• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಸರಕಾರದ ಆರೋಗ್ಯ ಸಚಿವಾಲಯಕ್ಕೆನನ್ನ ಮನವಿ

By ಬಾಲರಾಜ್ ತಂತ್ರಿ
|

ಸಾರ್ವಜನಿಕರನ್ನು ಬಹುಬೇಗ ತಲುಪ ಬಹುದಾದ ಎಸ್ಎಂಎಸ್ ಸೌಲಭ್ಯವನ್ನು ಕೇಂದ್ರದ ನರೇಂದ್ರ ಮೋದಿ ಸರಕಾರ ಬಳಸಿಕೊಳ್ಳಲಾರಂಭಿಸಿದೆ.

ಬಲ್ಕ್ ಎಸ್ಎಂಎಸ್ ಮೂಲಕ ಈಗಾಗಲೇ ಆಗಸ್ಟ್ ಹದಿನೈದರಂದು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕಳುಹಿಸಿದ್ದ ಮೋದಿ ಸರಕಾರ, ಈಗ ತನ್ನ ಆರೋಗ್ಯ ಇಲಾಖೆಯಿಂದ ಬಲ್ಕ್ ಮೆಸೇಜ್ ಕಳುಹಿಸಿದೆ.

ಕೆಲ ದಿನಗಳ ಹಿಂದೆ ಆರೋಗ್ಯ ಇಲಾಖೆಯಿಂದ ಬಂದ ಮೆಸೇಜ್ ಹೀಗಿದೆ " Ministry of Health and Family Welfare, Government of India welcomes you, Stay for at least 48 hrs in the health facility after delivery to avoid any complications for mother and the baby. The treatement provided at the facility including diet, drugs etc., will be free of cost. This facility applicable those who admitted in the government hospitals".

ಕೇಂದ್ರ ಸರಕಾರದ ಈ ನಿರ್ಧಾರ, ಬಡ ಕುಟುಂಬದ ಮತ್ತು ಈಗಾಗಲೇ ಈ ಸೌಲಭ್ಯವನ್ನೇ ನೆಚ್ಚಿಕೊಂಡಿರುವ ವರ್ಗದ ಜನತೆಗೆ ಆಶಾದಾಯಕವಾಗುವ ಸುದ್ದಿಯಾಗುವುದಂತೂ ನಿಜ.

ಆದರೆ ಇಂತಹ ಜನಪ್ರಿಯ ಕಾರ್ಯಕ್ರಮದ ಸಂದೇಶ ಕಳುಹಿಸುವ ಮುನ್ನ ರಾಜ್ಯ ಸರಕಾರದ ಅಡಿಯಲ್ಲಿ ಬರುವ ಆಸ್ಪತ್ರೆಗಳು ಮತ್ತು ಕೇಂದ್ರ ಸರಕಾರ ವ್ಯಾಪ್ತಿಯಲ್ಲಿ ಬರುವ ಇಎಸ್ಐ ಆಸ್ಪತ್ರೆಗಳ ಬಗ್ಗೆ ಆರೋಗ್ಯ ಇಲಾಖೆ ಗಮನ ಹರಿಸಿದಿಯೇ ಎನ್ನುವುದು ಪ್ರಶ್ನೆ?

ಕೇಂದ್ರ ಮತ್ತು ರಾಜ್ಯ ಸರಕಾರದ ವ್ಯಾಪ್ತಿಯ ಆಸ್ಪತ್ರೆಗಳ ಗುಣಮಟ್ಟ, ಕಾರ್ಯವೈಖರಿ, ಲಂಚಾವತಾರ ಯಾವ ಮಟ್ಟಿಗೆ ಇದೆ ಎನ್ನುವುದನ್ನು ಜನಾನುರಾಗಿ ಎಂದೇ ಹೆಸರಾಗಿರುವ ಮತ್ತು ಕೆಲವು ದಿನಗಳ ಹಿಂದಷ್ಟೇ ಅಧಿಕಾರ ಸ್ವೀಕರಿಸಿ ಕೊಂಡಿರುವ ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡಾ ಒಮ್ಮೆ ಅವಲೋಕಿಸುವುದು ಒಳಿತು. (ರೋಗಿಯ ಬುಡಕ್ಕೆ ಬಿಸಿನೀರು ಬಿಟ್ಟು ಸುಟ್ಟ ವೈದ್ಯರು)

ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರು ಹೆರಿಗೆಗೆ ಮುನ್ನ ಮತ್ತು ನಂತರದ ಕೆಲವು ದಿನಗಳಲ್ಲಿ ಯಾವ ಮಟ್ಟಿಗೆ ಜಾಗರೂಕತೆಯಿಂದ ಇರಬೇಕಾಗುತ್ತದೆ ಎನ್ನುವುದು ಸಾಮಾಜಿಕ ಸೇವಾಕರ್ತರೂ ಆಗಿರುವ ನಡ್ಡಾ ಅವರಿಗೆ ತಿಳಿಯದ ವಿಚಾರವೇನೂ ಅಲ್ಲ.

