Delhi Election: ಅರವಿಂದ್ ಕೇಜ್ರಿವಾಲ್ ವಿರುದ್ಧ ಕಿಡಿಕಾರಿದ ನರೇಂದ್ರ ಮೋದಿ
ದೆಹಲಿ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಫೆಬ್ರವರಿ 5 ರಂದು ಮತದಾನ ನಡೆಯಲಿದ್ದು ಎಲ್ಲಾ ಅಭ್ಯರ್ಥಿಗಳು ಕೊನೆಯ ಕ್ಷಣದ ಕಸರತ್ತು ನಡೆಸಿದ್ದಾರೆ. ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವೆ ಪರಸ್ಪರ ಆರೋಪ ಪ್ರತ್ಯಾರೋಪ ನಡೆಯುತ್ತಿದೆ. ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ತಮ್ಮ ಭಾಷಣದಲ್ಲಿ ಮಾತನಾಡಿದ ಅವರು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರನ್ನು ಪರೋಕ್ಷವಾಗಿ ಟೀಕಿಸಿದ್ದು, ಕೆಲವು ನಾಯಕರು ಐಷಾರಾಮಿ ಶವರ್ ಮತ್ತು ಬಾತ್‌ಟಬ್‌ಗಳ ಮೇಲೆ ಗಮನಹರಿಸಿದ್ದಾರೆ. ಆದರೆ ಬಿಜೆಪಿ ಪ್ರತಿ ಮನೆಯಲ್ಲೂ ನೀರು ಲಭ್ಯವಾಗುವಂತೆ ಮಾಡಿದೆ ಎಂದು ಹೇಳಿದರು. ಚುನಾವಣೆಗೆ ಒಂದು ದಿನ ಮುಂಚೆ ಅವರು ದೆಹಲಿ ಮಾಜಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶೀಷ್‌ಮಹಲ್ ಟೀಕೆಯನ್ನು ಮತ್ತೊಮ್ಮೆ ಪುನರುಚ್ಚಿಸಿದರು.

ನರೇಂದ್ರ ಮೋದಿ ಹೇಳಿದ್ದೇನು?
ಅರವಿಂದ್ ಕೇಜ್ರಿವಾಲ್ ಸಿಎಂ ಆಗಿದ್ದ ಸಂದರ್ಭದಲ್ಲಿ ಶೀಷ್‌ಮಹಲ್ ನಿರ್ಮಿಸುತ್ತಿರುವಾಗ ನಾವು ಬಡವರಿಗೆ ಮನೆಗಳನ್ನು ನಿರ್ಮಿಸುವತ್ತ ಗಮನಹರಿಸಿದ್ದೇವೆ. ಅರವಿಂದ್ ಕೇಜ್ರಿವಾಲ್ ಸಿಎಂ ಆಗಿದ್ದಾಗ ಅವರ ಬಂಗಲೆಯ ನವೀಕರಣ ಮಾಡಿದ್ದನ್ನು ಮೋದಿ ಟೀಕಿಸಿದ್ದರು.
ದೆಹಲಿ ಸಿಎಂ ನಿವಾಸದ ನವೀಕರಣದಲ್ಲಿ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಸಿದ್ಧಪಡಿಸಿದ ದಾಸ್ತಾನು ಪಟ್ಟಿಯಲ್ಲಿ ಬಾಡಿ ಮಸಾಜ್ ಯತ್ರಗಳು, ಬಾತ್‌ಟಬ್‌ಗಳಂತಹ ಐಷಾರಾಮಿ ವಸ್ತುಗಳನ್ನು ಬಳಕೆ ಮಾಡಿರುವುದು ಬಹಿರಂಗವಾಗಿದೆ.
ದೆಹಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಅಕ್ಟೋಬರ್ ತಿಂಗಳಿನಲ್ಲಿ ಕೇಜ್ರಿವಾಲ್ ನಿವಾಸವನ್ನು ಖಾಲಿ ಮಾಡಿದ್ದರು. ಬಳಿಕ ಅತಿಶಿ ದೆಹಲಿ ಸಿಎಂ ಆಗಿ ಆಯ್ಕೆಯಾಗಿದ್ದರು.
ಶೀಷ್‌ಮಹಲ್ ನವೀಕರಣದಲ್ಲಿ ಅಡುಗೆಮನೆಗಳು, ಶೌಚಾಲಯಗಳು, ತೊಳೆಯುವ ಪ್ರದೇಶಗಳು ಮತ್ತು ಜಿಮ್‌ಗಳಲ್ಲಿ 75 ಬೋಸ್ ಸೀಲಿಂಗ್ ಸ್ಪೀಕರ್‌ಗಳು ಕಂಡುಬಂದಿವೆ ಎಂದು ಬಿಜೆಪಿ ಆರೋಪಿಸಿದೆ. ಸುಧಾರಿತ ತಾಂತ್ರಿಕ ವೈಶಿಷ್ಟ್ಯಗಳನ್ನು ಹೊಂದಿರುವ 934 ಲೀಟರ್ ಮಲ್ಟಿ-ಡೋರ್ ಫ್ರಿಡ್ಜ್ ಕೂಡ ಖರೀದಿ ಮಾಡಲಾಗಿದೆ. ಐಷಾರಾಮಿ ವಸ್ತುಗಳಲ್ಲಿ ಟಚ್‌ಸ್ಕ್ರೀನ್ ಹೊಂದಿರುವ 73 ಲೀಟರ್ ಸ್ಟೀಮ್ ಓವನ್ ಕೂಡ ಸೇರಿದೆ ಎಂದು ಬಿಜೆಪಿ ಟೀಕಸಿದೆ.
ನಾನು ಶೀಶ್‌ಮಹಲ್ ನಿರ್ಮಿಸಬಹುದಿತ್ತು, ಆದರೆ ನನ್ನ ದೇಶವಾಸಿಗಳು ಶಾಶ್ವತ ಮನೆಗಳನ್ನು ಪಡೆಯಬೇಕು ಎಂಬುದು ನನ್ನ ಕನಸಾಗಿತ್ತು ಎಂದು ಪ್ರಧಾನಿ ಮೋದಿ ಈ ಮೊದಲು ಕೇಜ್ರಿವಾಲ್ ವಿರುದ್ಧ ಟೀಕೆ ಮಾಡಿದ್ದರು.












Click it and Unblock the Notifications