ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ದುರಂತ

Written By:
Subscribe to Oneindia Kannada

ಬೆಂಗಳೂರು, ಜೂನ್ 15: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊರಟಿದ್ದ ಜೆಟ್ ಏರ್ ವೇಸ್ ವಿಮಾನದ ಕ್ಯಾಬಿನ್ ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೆಲವೇ ಕ್ಷಣದಲ್ಲಿ ವಿಮಾನ ಮತ್ತೆ ಲ್ಯಾಂಡ್ ಆಗಿದೆ.

ಪ್ರಯಾಣಿಕರಿಗೆ ಯಾವ ಅಪಾಯ ಆಗಿಲ್ಲ. ಬೆಂಗಳೂರಿನಿಂದ ಮಂಗಳೂರಿಗೆ ಬುಧವಾರ ಬೆಳಗ್ಗೆ ಹೊರಟ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಮುನ್ನೆಚ್ಚರಿಕೆ ವಹಿಸಿದ ಪೈಲಟ್ ಗಳು ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡಿದ್ದಾರೆ. 9W 2839 BLR-IXE ವಿಮಾನದಲ್ಲಿ ಹೊಗೆ ಕಾಣಿಸಿಕೊಂಡಿದೆ.[ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿದವ ಹೇಳಿದ ಕತೆ]

bengaluru

ಬೆಂಗಳೂರಿನಿಂದ ಬೆಳಗ್ಗೆ ಹೊರಟ ವಿಮಾನದಲ್ಲಿ 65 ಜನ ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದರು. ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಕೆಲವೇ ಕ್ಷಣದಲ್ಲಿ ಹಿಂದಕ್ಕೆ ತಿರುಗಿ ಬಂದು ತುರ್ತು ಭೂಸ್ಪರ್ಶ ಮಾಡಿತು. ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಹೊರತರಲಾಗಿದೆ ಎಂದು ಜೆಟ್ ಏರ್ ವೇಸ್ ತಿಳಿಸಿದೆ.[ಮಂಗಳೂರು-ಶಾರ್ಜಾ ನಡುವೆ ಜೆಟ್‌ ಏರ್‌ವೇಸ್‌ ವಿಮಾನ ಸೇವೆ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru: Jet Airways flight returns to Bengaluru minutes after take-off after smoke is detected in cabin, all passengers safe.Precautionary evacuation of passengers and crew members was carried out immediately after landing. All 65 passengers and 4 crew are safe.
Please Wait while comments are loading...