ಅಧಿಕಾರಿಗಳ ಮಟ್ಟದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಹೊಂದಾಣಿಕೆಯ ಮೂಲಕ ಜವಾಬ್ದಾರಿಯುತವಾಗಿ ನಿರ್ವಹಿಸ ಬೇಕಾದ ಕೆಲಸವಿದು. ಮಹಿಳೆಯರಿಗೆ ಪುನರ್ಜನ್ಮ ನೀಡುವ ಅವಧಿಯಾಗಿರುವ ಹೆರಿಗೆ ಮತ್ತು ಹೆರಿಗೆಯ ನಂತರದ ಸಮಯದಲ್ಲಿ ಹೊಂದಾಣಿಕೆಯ ಜೊತೆಗೆ ಮಾನವೀಯತೆ ಮತ್ತು ಆತ್ಮಸಾಕ್ಷಿಯಿಂದ ಸ್ಪಂಧಿಸುವ ಕೆಲಸವದು.

ಕೇಂದ್ರ ಆರೋಗ್ಯ ಸಚಿವರು, ಆಯಾಯ ರಾಜ್ಯ ವ್ಯಾಪ್ತಿಯ ಸಚಿವರು, ಜೊತೆಗೆ ನಮ್ಮ ನಾಡಿನ ಆರೋಗ್ಯ ಸಚಿವರಾದ ಯು ಟಿ ಖಾದರ್ ಅವರು surprise visit ಮೂಲಕ ಆಸ್ಪತೆಗೆ ಭೇಟಿ ನೀಡಿದರೆ ಆಸ್ಪತ್ರೆಯ ವಸ್ತುಸ್ಥಿತಿಯ ಅವಲೋಕನವಾಗಬಹುದು.

ಸರಕಾರೀ ಆಸ್ಪತ್ರೆಯಲ್ಲಿ ಎದ್ದು ಕಾಣುವ ಕೆಳಗಂಡ ಅವ್ಯವಸ್ಥೆಯನ್ನು ಸುಧಾರಿಸಿ, ನಂತರ ಎಸ್ಎಂಎಸ್ ಕಳುಹಿಸುವುದು ಉತ್ತಮ.

> ಒಬ್ಬರಿಗೆ ಬಳಸಿದ ಸಿರಿಂಜ್ ಅನ್ನು ಇನ್ನೊಬ್ಬರಿಗೆ ಬಳಸುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ?

> ದುಡ್ಡು ಕೊಟ್ಟರೆ ನವಜಾತ ಶಿಶುಗಳನ್ನು ಅದಲು ಬದಲು ಮಾಡುವುದಿಲ್ಲ ತಾನೇ?

> ಹಾಲಿಗೆ ನೀರು ಹಾಕ್ತೀರಾ ಅಥವಾ ನೀರಿಗೆ ಹಾಲು ಹಾಕ್ತೀರಾ ಎನ್ನುವುದನ್ನು ಸ್ಪಷ್ಟ ಪಡಿಸಿ

> ಕೊಳೆತ ಮೊಟ್ಟೆ ಅಥವಾ ಬೂಸ್ಟ್ ಹಿಡಿದಿರುವ ಬ್ರೆಡ್ ಕೊಡುವುದಿಲ್ಲ ತಾನೇ?

> ಸರಕಾರ ಬೇಡಿಕೆ ಈಡೇರಿಸಿಲ್ಲ ಎಂದು ವೈದ್ಯರು ಧರಣಿ ಕೂತರೆ ರೋಗಿಗಳ ಗತಿಯೇನು?

ಮೊದಲು ಸರಕಾರಿ ಆಸ್ಪತ್ರೆಯ ಸೌಲಭ್ಯಗಳು ಸುಧಾರಿಸ ಬೇಕಾಗಿದೆ. ಗವರ್ನಮೆಂಟ್ ಆಸ್ಪತ್ರೆಯನ್ನೇ ನಂಬಿಕೊಂಡಿರುವ ವರ್ಗದ ಜೊತೆಗೆ ಇತರ ಮಧ್ಯಮ ವರ್ಗದವರೂ ಸರಕಾರೀ ಆಸ್ಪತ್ರೆಯನ್ನು ನಂಬಬಹುದಾದಂತಹ ಗುಣಮಟ್ಟದ ಸೌಲಭ್ಯ ಮೊದಲು ಇಲ್ಲಿ ಆಗಬೇಕಾಗಿದೆ.

ಹಾಗಾಗಿ, ಮೊದಲು ಸರಕಾರಿ ಆಸ್ಪತ್ರೆಗಳ ಗುಣಮಟ್ಟವನ್ನು ಸುಧಾರಿಸಿ, ಇಲ್ಲದಿದ್ದರೆ ಆರೋಗ್ಯ ಇಲಾಖೆಯ ಈ ಸಂದೇಶ ಬರಿ ತೋರಿಕೆಗಾಗಿ, ಜನಪ್ರಿಯತೆಯ ತಂತ್ರ ಎಂದು people will just ignore it.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
SMS received from Ministry of Health and Family Welfare to use government facility with free of cost for pregnancy women. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more