265 ಜನರ ಸಾವು ಸಂಭ್ರಮಿಸಿದ ಪಾಕ್, ಬಾಂಗ್ಲ & ಶ್ರೀಲಂಕನೀಯರು: ಭಾರತೀಯರ ಆಕ್ರೋಶ!
Ahmedabad Plane Crash: ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನವು ಅಪಘಾತಕ್ಕೆ ಒಳಗಾಗಿ ಈ ದುರಂತದಲ್ಲಿ 265 ಜನ ಸಾವನ್ನಪ್ಪಿದ್ದಾರೆ. ಇಡೀ ವಿಶ್ವವೇ ಈ ದುರಂತಕ್ಕೆ ಕಂಬನಿ ಮಿಡಿದಿದೆ. ಆದರೆ, ಬಾಂಗ್ಲದೇಶ ಹಾಗೂ ಪಾಕಿಸ್ತಾನದಿಂದ ಇದಕ್ಕೆ ಬಂದಿರುವ ಪ್ರತಿಕ್ರಿಯೆಯು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ. ವಿಮಾನ ಪತನದಲ್ಲಿ ಸಣ್ಣ ಮಕ್ಕಳು ಸೇರಿದಂತೆ ನೂರಾರು ಜನ ಜೀವ ಕಳೆದುಕೊಂಡಿದ್ದಾರೆ. ಆದರೆ ಈ ರೀತಿ ಇರುವಾಗ ಕೆಲವರು ನಗುವ ಇಮೋಜ್ ಹಾಕುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಶತ್ರುವಿನ ಸಾವನ್ನೂ ಸಂಭ್ರಮಿಸಬಾರದು ಎನ್ನುವ ಮಾತಿದೆ. ಆದರೆ, ಅಹಮದಾಬಾದ್‌ನ ದುರಂತವನ್ನು ಕೆಲವು ವಿಕೃತ ಮನಸ್ಸಿನವರು ಸಂಭ್ರಮಿಸುತ್ತಿದ್ದಾರೆ.
ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತಗಳಲ್ಲಿ ಏರ್ ಇಂಡಿಯಾ ವಿಮಾನದ ಅಪಘಾತ ಒಂದಾಗಿದೆ. ಆದರೆ ಇದರ ಬಗ್ಗೆ ಕೆಲವರ ಕಮೆಂಟ್ ಹಾಗೂ ನಗುವ ಇಮೋಜ್ ಹಾಕುತ್ತಿರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಕೆಲವರು ಈ ಸಂಕಷ್ಟದ ಸಮಯದಲ್ಲಿ ಹಾಗೂ ದುರಂತದ ಸುದ್ದಿಗೆ ನಗುವ ಇಮೋಜ್ ಬಳಸುತ್ತಿರುವುದು ವೈರಲ್ ಆಗುತ್ತಿದೆ. ಈ ರೀತಿ ನಗುವ ಇಮೋಜ್ ಬಳಸುವವರಲ್ಲಿ ಬಹುತೇಕರು ಬಾಂಗ್ಲದೇಶ ಹಾಗೂ ಪಾಕಿಸ್ತಾನಕ್ಕೆ ಸೇರಿದವರಾಗಿದ್ದಾರೆ.

