. ಜುಲೈ 7ರ ನಂತರವಷ್ಟೇ ಮುಂಗಾರು ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಅದರಂತೆ ಗುರುವಾರದಿಂದ ಮುಂಗಾರು ಮತ್ತೆ ಆರಂಭಗೊಳ್ಳುತ್ತಿದ್ದು, ಮಹಾರಾಷ್ಟ್ರ, ಗೋವಾ, ಕೇರಳ, ಕರ್ನಾಟಕದಲ್ಲಿ ಜುಲೈ 11ರವರೆಗೂ ಭಾರೀ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಮುಂದೆ ಓದಿ...

 ಕರಾವಳಿ ಪ್ರದೇಶಗಳಲ್ಲಿ ಮಳೆ ಹೆಚ್ಚು

ಕರಾವಳಿ ಪ್ರದೇಶಗಳಲ್ಲಿ ಮಳೆ ಹೆಚ್ಚು

ಮಹಾರಾಷ್ಟ್ರ, ಗೋವಾ, ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಲಿರುವುದಾಗಿ ಇಲಾಖೆ ತಿಳಿಸಿದೆ. ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿಯಿಂದ ನೈಋತ್ಯ ಮುಂಗಾರು ಬಲಗೊಳ್ಳಲಿದ್ದು, ಕರಾವಳಿ ರಾಜ್ಯಗಳು ಹೆಚ್ಚಿನ ಮಳೆಗೆ ಒಡ್ಡಿಕೊಳ್ಳಲಿವೆ ಎಂದು ತಿಳಿಸಿದೆ.

 ಜುಲೈ 8ರಿಂದ ಪೂರ್ವ ಭಾಗದಲ್ಲಿ ಮುಂಗಾರು

ಜುಲೈ 8ರಿಂದ ಪೂರ್ವ ಭಾಗದಲ್ಲಿ ಮುಂಗಾರು

ಭಾರತದಲ್ಲಿ ಮುಂಗಾರು ಪ್ರಗತಿ ಬಗ್ಗೆ ಹವಾಮಾನ ಇಲಾಖೆ ವಿವರಣೆ ನೀಡಿದ್ದು, ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗುವ ಮಾರುತಗಳು ಜುಲೈ 8ರಿಂದ ಪೂರ್ವ ಭಾರತದ ಕೆಲವು ಭಾಗಗಳಲ್ಲಿ ಮಳೆ ತರಲಿದೆ. ಇದು ಕ್ರಮೇಣ ಜುಲೈ 10ರಂದು ಪಂಜಾಬ್, ಹರಿಯಾಣ ಹಾದುಹೋಗಲಿದೆ. ನಂತರ ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿಯಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ.

 ಜುಲೈ 2ನೇ ವಾರದಲ್ಲಿ ಹೆಚ್ಚಿನ ಮಳೆ

ಜುಲೈ 2ನೇ ವಾರದಲ್ಲಿ ಹೆಚ್ಚಿನ ಮಳೆ

ಜುಲೈ 9ರಂದು ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾದಲ್ಲಿ ಮಳೆ ಆರಂಭವಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಮೂರು ವಾರದ ನಂತರ ಮುಂಗಾರು ಚುರುಕುಗೊಳ್ಳುತ್ತಿದ್ದು, ಜುಲೈ ಎರಡನೇ ವಾರದಲ್ಲಿ ಮಳೆ ವ್ಯಾಪಕವಾಗುವುದಾಗಿ ತಿಳಿದುಬಂದಿದೆ.

 ಜೂನ್ 19ರಿಂದ ವಿರಾಮ ಪಡೆದಿದ್ದ ಮುಂಗಾರು

ಜೂನ್ 19ರಿಂದ ವಿರಾಮ ಪಡೆದಿದ್ದ ಮುಂಗಾರು

ಕೇರಳದ ನಂತರ ಜೂನ್ 6ರಂದು ಮುಂಗಾರು ರಾಜ್ಯ ಪ್ರವೇಶಿಸಿತ್ತು. ಆದರೆ ಜೂನ್ ಎರಡನೇ ವಾರದಲ್ಲೇ ಮಳೆ ಕ್ಷೀಣಿಸಿ ಜೂನ್ 19ರಿಂದ ಮಳೆ ನಿಂತಿತ್ತು. ಇದೀಗ ಹಲವು ದಿನಗಳ ನಂತರ ಮುಂಗಾರು ಮತ್ತೆ ಆರಂಭವಾಗಲಿದೆ. ರಾಜ್ಯದಲ್ಲಿ ಜುಲೈ 10ರಿಂದ ಎರಡು ದಿನ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

 ಜುಲೈನಲ್ಲಿ ಅಧಿಕ ಮಳೆ ಸಾಧ್ಯತೆ

ಜುಲೈನಲ್ಲಿ ಅಧಿಕ ಮಳೆ ಸಾಧ್ಯತೆ

ಜುಲೈ ತಿಂಗಳ ಎರಡನೇ ವಾರದಲ್ಲಿ ನೈಋತ್ಯ ಮುಂಗಾರು ಚುರುಕು ಪಡೆಯಲಿದೆ. ಆಗ ದೇಶಾದ್ಯಂತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಮೃತ್ಯುಂಜಯ ಮಹೋಪಾತ್ರ ತಿಳಿಸಿದ್ದರು. ಜುಲೈ ತಿಂಗಳಿನಲ್ಲಿ ಮುಂಗಾರು ಮಳೆ ಸಹಜವಾಗಿರಲಿದೆ. ಜುಲೈನಲ್ಲಿ 94 ರಿಂದ 106% (ದೀರ್ಘಾವಧಿ ಸರಾಸರಿ) ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+