ಸೋನು ನಿಗಮ್ ಕಂಠಿಸಿರಿಯಲ್ಲಿ ಮೊಹಮ್ಮದ್ ರಫಿ ಅವರಿಗೆ ಹೃತ್ಪೂರ್ವಕ ಗೌರವ
ರಾಡಿಕೊ ಖೈತಾನ್ ಲಿಮಿಟೆಡ್‌ನ ಹೊಸದಾಗಿ ಪ್ರಾರಂಭಿಸಿರುವ ದಿ ಸ್ಪಿರಿಟ್ ಆಫ್ ಕಾಶ್ಮೀರ್, ಸೋನು ನಿಗಮ್ ಲೈವ್ ಇನ್ ಕನ್ಸರ್ಟ್ ಸಂಗೀತ ಕಾರ್ಯಕ್ರಮದಲ್ಲಿ ನೆನ್ನೆ ರಾತ್ರಿ ನಡೆಯಿತು. ನೋಡುಗರಿಗೆ ಮ್ಯಾಜಿಕ್ ಮಾಡಿದ ಈ ಇವೆಂಟ್ ದಾಲ್ ಸರೋವರದ ತಟದಲ್ಲಿ ಇತಿಹಾಸ ಬರೆಯಿತು. ಸಂಗೀತದ ಮೂಲಕ ಪ್ರಸಿದ್ಧ ಗಾಯಕ ಮೊಹಮ್ಮದ್ ರಫಿ ಅವರ 100 ವರ್ಷಗಳಿಗೆ ಹೃತ್ಪೂರ್ವಕ ಗೌರವ ಸಲ್ಲಿಸಲಾಯಿತು. ಈ ಸುಂದರ ರಾತ್ರಿಯನ್ನುಸುಮಾರು 15,000 ಕ್ಕೂ ಹೆಚ್ಚು ಪ್ರೇಕ್ಷಕರು ಕಣ್ತುಂಬಿಕೊಂಡರು.
ಗಾಯಕ ಸೋನು ನಿಗಮ್ ಅವರ ಕಂಠದಲ್ಲಿ ಸುಮಧುರ ಸಂಗೀತವು ದಿ ಸ್ಪಿರಿಟ್ ಆಫ್ ಕಾಶ್ಮೀರ್ ನಲ್ಲಿ ಪ್ರತಿಧ್ವನಿಸಿತು. ಗಾಳಿಯಲ್ಲಿ ಮಧುರ ಧ್ವನಿಗಳು ಸಂಗೀತಪ್ರಿಯರನ್ನು ಆಕರ್ಷಿಸಿತು. ದೇಶದ ಉತ್ತರ ಪ್ರದೇಶ, ಮಹಾರಾಷ್ಟ್ರ, ಅಸ್ಸಾಂ, ರಾಜಸ್ಥಾನ ಮತ್ತು ಗೋವಾದ ಅನೇಕ ಹೃದಯಗಳನ್ನು ಕಾರ್ಯಕ್ರಮ ಗೆದ್ದು, ಮೈಲಿಗಲ್ಲು ಸೃಷ್ಟಿಸಿತು. ಸೋನು ನಿಗಮ್ ಅವರ ಕಂಠಸಿರಿಯಲ್ಲಿ ಅನೇಕ ಹಾಡುಗಳು ಮೊಳಗಿದವು. ದಾಲ್ ಸರೋವರವು ಬೆಳಕು, ಸಂಸ್ಕೃತಿ ಮತ್ತು ಭಾವನೆಗಳ ಉಸಿರುಕಟ್ಟುವ ಕ್ಯಾನ್ವಾಸ್ ಆಗಿ ರೂಪಾಂತರಗೊಂಡಿತು. ಸಾವಿರಾರು ಜನರ ಮನಸ್ಸಿನಲ್ಲಿ ಈ ವರ್ಷದ ಸಂಗೀತ ಸಂಜೆ ನೆನಪಿನಲ್ಲಿ ಉಳಿಯುವಂತಾಯಿತು.

