ಮೋದಿ ಸೇರಿ ಎಲ್ಲರಿಗೂ ಹೋಳಿ ಶುಭ ಕೋರಿದ ರಾಹುಲ್ ಗಾಂಧಿ

Posted By:
Subscribe to Oneindia Kannada

ರಂಗುರಂಗಿನ ಬಣ್ಣದ ಹಬ್ಬ 'ಹೋಳಿ ಹಬ್ಬ'ವನ್ನು ಉತ್ತರ ಭಾರತದಲ್ಲಿ ಗುರುವಾರ (ಮಾ 24) ಆಚರಿಸಲಾಗುತ್ತಿದೆ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳ ಮುಖಂಡರು ನಾಡಿನ ಜನತೆಗೆ ಹೋಳಿ ಶುಭಾಶಯವನ್ನು ಕೋರಿದ್ದಾರೆ.

ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರು, ಮುಖಂಡರನ್ನು ಖುದ್ದು ಸೋನಿಯಾ ಮತ್ತು ರಾಹುಲ್ ಗಾಂಧಿ ಸ್ವಾಗತಿಸಿ, ಬಣ್ಣ ಹಚ್ಚಿ ಶುಭ ಕೋರಿದ್ದಾರೆ. (ರಾಜಕಾರಣಿಗಳ ಹೋಳಿ ಸಂಭ್ರಮ)

ಹೋಳಿ ಹಬ್ಬ ನಾಡಿನಲ್ಲಿ ಎಲ್ಲರಿಗೂ ಸುಖ ಶಾಂತಿಯನ್ನು ನೀಡಲಿ, ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು ಎಂದು ರಾಹುಲ್ ಗಾಂಧಿ ಮಾಧ್ಯಮದವರ ಮುಂದೆ ಹೋಳಿ ಸಂದೇಶ ರವಾನಿಸಿದ್ದಾರೆ.

ನಿಮ್ಮ ಹೋಳಿ ಸಂದೇಶ ಪ್ರಧಾನಿ ನರೇಂದ್ರ ಮೋದಿ ಸೇರಿ ಎಲ್ಲಾ ಭಾರತೀಯರಿಗಾ ಎನ್ನುವ ಪ್ರಶ್ನೆಗೆ ಹೌದು, ನನ್ನ ಹೋಳಿ ಶುಭಾಶಯ ಪ್ರಧಾನಿ ಸೇರಿದಂತೆ ಎಲ್ಲರಿಗೂ ಎಂದು ಹೇಳಲು ರಾಹುಲ್ ಗಾಂಧಿ ಮರೆಯಲಿಲ್ಲ.

ಕಾಂಗ್ರೆಸ್ ಕಚೇರಿಯಲ್ಲಿ ಹೋಳಿ ಸಂಭ್ರಮದ ಚಿತ್ರಗಳು, ಸ್ಲೈಡಿನಲ್ಲಿ (ಚಿತ್ರಕೃಪೆ: @INCIndia)

ಕಾಂಗ್ರೆಸ್ ಕಚೇರಿಯಲ್ಲಿ ಹೋಳಿ ರಂಗು

ಕಾಂಗ್ರೆಸ್ ಕಚೇರಿಯಲ್ಲಿ ಹೋಳಿ ರಂಗು

ಹೋಳಿಯ ರಂಗು ನಮ್ಮ ದೇಶದ ಬಣ್ಣ ಇದ್ದ ಹಾಗೇ, ಇದನ್ನು ಜೋಪಾನವಾಗಿ ಕಾಪಾಡಿಕೊಂಡು ಬರಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಹೋಳಿ ರಾಹುಲ್ ಸಂದೇಶ

ಹೋಳಿ ರಾಹುಲ್ ಸಂದೇಶ

ಎಲ್ಲರೂ ಪ್ರೀತಿಯಿಂದ ಒಟ್ಟಾಗಿ ದೇಶದಲ್ಲಿ ಬಾಳಬೇಕು, ನೀವೆಲ್ಲರೂ ಚೆನ್ನಾಗಿ ಹೋಳಿ ಹಬ್ಬವನ್ನು ಆಚರಿಸಿಕೊಂಡಿದ್ದೀರಿ, ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು ಎಂದು ರಾಹುಲ್ ಶುಭಾಶಯ ಕೋರಿದ್ದಾರೆ.

ರಾಹುಲ್ ಜೊತೆ ಆಗಮಿಸಿದ ಸೋನಿಯಾ

ರಾಹುಲ್ ಜೊತೆ ಆಗಮಿಸಿದ ಸೋನಿಯಾ

ಪಕ್ಷದ ಕಚೇರಿಗೆ ರಾಹುಲ್ ಗಾಂಧಿ ಜೊತೆ ಆಗಮಿಸಿದ ಸೋನಿಯಾ ಗಾಂಧಿ, ಪಕ್ಷದ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಬಣ್ಣ ಹಚ್ಚಿ ಶುಭ ಕೋರಿದರು.

ಕಾರ್ಯಕರ್ತರ ಸಂಭ್ರಮ

ಕಾರ್ಯಕರ್ತರ ಸಂಭ್ರಮ

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಪೇಟ ತೊಡಿಸಿ, ಬಣ್ಣ ಹಚ್ಚಿ ಕಾರ್ಯಕರ್ತರು ಸಂಭ್ರಮಿಸಿದರು.

ಚಿತ್ರದಲ್ಲಿ: ಕಾಂಗ್ರೆಸ್ ಕಚೇರಿಯಲ್ಲಿ ಹೋಳಿ ಸಂಭ್ರಮ

ಚಿತ್ರದಲ್ಲಿ: ಕಾಂಗ್ರೆಸ್ ಕಚೇರಿಯಲ್ಲಿ ಹೋಳಿ ಸಂಭ್ರಮ

ಚಿತ್ರದಲ್ಲಿ: ಕಾಂಗ್ರೆಸ್ ಕಚೇರಿಯಲ್ಲಿ ಹೋಳಿ ಸಂಭ್ರಮ

ಕಾರ್ಯಕರ್ತರು, ಮುಖಂಡರ ಜೊತೆ ಸೋನಿಯಾ, ರಾಹುಲ್

ಕಾರ್ಯಕರ್ತರು, ಮುಖಂಡರ ಜೊತೆ ಸೋನಿಯಾ, ರಾಹುಲ್

ಕಾರ್ಯಕರ್ತರು, ಮುಖಂಡರ ಜೊತೆ ಸೋನಿಯಾ, ರಾಹುಲ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
With the nation celebrating Holi, Congress chief Sonia Gandhi and VP Rahul Gandhi also joined the festivities at the AICC office on Thursday (Mar 24) with party leaders and workers. “My message is of peace and brotherhood. Everyone should live with love in their hearts,” Rahul told the media. When asked if the wishes were extended to PM Modi as well, then he added saying, “Yes, my greetings are for everyone.”
Please Wait while comments are loading...