12 ಲಕ್ಷ ಪ್ಯಾಕೇಜ್ ಇದ್ದರೂ ವೀಕೆಂಡಿನಲ್ಲಿ ರಾಪಿಡೋ ರೈಡ್ : ಸೋಶಿಯಲ್ ಮೀಡಿಯಾದಲ್ಲಿ ಈ ಸಾಫ್ಟ್ ವೇರ್ ಎಂಜಿನಿಯರಿದ್ದೇ ಚರ್ಚೆ

Software Engineer Rapido Driver : ಸಾಫ್ಟ್ ವೇರ್ ಎಂಜಿನಿಯರ್ ಎಂದರೆ ಕೈ ತುಂಬಾ ಸಂಬಳ ಪಡೆಯುವವರು. ವಾರಕ್ಕೆ ಎರಡು ದಿನ ರಜೆ. ಹಾಗಾಗಿ ವೀಕ್ ಎಂಡಿನಲ್ಲಿ ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಜಾಲಿಯಾಗಿ ಕಾಲ ಕಳೆಯುತ್ತಾರೆ. ಇದೇ ಕಲ್ಪನೆ ಎಲ್ಲರಿಗೂ ಇರುವುದು. ಬಹುತೇಕ ಕಡೆಗಳಲ್ಲಿ ಇದು ಸತ್ಯ ಕೂಡಾ. ಸಾಮಾನ್ಯವಾಗಿ, ಯಾರಿಗೆ ವರ್ಷಕ್ಕೆ 12 ಲಕ್ಷ ಸಂಬಳ ಇರುತ್ತದೆಯೋ ಅವರ ಲೈಫ್ ಸ್ಟೈಲ್ ಕೂಡಾ ಚೆನ್ನಾಗಿರುತ್ತದೆ. ವೀಕೆಂಡಿನಲ್ಲಿ ಟ್ರಾವೆಲ್ ಮತ್ತು ವಿಶ್ರಾಂತಿ ಪಡೆಯುತ್ತಾರೆ.ಆದರೆ ಪುಣೆಯ ಇಬ್ಬರು ಸಾಫ್ಟ್ ವೇರ್ ಎಂಜಿನಿಯರ್ ಗಳು ವಾರದ ರಜೆ ಕಳೆಯುವುದಕ್ಕೆ ಬೇರೆಯೇ ಮಾರ್ಗವನ್ನು ಆರಿಸಿಕೊಂಡಿದ್ದಾರೆ.

Software Engineer Rapido Driver Two Software Engineers From Pune 12 Lakh Package Per Annum Rides Rapido Bike Weekends For Side Income

ವೀಕ್ ಎಂಡಿನಲ್ಲಿ ಬೈಕ್ ಟ್ಯಾಕ್ಸಿ ರೈಡ್ :

ಇವರಿಬ್ಬರೂ ಐಟಿ ವಲಯದಲ್ಲಿ (it jobs) ಕೆಲಸ ಮಾಡುತ್ತಾರೆ. ಕೈತುಂಬಾ ಸಂಬಳ. ಇಷ್ಟಿದ್ದರೂ ವೀಕ್ ಎಂಡಿನಲ್ಲಿ ರಾಪಿಡೊ ಬೈಕ್ ರೈಡ್ ಮಾಡ್ತಾರೆ. ಸೋಶಿಯಲ್ ಮಿಡಿಯಾದಲ್ಲಿ ಇವರ ಬಗ್ಗೆ ಪೋಸ್ಟ್ ಶೇರ್ ಆಗ್ತಾ ಇದ್ದ ಹಾಗೆಯೇ ಇವರಿಬ್ಬರ ಚರ್ಚೆ ಎಲ್ಲಾ ಕಡೆ ಶುರುವಾಗಿದೆ. ಸಾಫ್ಟ್ ವೇರ್ ಎಂಜಿನಿಯರ್ ಗಳಾಗಿ ಕೈ ತುಂಬಾ ಸಂಬಳ ತಗೋಳುತ್ತಾ ಇರುವಾಗ ಬೈಕ್ ಟ್ಯಾಕ್ಸಿ ಓಡಿಸುವ ಅಗತ್ಯವೇನಿದೆ ಎನ್ನುವುದೇ ಎಲ್ಲರ ಪ್ರಶ್ನೆ.

