ಹನುಮಂತಪ್ಪ ತಾಯಿ ಬಸಮ್ಮಗೆ ಸೋನಿಯಾ ಪತ್ರ

Posted By:
Subscribe to Oneindia Kannada

ನವದೆಹಲಿ, ಫೆಬ್ರವರಿ 10 : ದೆಹಲಿಯ ರಿಸರ್ಚ್ ಮತ್ತು ರೆಫರಲ್ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸಿರುವ ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿ ಅವರ ತಾಯಿ ಬಸಮ್ಮ ಅವರನ್ನು ಉದ್ದೇಶಿಸಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಪತ್ರ ಬರೆದಿದ್ದಾರೆ.

ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿದ್ದ ಹತ್ತು ಯೋಧರಲ್ಲಿ ಬದುಕುಳಿದಿರುವ ಏಕೈಕ ಯೋಧ ಹನುಮಂತಪ್ಪ ಕೊಪ್ಪದ ಅವರು ಇನ್ನೂ ಕೋಮಾ ಸ್ಥಿತಿಯಲ್ಲಿ ಇದ್ದು, ಅವರ ದೇಹಸ್ಥಿತಿ ಇನ್ನೂ ಚಿಂತಾಜನಕ ಸ್ಥಿತಿಯಲ್ಲಿದೆ. ಅವರ ಆರೋಗ್ಯ ಸುಧಾರಿಸಲೆಂದು ದೇಶದೆಲ್ಲೆಡೆ ಪ್ರಾರ್ಥನೆ, ಹೋಮಗಳು ನಡೆಯುತ್ತಿದ್ದು, ನುರಿತ ವೈದ್ಯರ ತಂಡ ತನ್ನ ಪ್ರಯತ್ನ ನಡೆಸುತ್ತಿದೆ. [ಹನುಮಂತಪ್ಪ ಕಿಡ್ನಿ ವಿಫಲ, ನಡೆಯಲಿ ಮತ್ತೊಂದು ಪವಾಡ]

Sonia Gandhi writes letter to Hanumanthappa's mother Basamma

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರವೇ ಆಸ್ಪತ್ರೆಗೆ ಖುದ್ದಾಗಿ ತೆರಳಿ ಹನುಮಂತಪ್ಪ ಕೊಪ್ಪದ ಅವರ ಆರೋಗ್ಯ ವಿಚಾರಿಸಿದ್ದರು. ಈಗ ಸೋನಿಯಾ ಅವರು ದೆಹಲಿಗೆ ತಲುಪಿರುವ ಬಸಮ್ಮ ಅವರಿಗೆ ಪತ್ರ ಬರೆದಿದ್ದು, ಅವರ ಕುಟುಂಬಕ್ಕೆ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ. ಕೆಳಗಿದೆ ಅವರ ಪತ್ರ.

ಪ್ರಿಯ ಶ್ರೀಮತಿ ಬಸಮ್ಮ,

ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ನಮ್ಮ ದೇಶದ ರಕ್ಷಣೆ ಮಾಡುತ್ತಿದ್ದ 10 ವೀರ ಯೋಧರ ದುರ್ಮರಣ ಹೊಂದಿದ ಸಮಾಚಾರ ತಿಳಿಯುತ್ತಿದ್ದಂತೆ ನನ್ನ ಹೃದಯ ವೇದನೆ ಮತ್ತು ನೋವಿನಿಂದ ತುಂಬಿ ಹೋಗಿತ್ತು.['ಅಮರ' ಯೋಧ ಹನುಮಂತಪ್ಪನ ಅಂತಿಮ ಯಾತ್ರೆಯ ಚಿತ್ರಗಳು]

ಆದರೆ, ನಿಮ್ಮ ಮಗ ಲಾನ್ಸ್ ನಾಯಕ್ ಹನುಮಂತಪ್ಪ ಅವರ (ಬದುಕುಳಿದಿರುವ) ಸುದ್ದಿ ತಿಳಿದುಬರುತ್ತಿದ್ದಂತೆ ಒಂದು ಸಂತೋಷದ ಕಿರಣ ಕಂಡುಬಂದಂತಾಗಿದೆ. ಸಿಯಾಚಿನ್ ನಂಥ ದುರ್ಗಮ ಪ್ರದೇಶದಲ್ಲಿ ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲಿ ದೇಶದ ರಕ್ಷಣೆ ಮಾಡುತ್ತಿರುತ್ತಾರೆ. ಅವರನ್ನು ಎಷ್ಟು ಹೊಗಳಿದರೂ ಸಾಲದು.

ಈಶ್ವರನಿಗೆ ನಾನು ಪ್ರಾರ್ಥನೆ ಮಾಡುವುದೇನೆಂದರೆ, ಇಂತಹ ಬಹಾದ್ದೂರ ದೇಶ ಭಕ್ತ ಸೈನಿಕನನ್ನು ಶೀಘ್ರವಾಗಿ ಗುಣಪಡಿಸಲಿ. ನಂತರ ತನ್ನ ನಿಯಮಿತ ದಿನಚರಿಯನ್ನು ಆರಂಭಿಸಲಿ ಮತ್ತು ದೇಶಸೇವೆಯಲ್ಲಿ ಮತ್ತೆ ತೊಡಗಿಕೊಳ್ಳುವಂತೆ ಸಾಧ್ಯವಾಗಲಿ.

ಲಾನ್ಸ್ ನಾಯಕ್ ಹನುಮಂತಪ್ಪ ಶೀರ್ಘ ಗುಣಮುಖರಾಗಲಿ ಮತ್ತು ದೀರ್ಘಾಯು ಪ್ರಾಪ್ತವಾಗಲಿ ಎಂದು ಹಾರೈಸುತ್ತೇನೆ. [ಹನುಮಂತಪ್ಪ ಹುಟ್ಟೂರಿನಲ್ಲಿ ಗ್ರಾಮಸ್ಥರ ಪ್ರಾರ್ಥನೆ]

ಇಂತಿ,

ಸೋನಿಯಾ ಗಾಂಧಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress president Sonia Gandhi has written a letter to Lance Naik Hanumanthappa's mother Basamma, who is present in Delhi, wishing quick recovery. Hanumanthappa, the lone survivor of Siachen Glacier tragedy, Koppad battling for life in Research and Referral hospital in Delhi.
Please Wait while comments are loading...