Weather Forecast: ಪರ್ವತಗಳಲ್ಲಿ ಹಿಮಪಾತ, ಮಳೆ: ಬಯಲು ಪ್ರದೇಶದಲ್ಲಿ ಶಾಖದ ಅಲೆ, ಭಾರತದ ಹವಾಮಾನ ವರದಿ ಇಲ್ಲಿದೆ...
ದೆಹಲಿ ಏಪ್ರಿಲ್ 4: ಏಪ್ರಿಲ್ ಆರಂಭದೊಂದಿಗೆ ಬಯಲು ಸೀಮೆಯಲ್ಲಿ ಬಿಸಿಲಿನ ಝಳ ಶುರುವಾಗಿದೆ. ಜೊತೆಗೆ ಗುಡ್ಡಗಾಡು ಪ್ರದೇಶಗಳಲ್ಲಿ ಹವಾಮಾನ ವೇಗವಾಗಿ ಬದಲಾಗುತ್ತಿದೆ. ಆದರೆ ಉತ್ತರ ಭಾರತದ ಗುಡ್ಡಗಾಡು ಪ್ರದೇಶಗಳಲ್ಲಿ ಮಳೆ ಮತ್ತು ಹಿಮಪಾತ ಮುಂದುವರಿದಿದೆ. ಹವಾಮಾನ ಇಲಾಖೆಯ ಪ್ರಕಾರ, ಪಶ್ಚಿಮ ಹಿಮಾಲಯದ ಪ್ರದೇಶಗಳಲ್ಲಿ ಮಳೆ ಮತ್ತು ಹಿಮಪಾತ ಮುಂದುವರಿಯುವ ನಿರೀಕ್ಷೆಯಿದೆ. ಐಎಂಡಿ ಪ್ರಕಾರ ಮೂರು ರಾಜ್ಯಗಳ ವಿವಿಧ ಭಾಗಗಳಲ್ಲಿ ಮಳೆ ಮುನ್ಸೂಚನೆ ನೀಡಲಾಗಿದೆ.
ಭಾರತದಲ್ಲಿ ಹೀಟ್ ವೇವ್ ಎಚ್ಚರಿಕೆ!
ಈ ತಿಂಗಳಿನಿಂದ ದಕ್ಷಿಣ ಪೆನಿನ್ಸುಲಾ, ಮಧ್ಯ ಭಾರತ, ಪೂರ್ವ ಭಾರತ ಮತ್ತು ವಾಯುವ್ಯ ಭಾರತದ ಬಯಲು ಪ್ರದೇಶಗಳಲ್ಲಿ ಶಾಖದ ಅಲೆ ಹೆಚ್ಚಾಗಲಿದೆ ಎಂದು ಐಎಂಡಿ ಊಹಿಸಿದೆ. ಪಂಜಾಬ್, ಹರಿಯಾಣ ಮತ್ತು ಚಂಡೀಗಢದಂತಹ ಹಲವು ರಾಜ್ಯಗಳಲ್ಲಿ ತಾಪಮಾನ ಹೆಚ್ಚಳದಿಂದಾಗಿ ಶಾಖ ಹೆಚ್ಚಾಗುವ ಮುನ್ಸೂಚನೆ ಇದೆ. ಇನ್ನೂ ಮಧ್ಯಪ್ರದೇಶ, ಒಡಿಶಾ, ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲೂ ಶಾಖದ ಅಲೆಯ ಸಾಧ್ಯತೆಯಿದೆ.