12 ಲಕ್ಷ ರೂ. ಸಂಬಳ ಇದ್ದರೂ ಈ ನಿರ್ಧಾರ :

ಇವರಿಬ್ಬರ ರೂಮ್ ಮೇಟ್ ಸೋಶಿಯಲ್ ಮಿಡಿಯಾದಲ್ಲಿ ಇಬ್ಬರ ಬಗ್ಗೆಯೂ ಬರೆದುಕೊಂಡಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿದ ವ್ಯಕ್ತಿಯ ಪ್ರಕಾರ ಇಬ್ಬರೂ ವರ್ಷಕ್ಕೆ 12 ಲಕ್ಷ ರೂ. ಸಂಬಳ ಪಡೀತಾ ಇದ್ದಾರೆ. ಆದರೂ ಇಬ್ಬರೂ ತಮ್ಮ ಸ್ಪೋರ್ಟ್ಸ್ ಬೈಕ್ ಅನ್ನು ರಾಪಿಡೊ ಜೊತೆ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. ವಾರಾಂತ್ಯದಲ್ಲಿ, ರಾಪಿಡೋ ಬೈಕ್ ರೈಡ್ ಮಾಡುತ್ತಾರೆ. ಇವರು ವೀಕೆಂಡಿನಲ್ಲಿ ದಿನಕ್ಕೆ ಎಷ್ಟು ಗಂಟೆ ಬೈಕ್ ಓಡಿಸ್ತಾರೆ? ಎಷ್ಟು ರೈಡ್ ತಗೋತಾರೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಕೊಟ್ಟಿಲ್ಲ.

ಹೆಚ್ಚುವರಿ ಆದಾಯ :

ಸೋಶಿಯಲ್ ಮೀಡಿಯಾದಲ್ಲಿ (social media) ಶೇರ್ ಆದ ಮಾಹಿತಿಯ ಪ್ರಕಾರ, ಇಬ್ಬರು ಎಂಜಿನಿಯರ್​ ಪೈಕಿ ಒಬ್ಬರು ಒಂದು ದಿನಕ್ಕೆ 900 ರೂ. ದುಡಿದರೆ, ಇನ್ನೊಬ್ಬರು ಸುಮಾರು 500 ರೂ. ಸಂಪಾದಿಸಿರುವಂತೆ ತೋರುತ್ತದೆ. ಆಫೀಸಿನಲ್ಲಿ ಕುಳಿತು ಕೋಡಿಂಗ್ ಮಾಡುವ ಈ ಯುವಕರು ತಮ್ಮ ಕೆಲಸಕ್ಕಿಂತ ಸಂಪೂರ್ಣವಾಗಿ ವಿಭಿನ್ನವಾದ ಕೆಲಸಕ್ಕೆ ಕೈ ಹಾಕಿದ್ದಾರೆ. ಆದರೆ ಪೆಟ್ರೋಲ್ ಮತ್ತು ಇತರ ಖರ್ಚು ತೆಗೆದು ಹಾಕಿ ಅವರ ಕೈಯಲ್ಲಿ ಎಷ್ಟು ಹಣ ಉಳಿದಿದೆ ಎಂಬುದು ಸ್ಪಷ್ಟವಾಗಿಲ್ಲ.

ಈ ಕಥೆಯ ಅತ್ಯಂತ ಆಸಕ್ತಿದಾಯಕ ಅಂಶವೆಂದರೆ ಇಬ್ಬರೂ ಇದನ್ನು ಕೇವಲ ಹಣಕ್ಕಾಗಿ ಮಾಡಿದ್ದಾರೆಯೇ ಅಥವಾ ಇದರ ಹಿಂದೆ ಬೇರೆ ಕಾರಣವಿದೆಯೇ ಎನ್ನುವುದು ಕೂಡಾ ಗೊತ್ತಿಲ್ಲ. ಪೋಸ್ಟನ್ನು ಆಧರಿಸಿ ಹೇಳುವುದಾದರೆ ವೀಕೆಂಡಿನಲ್ಲಿ ಏನೋ ಡಿಫರೆಂಟಾಗಿ ಮಾಡಬೇಕು ಅಂದುಕೊಂಡು ಈ ಸಾಹಸಕ್ಕೆ ಕೈ ಹಾಕಿರಬಹುದು. ಕೆಲವರು ಇದನ್ನು ಹೆಚ್ಚುವರಿ ಆದಾಯದ ಮೂಲ ಇರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ಹೊಸ ಜನರನ್ನು ಭೇಟಿ ಮಾಡಲು ಬಳಸಿಕೊಳ್ಳುವ ಅವಕಾಶವಾಗಿರಬಹುದು ಎಂದು ಹೇಳಿದ್ದಾರೆ.