ಕಾಶ್ಮೀರ ಕಣಿವೆ ಸೌಂದರ್ಯ, ಪರಂಪರೆಗೆ ಹೆಮ್ಮೆಯ ಗೌರವದ ಪ್ರತೀಕದಂತೆ ಪ್ರದರ್ಶನ ಜರುಗಿತು. ದಿ ಸ್ಪಿರಿಟ್ ಆಫ್ ಕಾಶ್ಮೀರ್‌ನ ಸ್ವಂತ ಬ್ರಾಂಡ್ ಶಿಕಾರಗಳು ಕಾರ್ಯಕ್ರಮದಲ್ಲಿ ಜಗಮಸಿದವು. ಕಣಿವೆ ರಾಜ್ಯದ ಆಧುನಿಕ ಭಾರತೀಯ ಐಷಾರಾಮಿಗಳ ಸಂಕೇತಗಳಲ್ಲಿ ಪ್ರತಿಬಿಂಬಗೊಂಡವು. ಶಿಕಾರಗಳು ಕಾಶ್ಮೀರದ ಸಾಂಸ್ಕೃತಿಕ ಸೊಬಗನ್ನು ಸೂಚಿಸಿದವು. ಇದೆಲ್ಲ ಕಣ್ತುಂಬಿಕೊಂಡು ವೀಕ್ಷಕರು ಅದ್ಭುತದ ಕ್ಷಣ ಅನುಭವಿಸಿದರು. ಗಾಯಕ ಸೋನು ನಿಗಮ್ ಅವರ ಕಾಲಾತೀತ ಕಲಾತ್ಮಕತೆ ಬೆರಗುಗೊಳಿಸಿತು. ಈ ವೇಳೆ ಕಾಶ್ಮೀರ ಪರಂಪರೆಯು ನೆರೆದವರಿಗೆ ಮುಟ್ಟಿತು.
ಸಂಗೀತ ಮಾಂತ್ರಿಕತೆಯು ದಾಲ್ ಸರೋವರದಾದ್ಯಂತ ಪ್ರತಿಧ್ವನಿಸಿತು. ಕಣಿವೆ ರಾಜ್ಯದ ಸೌಂದರ್ಯವನ್ನು ಭಾವನಾತ್ಮಕ ಮತ್ತು ಅವಿಸ್ಮರಣೀಯ ರೀತಿಯಲ್ಲಿ ಹೈಲೈಟ್ ಮಾಡುವ ಗುರಿ ಸಾಕಾರವಾಯಿತು. ಈ ಪ್ರದೇಶ ನೆರೆದ ಹೃದಯಗಳನ್ನು ಪ್ರೇರೇಪಿಸಿತು ಎಂದು ರಾಡಿಕೊ ಖೈತಾನ್ ಲಿಮಿಟೆಡ್‌ನ ಮುಖ್ಯ ಕಾರ್ಯಾಚರಣಾ ಅಧಿಕಾರಿ ಅಮರ್ ಸಿನ್ಹಾ ಹೇಳಿದರು.
ಕಾಶ್ಮೀರದ ಪ್ರಾಚೀನ ಸೌಂದರ್ಯದಿಂದ ಜನಿಸಿದ ಕಾಶ್ಮೀರದ ಚೈತನ್ಯವು ಶುದ್ಧತೆ, ಕರಕುಶಲತೆ ಮತ್ತು ಭಾವನೆ ಸಾಕಾರಗೊಳಿಸುತ್ತದೆ. ನಿನ್ನೆ ರಾತ್ರಿಯ ಆಚರಣೆಯನ್ನು ಮಧುರ, ಪರಂಪರೆ ಮತ್ತು ಕಥೆ ಹೇಳುವಿಕೆಯ ಪರಿಪೂರ್ಣ ಸಂಗಮವನ್ನಾಗಿ ಮಾಡಿತು ಎಂದರು.












Click it and Unblock the Notifications