ಮೂರು ರಾಜ್ಯಗಳಲ್ಲಿ ಮಳೆ ಮತ್ತು ಹಿಮಪಾತ
ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡದ ವಿವಿಧ ಸ್ಥಳಗಳಲ್ಲಿ ಮಳೆ ಮತ್ತು ಹಿಮಪಾತವಾಗುತ್ತಿದೆ. ಹಿಮಾಚಲ, ಮನಾಲಿ, ಸ್ಪಿತಿ ಕಣಿವೆ, ಶಿಮ್ಲಾ ಹಾಗೂ ಧರ್ಮಶಾಲಾದಲ್ಲಿ ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆ ಇದೆ. ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ಮತ್ತು ಬನಿಹಾಲ್‌ನಲ್ಲಿ ಮಳೆಯಾಗುವ ಸೂಚನೆ ಇದೆ. ಉತ್ತರಾಖಂಡದ ಕೆಲವು ಭಾಗಗಳಲ್ಲಿ ಮಳೆ ಮತ್ತು ಹಿಮಪಾತದ ಎಚ್ಚರಿಕೆ ನೀಡಲಾಗಿದೆ.
ಉತ್ತರಾಖಂಡದ 3 ಜಿಲ್ಲೆಗಳಿಗೆ ಎಚ್ಚರಿಕೆ!
ರಾಜ್ಯದ ಮೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರಕಾಶಿ, ಪಿಥೋರಗಢ ಮತ್ತು ಚಮೋಲಿಯಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಈ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಸ್ಪಷ್ಟ ವಾತಾವರಣ ಇರಲಿದೆ. ಮಳೆ ಬೀಳುವ ಪ್ರದೇಶಗಳಲ್ಲಿ ಜನರು ಶಾಖದಿಂದ ಪರಿಹಾರವನ್ನು ಪಡೆಲಿದ್ದಾರೆ.
ಏಪ್ರಿಲ್ 4 ಮತ್ತು 5 ರಂದು ರಾಜ್ಯದ ಹವಾಮಾನ ವೈಪರೀತ್ಯದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಇದರ ನಂತರ ಹವಾಮಾನ ಶುಷ್ಕವಾಗುವ ನಿರೀಕ್ಷೆಯಿದೆ. ಏಪ್ರಿಲ್ 5 ರಂದು ಉತ್ತರಕಾಶಿ, ಚಮೋಲಿ, ರುದ್ರಪ್ರಯಾಗ, ಪಿಥೋರಗಢ, ಬಾಗೇಶ್ವರ್ ಮತ್ತು ಅಲ್ಮೋರಾ ಜಿಲ್ಲೆಗಳಲ್ಲಿ 4000 ಮೀಟರ್‌ಗಿಂತ ಎತ್ತರದ ಪ್ರದೇಶಗಳಲ್ಲಿ ಹಿಮಪಾತವಾಗಬಹುದು.

ಇಂದು ಹವಾಮಾನ ಹೇಗಿರುತ್ತದೆ?
ಹವಾಮಾನ ಇಲಾಖೆ ಪ್ರಕಾರ ಬಯಲು ಸೀಮೆಯಲ್ಲಿ ಗುರುವಾರ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ. ಐಎಂಡಿ ಪ್ರಕಾರ ಗರಿಷ್ಠ ತಾಪಮಾನ 37 ಮತ್ತು ಕನಿಷ್ಠ ತಾಪಮಾನ 18 ಆಗುವ ಸಾಧ್ಯತೆಯಿದೆ. ಶುಕ್ರವಾರ ಅಂದರೆ ನಾಳೆ ಮೋಡ ಕವಿದ ವಾತಾವರಣ ಇರಲಿದ್ದು, ಈ ದಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗುವ ಸಂಭವವಿದೆ. ಹಗಲಿನಲ್ಲಿ ಗಾಳಿಯ ವೇಗ ಗಂಟೆಗೆ 25 ರಿಂದ 35 ಕಿ.ಮೀ ಇರುತ್ತದೆ. ದೆಹಲಿ-ಎನ್‌ಸಿಆರ್‌ನಲ್ಲಿ ಗುರುವಾರ ಮೋಡ ಕವಿದ ವಾತಾವರಣದ ಸಾಧ್ಯತೆ ಇರಲಿದ್ದು, ಹವಾಮಾನ ಆಹ್ಲಾದಕರವಾಗಿರುತ್ತದೆ. ಶಾಖದಿಂದ ಪರಿಹಾರ ಸಿಗಲಿದೆ.












Click it and Unblock the Notifications