ಗುಜರಾತ್ ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸಿನಿಂದ 40 ತಾರಾ ಪ್ರಚಾರಕರು

Subscribe to Oneindia Kannada

ಅಹಮದಾಬಾದ್, ನವೆಂಬರ್ 21: ಡಿಸೆಂಬರ್ ನಲ್ಲಿ ನಡೆಯಲಿರುವ ಗುಜಾರತ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ.

ಗುಜರಾತ್: ಕಾಂಗ್ರೆಸ್ ನಿಂದ 77 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಸೇರಿ 40 ಕಾಂಗ್ರೆಸ್ ನಾಯಕರು ಸ್ಟಾರ್ ಕ್ಯಾಂಪೇನರ್ ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಗುಜರಾತ್ ಅಭಿವೃದ್ಧಿಯ ಹುಳುಕುಗಳನ್ನು ಬಿಚ್ಚಿಟ್ಟ ಪಿ. ಚಿದಂಬರಂ

Sonia and Rahul Gandhi among 40 star campaigners of Congress for Gujarat polls

ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಅಹಮದ್ ಪಟೇಲ್, ಗುಲಾಮ್ ನಬಿ ಅಜಾದ್, ಸ್ಯಾಮ್ ಪಿತ್ರೋಡಾ, ಮಧುಸೂದನ್ ಮಿಸ್ತ್ರಿ, ಆನಂದ್ ಶರ್ಮಾ, ಭುಪಿಂದರ್ ಸಿಂಗ್ ಹೂಡಾ, ಜ್ಯೋತಿರಾದಿತ್ಯ ಸಿಂಧ್ಯಾ, ಪಂಜಾಬ್ ಸಚಿವ ನವಜೋತ್ ಸಿಂಗ್ ಸಿದ್ಧು, ರಾಜ್ ಬಬ್ಬರ್, ಸಚಿನ್ ಪೈಲಟ್, ಆಸ್ಕರ್ ಫೆರ್ನಾಂಡಿಸ್, ಅಲ್ಪೇಶ್ ಠಾಕೂರ್, ಭರತ್ ಸಿನ್ಹಾ ಸೋಲಂಕಿ ಸೇರಿದಂತೆ ಹಿರಿ ಕಿರಿ ನಾಯಕರು ತಾರಾ ಪ್ರಚಾರಕರಲ್ಲಿ ಸ್ಥಾನ ಪಡೆದಿದ್ದಾರೆ.

ಗುಜರಾತ್ ಕಾಂಗ್ರೆಸ್ ನಿಂದ 13 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ

Sonia and Rahul Gandhi among 40 star campaigners of Congress for Gujarat polls

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ತಾರಾ ಪ್ರಚಾರಕರ ಪಟ್ಟಿಯಲ್ಲಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Congress on Monday released its list of 40 star campaigners, which include Former Prime Minister Dr. Manmohan Singh, party chief Sonia Gandhi and Rahul Gandhi for the upcoming Gujarat assembly elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