ಅಂತರ ರಾಜ್ಯ ಮಂಡಳಿಯಿಂದ ಸದಾನಂದಗೌಡ, ಸ್ಮೃತಿ ಇರಾನಿ ಔಟ್!

Written By: Ramesh
Subscribe to Oneindia Kannada

ಬೆಂಗಳೂರು, ಅಕ್ಟೋಬರ್. 21 : ಅಂತರ ರಾಜ್ಯ ಮಂಡಳಿಯನ್ನು ಪುನಾರಚನೆ ಮಾಡಲಾಗಿದ್ದು. ಮಂಡಳಿಯಿಂದ ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಹಾಗೂಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡ ಅವರನ್ನು ಕೈಬಿಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಂತರ ರಾಜ್ಯಗಳ ಮಂಡಳಿಯನ್ನು ಪುನಾರಚನೆ ಮಾಡಿದ್ದು. ಸಚಿವ ಡಿ.ವಿ.ಸದಾನಂದ ಗೌಡ ಮತ್ತು ಸ್ಮೃತಿ ಇರಾನಿ ಅವರನ್ನು ಮಂಡಳಿಯಿಂದ ಕೈ ಬಿಟ್ಟು. ಪ್ರಕಾಶ್ ಜಾವಡೇಕರ್ ಮತ್ತು ರವಿಶಂಕರ ಪ್ರಸಾದ್ ಅವರಿಗೆ ಸ್ಥಾನ ನೀಡಲಾಗಿದೆ. [ನಕಲಿ ವಿದ್ಯಾರ್ಹತೆ ಪ್ರಕರಣ: ಸಚಿವೆ ಸ್ಮೃತಿ ಇರಾನಿ ಖುಲಾಸೆ]

Inter State Council

ಏನಿದು ಮಂಡಳಿ?: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸೇತುವೆಯಂತೆ ಅಂತರ ರಾಜ್ಯಗಳ ಮಂಡಳಿ ಕೆಲಸ ಮಾಡುತ್ತದೆ. ಪ್ರಧಾನಿ ನೇತೃತ್ವದ ಸಮಿತಿಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಸದಸ್ಯರಾಗಿರುತ್ತಾರೆ.

ಸಂಪುಟ ಪುನಾರಚನೆ ವೇಳೆ ಈ ಇಬ್ಬರೂ ಸಚಿವರು ತಮ್ಮ ಮಹತ್ವದ ಖಾತೆಗಳನ್ನು ಕಳೆದುಕೊಂಡಿದ್ದರು. ಕೆಲವು ದಿನಗಳ ಹಿಂದೆ ನಡೆದ ಸಚಿವ ಸಂಪುಟ ಪುನಾರಚನೆ ವೇಳೆ ಸಾಂಖಿಕ್ಯ ಖಾತೆ ನೀಡಲಾಗಿತ್ತು.

ಸ್ಮೃತಿ ಇರಾನಿ ಅವರದ್ದು ಇದೇ ಕಥೆ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಮಾನವ ಸಂಪನ್ಮೂಲ ಅಭಿವೃದ್ಧಿಯಂತಹ ಪ್ರಮುಖ ಖಾತೆ ಅವರಿಗೆ ಸಿಕ್ಕಿತ್ತು. ಆದರೆ, ಸಂಪುಟ ಪುನಾರಚನೆ ವೇಳೆ ಅವರಿಗೆ ಜವಳಿ ಖಾತೆಯ ಉಸ್ತುವಾರಿ ನೀಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Union Ministers Smriti Irani and D V Sadananda Gowda have been dropped from Inter-State Council, official sources said on Wednesday.
Please Wait while comments are loading...