
ಮುಂಬೈ: ದಕ್ಷಿಣ ಕೊರಿಯಾದ ಮಹಿಳಾ ಯೂಟ್ಯೂಬರ್‌ಗೆ ರಸ್ತೆಯಲ್ಲೇ ಕಿರುಕುಳ
ಮುಂಬೈ, ನವೆಂಬರ್ 12: ಮುಂಬೈನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದ ದಕ್ಷಿಣ ಕೊರಿಯಾದ ಮಹಿಳೆಗೆ ಕಿರುಕುಳ ನೀಡಿದ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.
ಆನ್‌ಲೈನ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ, ಆರೋಪಿಗಳಲ್ಲಿ ಒಬ್ಬನು ಕಳೆದ ರಾತ್ರಿ ಖಾರ್‌ನಲ್ಲಿ ಯುಟ್ಯೂಬರ್ ಕೈ ಹಿಡಿದು ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಈ ಸಮಯದಲ್ಲಿ ಆಕೆ, 'ಬೇಡ, ಬೇಡ' ಎಂದು ಕೂಗಿದರೂ ಆರೋಪಿ ಬಲವಂತವಾಗಿ ಕೈ ಹಿಡಿದು ಎಳೆದಿದ್ದಾನೆ.
ಮುಂಬೈ ಬಸ್ ನಿಲ್ದಾಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪೋಸ್ಟರ್‌ಗೆ ಕಪ್ಪು ಮಸಿ
ಆಕೆಯ ವಿರೋಧದ ನಡುವೆಯೂ ಆ ವ್ಯಕ್ತಿ ಆಕೆಯ ಹತ್ತಿರ ಬಂದು ಆಕೆಯ ಕೈ ಹಿಡಿದಿರುವುದು ವಿಡಿಯೊದಲ್ಲಿ ಕಂಡುಬಂದಿದೆ.
ಆಕೆ ದೂರ ಹೋಗುತ್ತಿದ್ದಂತೆ, ಅವನು ಮತ್ತೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಬೈಕಿನಲ್ಲಿ ಬಂದು ಅವಳಿಗೆ ಲಿಫ್ಟ್ ನೀಡುತ್ತೇನೆ ಎಂದು ಹೇಳಿದ್ದಾರೆ. ಆದರೆ, ಯುವತಿಯು ಅದನ್ನು ನಿರಾಕರಿಸುತ್ತಾಳೆ. ಆಕೆಯ ವಾಸಸ್ಥಾನ ಹತ್ತಿರದಲ್ಲೇ ಇದೆ ಎಂದು ಯುಟ್ಯೂಬರ್ ತಿಳಿಸಿದ್ದಾರೆ.
ಈ ವಿಡಿಯೊವನ್ನು ಆಕೆ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಇದನ್ನು ರೀಟ್ವೀಟ್ ಮಾಡಿರುವ ಆಕೆ, 'ಕಳೆದ ರಾತ್ರಿ ಲೈವ್ ಸ್ಟ್ರೀಮ್ ಮಾಡುತ್ತಿರುವಾಗ ಒಬ್ಬ ವ್ಯಕ್ತಿ ನನಗೆ ಕಿರುಕುಳ ನೀಡಿದನು. ನಾನು ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದೆ. ಅವನು ತನ್ನ ಸ್ನೇಹಿತನ ಜೊತೆಯಲ್ಲಿದ್ದ ಕಾರಣ ಅಲ್ಲಿಂದ ಹೊರಡಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದೆ. ಈ ಘಟನೆ ಲೈವ್ ಸ್ಟ್ರೀಮಿಂಗ್ ಬಗ್ಗೆ ಮತ್ತೊಮ್ಮೆ ಯೋಚಿಸುವಂತೆ ಮಾಡಿದೆ' ಎಂದು ಅವರು ಹೇಳಿದ್ದಾಳೆ.

ವಿಡಿಯೊ ಆಧರಿಸಿ ಪೊಲೀಸರು ಸ್ವಯಂ ಪ್ರೇರಿತವಾಗಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಮೊಬೀನ್ ಚಂದ್ ಮೊಹಮ್ಮದ್ ಶೇಖ್ (19) ಮತ್ತು ಮೊಹಮ್ಮದ್ ನಕೀಬ್ ಸದಾರಿಯಾಲಂ ಅನ್ಸಾರಿ (20) ಎಂದು ಗುರುತಿಸಲಾಗಿದೆ. ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.