ಸೋಲಾರ್ ಹಗರಣ: ಉಮ್ಮನ್ ಚಾಂಡಿ ವಿರುದ್ಧ ಎಫ್ಐಆರ್ ಗೆ ಅನುಮತಿ

Posted By:
Subscribe to Oneindia Kannada

ತಿರುವನಂತಪುರಂ, ಜ.28: ಬಹುಕೋಟಿ ಸೌರಶಕ್ತಿ ಫಲಕ ಯೋಜನೆ ಲಂಚ ಪ್ರಕರಣದ ಆರೋಪಿಯಾಗಿರುವ ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರಿಗೆ ಭಾರಿ ಹಿನ್ನಡೆ ಉಂಟಾಗಿದೆ. ಕೇರಳ ಸಿಎಂ ಚಾಂಡಿ ವಿರುದ್ಧ ಎಫ್ ಐಆರ್ ದಾಖಲಿಸಿಕೊಳ್ಳಲು ತ್ರಿಸ್ಸೂರಿನ ಕೋರ್ಟ್ ತನಿಖಾ ತಂಡಕ್ಕೆ ಅನುಮತಿ ನೀಡಿದೆ.

ಸೋಲಾರ್ ಹಗರಣದ ಪ್ರಮುಖ ಆರೋಪಿಯಾಗಿರುವ ಸರಿತಾ ನಾಯರ್ ಅವರು ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹಾಗೂ ಅವರ ಕ್ಯಾಬಿನೆಟ್ ಸದಸ್ಯರಿಗೆ 1.90 ಕೋಟಿ ರು ಲಂಚ ನೀಡಿರುವುದಾಗಿ ನ್ಯಾಯಾಂಗ ಸಮಿತಿ ಮುಂದೆ ಹೇಳಿಕೆ ನೀಡಿದ್ದರು.[ಸೋಲಾರ್ ಹಗರಣ: ಸೆಕ್ಸ್ ಆಫರ್ ಬದಲಿಗೆ ಕೋಟಿ ರು ಲಂಚ?]

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ತ್ರಿಶೂರಿನ ವಿಜಿಲೆನ್ಸ್ ಕೋರ್ಟ್, ಉಮ್ಮನ್ ಚಾಂಡಿ ಹಾಗೂ ಇಂಧನ ಸಚಿವ ಮೊಹಮ್ಮದ್ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ನಿರ್ದೇಶಿಸಿದೆ.[ಸೋಲಾರ್ ಹಗರಣ ಶಾಕ್ ನಿಂದ ಕೇರಳ ಸಿಎಂಗೆ ರಿಲೀಫ್]

Thrissur court orders FIR against Kerala CM

ಮತ್ತೊಬ್ಬ ಆರೋಪಿ ಬಿಜು ರಾಧಾಕೃಷ್ಣನ್ ಅವರು ಈ ಹಿಂದೆ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಮೇಲೆ ಲಂಚಕ್ಕೆ ಬದಲಾಗಿ ಸೆಕ್ಸ್ ಆಫರ್ ಕೇಳಿದ್ರು ಎಂದು ಆರೋಪಿಸಿದ್ದರು. ಆದರೆ, ಎಲ್ಲಾ ಆರೋಪಗಳನ್ನು ಮುಖ್ಯಮಂತ್ರಿಗಳ ಕಚೇರಿ ಅಲ್ಲಗೆಳೆದಿತ್ತು.[ಹಗರಣದ ಗಣಿಯಲ್ಲಿ 'ಸೋಲಾರ್' ಸುಂದರಿಯರು]

ಕೇರಳ ಸಿಎಂ ಉಮ್ಮನ್ ಚಾಂಡಿ ಹಾಗೂ ಅವರ ಕ್ಯಾಬಿನೆಟ್ ಸದಸ್ಯ ಆರ್ಯದಾನ್ ಮೊಹಮ್ಮದ್ ಅವರು 1.90 ಕೋಟಿ ರು ಲಂಚ ಕೇಳಿದ್ದರು. ಲಂಚದ ಮೊತ್ತ ಪಾವತಿಸಿದ ಮೇಲೆ ಬಹುಕೋಟಿ ಸೋಲಾರ್ ಯೋಜನೆಯನ್ನು ವಹಿಸಲಾಯಿತು. ['ನನಗೆ ಗಲ್ಲು ಶಿಕ್ಷೆ ಕೊಡಿ' ಎಂದ 'ಸೋಲಾರ್' ಅಪರಾಧಿ]

ಇದಲ್ಲದೆ ಇಂಧನ ಸಚಿವ ಅರ್ಯದಾನ್ ಮೊಹಮ್ಮದ್ ಅವರ ಪಿಎಗೂ 40 ಲಕ್ಷ ರು ಲಂಚ ನೀಡಲಾಗಿದೆ ಎಂದು ಸರಿತಾ ಹೇಳಿದ್ದಾರೆ. ಚಾಂಡಿ ಅವರ ಮಾಜಿ ಪಿಎ ಜಿಕುಮೊನ್ ಅವರಿಂದ 7 ಕೋಟಿ ರು ಲಂಚ ಬೇಡಿಕೆ ಬಂದಿತ್ತು. ಈ ಮೊತ್ತವನ್ನು ಚಾಂಡಿ ಅವರ ಅನಧಿಕೃತ ಸಾಥಿ ದೆಹಲಿ ನಿವಾಸಿ ಕುರುವಿಲ್ಲ ಎಂಬುವವರಿಗೆ ನೀಡಬೇಕಿತ್ತು ಎಂದಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Solar Scam: Kerala Chief Minister Oommen Chandy in the alleged solar scam case. The Thrissur Vigilance Court on Monday directed an FIR against Chandy and Power Minister Araydan Mohammed in the wake of bribery allegations made against him by a solar scam accused.
Please Wait while comments are loading...