ವಿಮಾನಕ್ಕೆ ಗಗನಸಖಿಯಾದರೆ, ರೈಲಿನ ಸಖಿಗೆ ಹೆಸರೇನು?

Posted By:
Subscribe to Oneindia Kannada

ನವದೆಹಲಿ, ಫೆ. 21: ವಿಮಾನಯಾನದಲ್ಲಿ ಗಗನಸಖಿಯರಿರುವಂತೆ ಪ್ರಯಾಣಿಕರ ಸೌಲಭ್ಯ ನೋಡಿಕೊಳ್ಳಲು ಎಕ್ಸ್ ಪ್ರೆಸ್ ರೈಲುಗಳಲ್ಲಿ ಸಖಿಯನ್ನು ನೇಮಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ವಿಷಯ ಕೇಳಿ ಥ್ರಿಲ್ ಆದ ಜನತೆ, ರೈಲು ಸಖಿಗೆ ಏನು ಕರೆಯಬಹುದು ಎಂದು ಯೋಚಿಸುತ್ತಿದ್ದಾರೆ.

ದೆಹಲಿ- ಆಗ್ರಾ ನಡುವೆ ಗಂಟೆಗೆ 160 ಕಿ,ಮೀ ಪ್ರತಿ ಗಂಟೆ ವೇಗದಲ್ಲಿ ಸಂಚರಿಸುವ ಗತಿಮಾನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಾರ್ಯನಿರ್ವಹಿಸಲು 'ಹೋಸ್ಟೆಸ್' ರನ್ನು ಶೀಘ್ರವೇ ನೇಮಿಸಿಕೊಳ್ಳುವ ಪ್ರಕ್ರಿಯೆ ಈಗಾಗಲೇ ಆರಂಭವಾಗಲಿದೆ. ಫೆ.25ರಂದು ಮಂಡನೆಯಾಗಲಿರುವ ರೈಲ್ವೆ ಬಜೆಟ್‌ನಲ್ಲಿ ಸಚಿವ ಸುರೇಶ್‌ಪ್ರಭು ಇದನ್ನು ಘೋಷಿಸಲಿದ್ದಾರೆ. [ಚುಕು ಬುಕು ಸಖಿ, ರೈಲು ಸಖಿ, ಆಹಾ! ಎಷ್ಟೊಂದು ಹೆಸರು]

ಈ ಏಕ್ಸ್ ಪ್ರೆಸ್ ರೈಲಿನಲ್ಲಿ ಟಿವಿ ಸೇವೆ, ಅಪಾಯ ಸೂಚನೆ ವ್ಯವಸ್ಥೆ, ತುರ್ತು ಪರಿಸ್ಥಿತಿಯಲ್ಲಿ ಬ್ರೇಕಿಂಗ್ ವ್ಯವಸ್ಥೆ, ಜಿಪಿಎಸ್ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆ,ಕೇಟರಿಂಗ್ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯ ಗಳು ಇರಲಿದೆ.

ಒಂದು ತಾಸಿಗೆ 160 ಕಿ.ಮೀ. ಓಡುವ 5,4000 ಎಚ್ ಪಿ ಇಂಜಿನ್ ವಾಹನದಲ್ಲಿ 12 ಕೋಚುಗಳಿರುತ್ತದೆ. ಶತಾಬ್ದಿ ಏಕ್ಸ್ ಪ್ರೆಸ್ 200 ಕಿಲೋ ಮೀಟರ್ ಅಂತರವನ್ನು 120 ನಿಮಿಷಗಳಲ್ಲಿ ಕ್ರಮಿಸಿದರೆ, ಗತಿಮಾನ್ ಎಕ್ಸ್ ಪ್ರೆಸ್ 105 ನಿಮಿಷಗಳಲ್ಲಿ ಕ್ರಮಿಸುವ ಸಾಧ್ಯತೆಯಿದೆ. ಗಗನಸಖಿರಂತೆ ರೈಲಿನ ಸಖಿಯರ ಬಗ್ಗೆಇನ್ನಷ್ಟು ವಿವರ ಮುಂದಿದೆ ಓದಿ...