ಪಾಕ್ ಮತ್ತು ಬಾಂಗ್ಲಾದವರೇ ಹೆಚ್ಚು: ಇನ್ನು ಈ ರೀತಿ ಇಮೋಜ್ ಬಳಸುತ್ತಿರುವವರಲ್ಲಿ ಬಾಂಗ್ಲದೇಶ, ಪಾಕಿಸ್ತಾನ ಹಾಗೂ ಶ್ರೀಲಂಕಾದ ಮುಸ್ಲಿಂ ಸಮುದಾಯಕ್ಕೆ ಸೇರಿದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದು ಚರ್ಚೆಯಾಗುತ್ತಿದೆ. ಅದರಲ್ಲಿ ಎಲ್ಲಿಯೂ ಭಾರತದ ಮುಸ್ಲಿಮರು ಇಲ್ಲ. ಆದರೆ, ಈ ರೀತಿಯ ಮನಸ್ಥಿತಿ ಹಾಗೂ ಸಾವನ್ನು ಸಂಭ್ರಮಿಸುವುದು ಯಾಕೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೆಲವು ಭಾರತೀಯರು ಸಹ ಈ ರೀತಿಯ ವರ್ತನೆ ತೋರಿಸುತ್ತಿದ್ದಾರೆ ಎಂದು ಕೆಲವು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಸಿದ್ಧಾಂತ ಅಥವಾ ಭಿನ್ನ ಸಿದ್ಧಾಂತ ಹಾಗೂ ಅಭಿಪ್ರಾಯವನ್ನು ಹೊಂದಿರುವವರು ಸಾವನ್ನಪ್ಪಿದರೆ ಸಂಭ್ರಮಿಸುವ ವಿಕೃತಿ ಹೆಚ್ಚಾಗುತ್ತಿದೆ. ಇದು ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಕೆಟ್ಟ ಬೆಳವಣಿಗೆ. ಕೆಟ್ಟ ಮನಸ್ಥಿತಿಯೊಂದು ಜನರಲ್ಲಿ ಬೆಳೆದಿದೆ. ಇದಕ್ಕೆ ಅಹಮದಾಬಾದ್‌ನ ಘಟನೆಯೂ ಸಾಕ್ಷಿಯಾಗಿದೆ.
ಒಟ್ಟಾರೆ ಸಾವಿನ ಸಂದರ್ಭದಲ್ಲಿ ಯಾರೇ ಸಂಭ್ರಮಿಸಿದರೂ ತಪ್ಪು ಈ ರೀತಿ ಸಂಭ್ರಮಗಳು ನಿಲ್ಲಬೇಕು. ಇದೊಂದು ಮನುಷ್ಯ ವಿಕೃತಿ ಅಂತ ಜನ ಅಭಿಪ್ರಾಯಪಟ್ಟಿದ್ದಾರೆ.
ಬರಹಗಾರ ಶರೀಫ್ ಅವರು, 'ಇಸ್ರೇಲ್ ದಾಳಿಯಿಂದ ಗಾಝಾದಲ್ಲಿ ಸಾವಿರಾರು ಮಕ್ಕಳು ಸತ್ತ ಸುದ್ದಿ ಕನ್ನಡದಲ್ಲಿ ಪ್ರಕಟವಾದಾಗ ಅವುಗಳಿಗೆ ನಗುವ ಇಮೋಜಿ ಹಾಕಿದ್ದಿದೆ. ಗಾಝಾದ ಪ್ರತಿ ಸುದ್ದಿಯಲ್ಲಿಯೂ ಇದನ್ನು ಗಮನಿಸಬಹುದು. ಪಾಕಿಸ್ತಾನ ವಿಮಾನ ಅಪಘಾತ, ಬಾಂಗ್ಲಾ ಹಿಂಸಾಚಾರದ ಸುದ್ದಿಗಳಿಗೂ ಕನ್ನಡಿಗರು ನಗುವ ಇಮೋಜಿ ಬಳಸಿದ್ದಾರೆ. ಬಾಂಗ್ಲಾ, ಪಾಕಿಸ್ತಾನದವರ ವಿಕೃತ ಮನಸ್ಥಿತಿ ಹೊಸತೇನಲ್ಲ. ಆದರೆ ಕನ್ನಡಿಗರ ಮನಸ್ಥಿತಿ ಏಕೆ ಹೀಗಾಯಿತು? ನಮ್ಮ ಜೊತೆಗಿರುವವರೇ ಮನುಷ್ಯ ಸಂವೇದನೆಯ ನರ ಕಳೆದುಕೊಳ್ಳುತ್ತಿದ್ದಾರೆ ಎನ್ನುವುದು ನಮ್ಮನ್ನು ಕಾಡಬೇಕಾದ ವಿಚಾರ' ಎಂದಿರುವ ಅವರು, ಅದಕ್ಕೆ ಸಂಬಂಧಿಸಿ ಹಲವು ಸುದ್ದಿಗಳ ಲಿಂಕ್ ಗಳನ್ನೂ ಹಂಚಿಕೊಂಡಿದ್ದಾರೆ.












Click it and Unblock the Notifications