Software Engineer Rapido Driver Two Software Engineers From Pune 12 LPA Rides Rapido Bike Weekends

ಜನರಿಂದ ಹರಿದು ಬಂತು ಕಾಮೆಂಟ್ :

ಈ ಪೋಸ್ಟ್ ಹೊರಬರ್ತಾ ಇದ್ದ ಹಾಗೆಯೇ ಜನ ತಮ್ಮದೇ ಆದ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಇದನ್ನು ಹೆಚ್ಚು ಹಣ ಗಳಿಸುವ ಮಾರ್ಗ ಎಂದು ಕರೆದರೆ ಇನ್ನು ಕೆಲವರು ಮೋಜಿಗಾಗಿ, ಹವ್ಯಾಸಕ್ಕಾಗಿ ಮಾಡುತ್ತಿರಬಹುದು ಎಂದು ಹೇಳಿದ್ಧಾರೆ. ಆದರೆ ಇವರಿಬ್ಬರ ಉದ್ದೇಶ ಮಾತ್ರ ಯಾರಿಗೂ ಸ್ಪಷ್ಟವಾಗಿಲ್ಲ. ಇನ್ನು ಕೆಲವರು ದಿನಕ್ಕೆ ಎರಡು ಲಕ್ಷ ರೂಪಾಯಿ ಸಿಕ್ಕರೂ ಅಂತಹ ಕೆಲಸವನ್ನು ಮಾಡಲ್ಲ ಅಂತ ಬರೆದಿದ್ದಾರೆ.

ಹುಟ್ಟು ಹಾಕಿದೆ ಹೊಸ ಚರ್ಚೆ :

ಒಳ್ಳೆ ಸಂಬಳ ಸಿಕ್ಕ ನಂತರವೂ ಜನ ಬೇರೆ ಕೆಲಸ ಮಾಡುವ ಅಗತ್ಯ ಏನಿದೆ ಎನ್ನುವ ಪ್ರಶ್ನೆಯನ್ನು ಈ ಪೋಸ್ಟ್ ಹುಟ್ಟು ಹಾಕಿದೆ. ಅನೇಕರು ತಮ್ಮ ನಿಯಮಿತ ಕೆಲಸದೊಂದಿಗೆ ಫ್ರೀಲ್ಯಾನ್ಸಿಂಗ್, ಆನ್ಲೈನ್ ಕೆಲಸ ಅಥವಾ ಇತರ ವಿಧಾನಗಳ ಮೂಲಕ ಹೆಚ್ಚುವರಿ ಹಣ ಗಳಿಸಲು ಪ್ರಯತ್ನಿಸುತ್ತಾರೆ. ಆದರೆ ಪ್ರತಿಯೊಂದು ಸೈಡ್ ವರ್ಕನ್ನು ಕೇವಲ ಹಣಕ್ಕಾಗಿ ಎಂದು ಲೆಕ್ಕಹಾಕಲು ಸಾಧ್ಯವಿಲ್ಲ. ಇದು ತೆಗೆದುಕೊಳ್ಳುವ ಸಮಯ, ಪೆಟ್ರೋಲ್, ಕಠಿಣ ಪರಿಶ್ರಮ ಮತ್ತು ಸುರಕ್ಷತೆಯ ವೆಚ್ಚವೂ ಮುಖ್ಯವಾಗಿದೆ. ಪುಣೆಯ ಈ ಇಬ್ಬರು ಎಂಜಿನಿಯರ್ ಗಳ ಕಥೆಯಲ್ಲೂ ಹಾಗೆಯೇ. ಒಂದು ದಿನ ಬೈಕ್ ಟ್ಯಾಕ್ಸಿ ಓಡಿಸುವ ಮೂಲಕ ಹಣ ಏನೋ ಸಂಪಾದಿಸಿದ್ದಾರೆ. ಆದರೆ ಅವರ ಈ ಅನುಭವ ಸೋಶಿಯಲ್ ಮಿಡಿಯಾದಲ್ಲಿ ಮಾತ್ರ ದೊಡ್ಡ ಚರ್ಚೆ ಶುರು ಮಾಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+