Rahul Gandhi Flying Kiss: 'ರಾಗಾ' ವಿರುದ್ಧ ಬಿಜೆಪಿ ಮಹಿಳಾ ಸಂಸದರು ಕೆಂಡಾಮಂಡಲ
ಬೆಂಗಳೂರು, ಆಗಸ್ಟ್ 09: ಸಂಸತ್ ಅಧಿವೇಶನದ ಸಂದರ್ಭದಲ್ಲಿ ಕಾಂಗ್ರೆಸ್ ಅಗ್ರ ನಾಯಕ ರಾಹುಲ್ ಗಾಂಧಿ ಅವರು ಅಸಭ್ಯ ವರ್ತನೆ ವಿರುದ್ಧ ಬಿಜೆಪಿ ಮಹಿಳಾ ಸಂಸದರು ಕೆಂಡಾಮಂಡಲವಾಗಿದ್ದಾರೆ. ಈ ಸಂಬಂಧ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ನೀಡಿದ್ದಾರೆ.
ಕೇಂದ್ರ ಸಚಿವೆ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೆ ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಬಿಜೆಪಿಯ 21 ಮಹಿಳಾ ಸದಸ್ಯರು ರಾಹುಲ್ ಗಾಂಧಿ ಅವರ ಅಸಭ್ಯ ವರ್ತನೆ (Flying Kiss) ವಿರುದ್ಧ ಸಹಿ ಇರುವ ಪತ್ರವನ್ನು ಸ್ಪೀಕರ್ ಕಚೆರಿಯಲ್ಲಿ ಸಲ್ಲಿಸಿದ್ದಾರೆ. ಈ ಮೂಲಕ ಅಧಿಕೃತ ನೀಡಿದ್ದು, ಸದನದಲ್ಲಿನ ಅಸಭ್ಯ ವರ್ತನೆಗೆ ಸೂಕ್ತ ಕ್ರಮ ಜರುಗಿಸುವಂತೆ ಅವರು ಒತ್ತಾಯಿಸಿದ್ದಾರೆ.

ಸದನದಲ್ಲಿ ಭಾಷಣೆ ಆರಂಭಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿಯವರು ಭಾಷಣ ಮುಗಿದ ಬಳಿಕ ಬಿಜೆಪಿ ಸಂಸದರಿಗೆ ಫ್ಲೈಯಿಂಗ್ ಕಿಸ್ (Flying Kiss) ಮಾಡಿದರು. ಅವರ ಈ ನಡೆ ಬಿಜೆಪಿ ಮಹಿಳಾ ನಾಯಕಿಯರ ಆಕ್ರೋಶಕ್ಕೆ ಕಾರಣವಾಗಿದೆ.
This is BIG
— Flt Lt Anoop Verma (Retd.) 🇮🇳 (@FltLtAnoopVerma) August 9, 2023
Rahul Gandhi gestured flying kiss towards Smriti Irani Ji while leaving parliament
An official complaint has been lodged for his unparliamentary behaviour
A habitual offender Rahul Gandhi was earlier found winking inside the parliament
And he was speaking about… pic.twitter.com/LVzYcXLqi3
ಮಹಿಳೆಯರು-ಸದನದ ಘನತೆ 'ರಾಗಾ' ಧಕ್ಕೆ
ಸದನದಲ್ಲಿ ಪುರಷ ಸದಸ್ಯರು ಮಾತ್ರವಲ್ಲದೇ ಮಹಿಳಾ ಸದಸ್ಯರ ಇದ್ದಾರೆ. ರಾಹುಲ್ ಗಾಂಧಿಯವರ ವರ್ತನೆಯು ಮಹಿಳಾ ಸದಸ್ಯೆಯರ ಘನತೆಗೆ ಧಕ್ಕೆ ತಂದಿರುವುದಲ್ಲದೇ, ಈ ಸದನದ ಘನತೆಗೆ ಕುಂದು ತಂದಿದೆ. ಇಂತಹ ವರ್ತನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಅವರು ಮನವಿ ಮಾಡಿದ್ದಾರೆ.

ರಾಹುಲ್ ಗಾಂಧಿಯವರು ಅನರ್ಹತೆ ಆದೇಶ ರದ್ದುಗೊಳಿಸಿ ಮರುಸ್ಥಾಪನೆ ಬಳಿಕ ಅವರು ಸಂಸದರಾಗಿ ಮತ್ತೆ ಲೋಕಸಭೆ ಪ್ರವೇಶಿಸಿದ ನಂತರ ಈ ಘಟನೆ ನಡೆದಿದೆ. ರಾಹುಲ್ ಗಾಂಧಿಯವರ ವರ್ತನೆ ಕಾಂಗ್ರೆಸ್ ನಾಯಕರಿಗೆ ಇರಿಸುಮುರಿಸು ಉಂಟು ಮಾಡಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಲೋಕಸಭೆ ಆವರಣದಿಂದ ಹೊರನಡೆಯುವಾಗ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಭಾಷಣ ಆರಂಭಿಸಿದ್ದರು. ಈ ವೇಳೆ ಅವರು ಫ್ಲೈಯಿಂಗ್ ಕಿಸ್ ನೀಡಿದ್ದಾರೆ. ಇದಕ್ಕೆ ಕೇಂದ್ರ ಸಚಿವೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಇದೇ ರೀತಿ ಸದನದಲ್ಲಿ ರಾಹುಲ್ ಗಾಂಧಿಯವರು ಕಣ ಮಿಟುಕಿಸಿ ಸುದ್ದಿಯಾಗಿದ್ದರು. ಮಹಿಳೆಯರ ಘನತೆ ವಿಚಾರವಾಗಿ ಮಾತಾನಡುವ ಅವರೇ ಹೀಗೆ ಮಾಡಿದ್ದು ಎಷ್ಟು ಸರಿ ಎಂಬ ಬಿಜೆಪಿ ವಾಗ್ದಾಳಿ ನಡೆಸುತ್ತಿದೆ.












Click it and Unblock the Notifications