ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್ 'ವೇಮುಲ' ಹೋರಾಟಕ್ಕೆ ಕೇಜ್ರಿವಾಲ್ ಬೆಂಬಲ

By Vanitha
|
Google Oneindia Kannada News

ಬೆಂಗಳೂರು, ಜನವರಿ,22: ಹೈದರಾಬಾದ್ ಸೆಂಟ್ರಲ್ ವಿಶ್ವವಿದ್ಯಾಲಯ ದಲಿತ ವಿದ್ಯಾರ್ಥಿ ರೋಹಿತ್ ವೆಮುಲಾ ಆತ್ಮಹತ್ಯೆ ಪ್ರಕರಣ ಭಾರತದಾದ್ಯಂತ ಪ್ರತಿಭಟನೆ ಸ್ವರೂಪ ಪಡೆದುಕೊಂಡಿದ್ದು, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನೇಮಿಸಿದ್ದ ಸತ್ಯಶೋಧನಾ ಸಮಿತಿಯ ಅಂತಿಮ ವರದಿಗಾಗಿ ಕಾಯುತ್ತಿದ್ದಾರೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ವಿಶೇಷಾಧಿಕಾರಿ ಶಕೀಲಾ ಟಿ. ಶಂಸು ಮತ್ತು ಉಪಕಾರ್ಯದರ್ಶಿ ಸುರತ್ ಸಿಂಗ್ ಅವರನ್ನೊಳಗೊಂಡ ಸಮಿತಿಯನ್ನು ಈ ಪ್ರಕರಣದ ಅಂತಿಮ ವರದಿ ನೀಡಲು ಆದೇಶ ನೀಡಲಾಗಿತ್ತು. ಸಮರ್ಪಕವಾಗಿ ಕಾರ್ಯನಿರ್ವಹಿಸಿದ ಸಮಿತಿ ವಿವಿಗೆ ತೆರಳಿ ವಿದ್ಯಾರ್ಥಿಗಳಿಂದ ಸಂಪೂರ್ಣ ಮಾಹಿತಿ ಕಲೆಹಾಕಿದೆ.

ಮಾಹಿತಿಯಿಂದ ರಚಿಸಿದ ವರದಿಯನ್ನು ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರಿಗೆ ಹಸ್ತಾಂತರ ಮಾಡಲಿದ್ದು, ವೇಮುಲ ಅವರ ಪ್ರಕರಣದ ಸತ್ಯಾಂಶ ಅರಿಯುವ ತವಕದಲ್ಲಿದ್ದಾರೆ ಹಾಗೂ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯ ಗುರುವಾರ ನಾಲ್ವರು ವಿದ್ಯಾರ್ಥಿಗಳ ಅಮಾನತು ರದ್ದುಗೊಳಿಸಿತು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರೋಹಿತ್ ವೆಮುಲಾ ಆತ್ಮಹತ್ಯೆ ಖಂಡಿಸಿ ವಿದ್ಯಾರ್ಥಿಗಳು ಕೈಗೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಇನ್ನು ಕೆಲವು ಗಣ್ಯರು ಆತ್ನ ತಾಯಿಯನ್ನು ಭೇಟಿ ನೀಡಿ ಸಾಂತ್ವನ ನುಡಿಗಳಾಡಿದ್ದಾರೆ. ಇದಲ್ಲದೆ ಇನ್ನು ಕೆಲವು ಸುದ್ದಿಗಳು ಈ ಕೆಳಗಿನ ಸ್ಲೈಡ್ ಗಳಲ್ಲಿವೆ.[ಹೈದರಾಬಾದ್ : ನೊಂದ ದಲಿತ ವಿದ್ಯಾರ್ಥಿ ಆತ್ಮಹತ್ಯೆ, ವಿವಿ ಪ್ರಕ್ಷುಬ್ಧ]

 ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ರೋಹಿತ್ ವೇಮುಲ ಪರವಾಗಿ ವಿದ್ಯಾರ್ಥಿಗಳು ಕೈಗೊಂಡಿದ್ದ ಪ್ರತಿಭಟನೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾಗವಹಿಸಿದ್ದರು.