9 ರೈಲು ಮಾರ್ಗಗಳಲ್ಲಿ ರೈಲು ಸಖಿ ಸೌಲಭ್ಯ

9 ರೈಲು ಮಾರ್ಗಗಳಲ್ಲಿ ರೈಲು ಸಖಿ ಸೌಲಭ್ಯ

ಕಾನ್ಪುರ-ದೆಹಲಿ, ಚಂಡೀಗಢ-ದೆಹಲಿ, ಹೈದರಾಬಾದ್-ಚೆನ್ನೈ, ನಾಗಪುರ್-ಬಿಲಾಸ್‌ಪುರ್, ಗೋವಾ-ಮುಂಬೈ, ನಾಗಪುರ ಸಿಕಂದರಾಬಾದ್ ಮಾರ್ಗಗಳಲ್ಲಿ ಇನ್ನೂ 9 ಇಂಥ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

 ಪ್ರಯಾಣ ದರ ಶತಾಬ್ದಿ ಎಕ್ಸ್‌ಪ್ರೆಸ್ ಗಿಂತ ಹೆಚ್ಚು

ಪ್ರಯಾಣ ದರ ಶತಾಬ್ದಿ ಎಕ್ಸ್‌ಪ್ರೆಸ್ ಗಿಂತ ಹೆಚ್ಚು

ಪ್ರಯಾಣದರ ಶತಾಬ್ದಿ ಎಕ್ಸ್‌ಪ್ರೆಸ್ ದರಕ್ಕಿಂತ ಶೇ.25ರಷ್ಟು ಹೆಚ್ಚಿರುತ್ತದೆ. ಪೂರ್ತಿ ಎಸಿ ಚೇರ್ ಕ್ಲಾಸ್ ಗತಿಮಾನ್ ಎಕ್ಸ್ ಪ್ರೆಸ್ ಪ್ರಯಾಣ ದರ 690ರು ಆಗಲಿದೆ. ಎಕ್ಸಿಕ್ಯೂಟಿವ್ ಕ್ಲಾಸ್ ನಲಿ ಪ್ರಯಾಣಿಸಲು 1,365 ರು ತೆರಬೇಕಾಗುತ್ತದೆ. ದೆಹಲಿ-ಅಗ್ರಾ ಶತಾಬ್ದಿ ಎಕ್ಸ್ ಪ್ರೆಸ್ ಚೇರ್ ಕ್ಲಾಸ್ ಬೆಲೆ 540 ರು ಇದ್ದರೆ, ಎಕ್ಸಿ ಕ್ಯೂಟಿವ್ ಕ್ಲಾಸ್ ದರ 1,040 ರು ಮಾತ್ರ ಇದೆ.

ದೇಶಿ, ವಿದೇಶಿ ಆಹಾರ ಸೌಲಭ್ಯ ಇರುತ್ತದೆ

ದೇಶಿ, ವಿದೇಶಿ ಆಹಾರ ಸೌಲಭ್ಯ ಇರುತ್ತದೆ

ಗೋ ಉಪ್ಪಿಟ್ಟು (ಉಪ್ಮಾ) ಮಿನಿದೋಸೆ, ಕಾಂಜಿವರಂ ಇಡ್ಲಿ, ಹೆಚ್ಚಿದ (ತಾಜಾ) ಹಣ್ಣುಗಳು, ಆಲೂಕುಲ್ಟ, ಡ್ರೈಫ್ರೂಟ್, ಚಿಕನ್ ರೋಲ್, ಸ್ಯಾನಿಷ್ ಎಗ್ ವೈಟ್ ಆಮ್ಲೆಟ್ ಸೇರಿದಂತೆ ಇನ್ನೂ ಹಲವು ದೇಶೀ, ವಿದೇಶಿ ಆಹಾರ ಲಭ್ಯವಿರುತ್ತದೆ..

ತೋರ ಮೈಯ ರೈಲು ಸಖಿಯರನ್ನು ನೇಮಿಸುತ್ತಾರಾ?

ಈ ಹಿಂದೆ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸ್ಥೂಲಕಾಯ ಗಗನಸಖಿಯರನ್ನು ವಿಮಾನದಿಂದ ಕೆಳಗಿಳಿಸಿತ್ತು. ರೈಲು ಸಖಿಯರ ನೇಮಕಾತಿ ವಿವರ ಇನ್ನೂ ಲಭ್ಯವಾಗಿಲ್ಲ. ಅವರ ಉಡುಗೆ ತೊಡುಗೆ, ಕಾರ್ಯ ನಿರ್ವಹಿಸುವ ಅವಧಿ ಬಗ್ಗೆ ವಿವರ ಸಿಗಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Imagine being ushered into a train by a hostess who presents you a rose bud as soft music plays in the background.It will soon be a reality, with the Railways deciding to introduce train hostesses on soon to be launched Delhi-Agra Gatiman Express, the first train in India to run at a speed of 160 kmph.
Please Wait while comments are loading...