ಕೇರಳದ ಕಲೆಯ ಭಂಗಿ

ಕೇರಳದ ಕಲೆಯ ಭಂಗಿ

ಕೇರಳದ ಕಲಾವಿದರು ತಮ್ಮ ಜಾನಪದ ಕಲೆಯನ್ನು ಕಲ್ಕತ್ತಾದಲ್ಲಿ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಅರ್ಧದಷ್ಟು ಜನರು ಅವರ ವಸ್ತ್ರ ವಿನ್ಯಾಸಕ್ಕೆ ಮಾರುಹೋಗಿದ್ದು, ಕಲೆಯನ್ನು ಅಭಿನಂದಿಸಿದರು.

ಗಣರಾಜ್ಯೋತ್ಸವಕ್ಕೆ ಸೈನಿಕರ ತಾಲೀಮು

ಗಣರಾಜ್ಯೋತ್ಸವಕ್ಕೆ ಸೈನಿಕರ ತಾಲೀಮು

ಜನವರಿ 26ರಂದು ನಡೆಯಲಿರುವ 66ನೇ ಗಣರಾಜ್ಯೋತ್ಸವಕ್ಕೆ ಈಗಾಗಲೇ ಮಕ್ಕಳು, ನೃತ್ಯಪಟುಗಳಿಂದ ಹಿಡಿದು ನಾನಾ ಮಂದಿ ತಯಾರಿಯಲ್ಲಿ ತೊಡಗಿದ್ದು, ಹಲವಾರು ಸೈನಿಕರು ದೆಹಲಿಯಲ್ಲಿ ಸಾಹಸಮಯ ಮೋಟಾರ್ ಸೈಕಲ್ ತಾಲೀಮಿನಲ್ಲಿದ್ದಾಗ ಕಂಡದ್ದು ಹೀಗೆ.

ಜೈಪುರದಲ್ಲಿ ಸಾಹಿತ್ಯ ಹಬ್ಬ

ಜೈಪುರದಲ್ಲಿ ಸಾಹಿತ್ಯ ಹಬ್ಬ

ಜನವರಿ 21ರಿಂದ ಜೈಪುರದ ಡಿಗ್ಗಿ ಪ್ಯಾಲೇಸ್ ಅರಮನೆಯಲ್ಲಿ ಆರಂಭವಾಗಿರುವ 2016ನೇ ಸಾಲಿನ ಸಾಹಿತ್ಯ ಹಬ್ಬ ವಿಜೃಂಭಣೆಯಿಂದ ನಡೆಯುತ್ತಿದ್ದು, ಹಲವಾರು ಕಲೆಗಳ ಸಮಾಗಮವಾಗಿದೆ. ಸಾಹಿತ್ಯ ಹಬ್ಬದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಗೊಂಬೆಯನ್ನು ಕಂಡು ಸಂತಸಪಟ್ಟಿದ್ದು ಹೀಗೆ.

ರಕ್ಷಾ ಮಂತ್ರಿ ಪದಕ ನೀಡಿದ ಮನೋಹರ್ ಪರಿಕ್ಕರ್

ರಕ್ಷಾ ಮಂತ್ರಿ ಪದಕ ನೀಡಿದ ಮನೋಹರ್ ಪರಿಕ್ಕರ್

ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ದೆಹಲಿಯಲ್ಲಿ 2016ನೇ ಸಾಲಿನ ಡಿಜಿ ಎನ್ ಸಿಸಿ ರಿಪಬ್ಲಿಕ್ ಕ್ಯಾಂಪಿನಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ 'ರಕ್ಷಾ ಮಂತ್ರಿ ಪದಕ ಮತ್ತು ಕಮೆಂಡೇಶನ್ ಕಾರ್ಡ್' ನೀಡಿ ಗೌರವಿಸಿದರು.

English summary
Delhi Chief Minister Arvind Kejriwal at Hyderabad Central University, where the students have been protesting after dalit student Rohith Vemula's suicide, in Hyderabad. Army daredevils display their skills on motorcycles during a rehearsal for the Republic Day Parade at Rajpath in New Delhi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X