Get Updates
Get notified of breaking news, exclusive insights, and must-see stories!

Bengaluru Sleeper Vande Bharat: ಬೆಂಗಳೂರು ಸೇರಿ ಈ 3 ಮಾರ್ಗಗಳಲ್ಲಿ ಸ್ಲೀಪರ್ ವಂದೇ ಭಾರತ್ ರೈಲು ಸೇವೆ

ನವದೆಹಲಿ: ಭಾರತೀಯ ರೈಲ್ವೆ ಜಾಲದಲ್ಲಿ ವಂದೇ ಭಾರತ್ ರೈಲುಗಳು ಕ್ರಾಂತಿಕಾರಕ ಬದಲಾವಣೆ ತಂದಿವೆ. ಇದೀಗ ಇದೇ ಜಾಲದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಸಹ ಕಾರ್ಯಾಚರಣೆ ಆರಂಭಿಸಿವೆ. ರಾಜ್ಯದಿಂದ ಬೇರೆ ರಾಜ್ಯಕ್ಕೆ ತೆರಳುವ ಸುದೀರ್ಘ ಪ್ರಯಾಣದ ಸಮಯವನ್ನು ಈ ರೈಲುಗಳು ಕಡಿಮೆಗೊಳಿಸಿವೆ. ವೇಗದ ಹಾಗೂ ಸುರಕ್ಷಿತ ರೈಲು ಇವಾಗಿದ್ದು, ಅತ್ಯಾಧುನಿಕ ಸೌಲಭ್ಯ ಹೊಂದಿವೆ. ಬೆಂಗಳೂರಿಗೂ ಈ ಸ್ಲೀಪರ್ ವಂದೇ ಭಾರತ್ ರೈಲು ಸೇವೆ ನೀಡಲು ಯೋಜಿಸಲಾಗಿದೆ. ತಿರುವನಂತಪುರಂನಿಂದ ಮೂರು ಮಾರ್ಗಗಳಾದ ಚೆನ್ನೈ, ಬೆಂಗಳೂರು ಹಾಗೂ ಮಂಗಳೂರಿಗೆ ಕಾರ್ಯಾಚರಣೆ ನಡೆಸಲಿವೆ. ಈ ರೈಲುಗಳ ವೇಳಾಪಟ್ಟಿ, ಟಿಕೆಟ್ ದರ ವಿವರ ಇಲ್ಲಿದೆ.

ರೈಲ್ವೆ ಇಲಾಖೆ ಪ್ರಕಾರ, ತಿರುವನಂತಪುರಂ-ಚೆನ್ನೈ ಹಾಗೂ ಬೆಂಗಳೂರು-ತಿರುವನಂತಪುರಂ ರೈಲು ಮಾರ್ಗಕ್ಕೆ ಹೆಚ್ಚಿನ ಬೇಡಿಕೆ ಇದೆ ಎನ್ನಲಾಗಿದೆ. ಮತ್ತೊಂದು ರೈಲು ಮಂಗಳೂರು-ತಿರುವನಂತಪುರಂ ಮಾರ್ಗದಲ್ಲಿ ಕಾರ್ಯಾಚರಣೆಗೆ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಈ ಮಾರ್ಗಗಳಿಂದ ಇಲಾಖೆಗೆ ಹೆಚ್ಚಿನ ಆದಾಯ ನಿರೀಕ್ಷೆ ಇದೆ.

Sleeper Vande Bharat Express 3 Trains Deploy Bengaluru-Thiruvananthapuram-Chennai-Mangaluru soon

ಕೇರಳ ಹಾಗೂ ತಮಿಳುನಾಡಿನಲ್ಲಿ ಈ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಪ್ರಯಾಣಿಕರಿಗೆ ಅನುಕೂಲ ಒದಗಿಸುವುದು ಮತ್ತು ಚುನಾವಣಾ ರಾಜಕೀಯ ಕಾರಣದಿಂದಲೂ ಮೂರು ಮಾರ್ಗಗಳಲ್ಲಿ ಕೇಂದ್ರ ರೈಲ್ವೆ ಸಚಿವಾಲಯವು ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲು ನೀಡಲು ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅದೇನೆ ಇದ್ದರೂ ಈ ಮಾರ್ಗಗಳ ಪ್ರಯಾಣಿಕರಿಗೆ ಹೆಚ್ಚುವರಿ ರೈಲು ಸೇವೆ ಶೀಘ್ರವೇ ಸಿಗಲಿದೆ. ಇನ್ನೂ ಈ ಮೂರು ಮಾರ್ಗದ ರೈಲುಗಳ ಟಿಕೆಟ್ ದರದ ಬಗ್ಗೆ ಅಧಿಕೃತ ಮಾಹಿತಿ ದೊರೆಯಬೇಕಿದೆ.

ಮೂರು ಸ್ಲೀಪರ್ ವಂದೇ ಭಾರತ್ (ವಿಬಿ) ರೈಲುಗಳ ವೇಳಾಪಟ್ಟಿ

1. ಬೆಂಗಳೂರು-ತಿರುವನಂತಪುರಂ ಸ್ಲೀಪರ್ ವಿಬಿ ರೈಲು

ತಿರುವನಂತಪುರಂನಿಂದ ಬೆಂಗಳೂರು ಮಧ್ಯದ ಒಟ್ಟು 844 ಕಿಲೋ ಮೀಟರ್ ಮಾರ್ಗದಲ್ಲಿ ಒಂದು ಸ್ಲೀಪರ್ ವಂದೇ ಭಾರತ್ ರೈಲು ಕಾರ್ಯಾಚರಣೆ ನಡೆಸಲಿದೆ. ಒಟ್ಟು 15 ಗಂಟೆ 30 ನಿಮಿಷದಲ್ಲಿ ಈ ದೂರವನ್ನು ಕ್ರಮಿಸಲಿದೆ. ಇದರಿಂದ ಹಾಲಿ ಸಾಮಾನ್ಯ ರೈಲಿನ ಪ್ರಯಾಣಕ್ಕಿಂತ ಮೂರು ಗಂಟೆ ಸಮಯ ಉಳಿಯಲಿದೆ. ಪ್ರತಿ ಒಬ್ಬರಿಗೆ ಟಿಕೆಟ್ ದರ ಕನಿಷ್ಠ 1000 ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ.

2. ಮಂಗಳೂರು-ತಿರುವನಂತಪುರಂ ಸ್ಲೀಪರ್ ವಿಬಿ ರೈಲು

ಮಂಗಳೂರು-ತಿರುವನಂತಪುರಂ ರೈಲು ಮಾರ್ಗವು ಒಟ್ಟು 631 ಕಿಲೋ ಮೀಟರ್ ಇದೆ. ಈ ಮಾರ್ಗದಲ್ಲಿ ಸ್ಲೀಪರ್ ವಂದೇ ಭಾರತ್ ರೈಲು ಸೇವೆಯ ಅಗತ್ಯವಿದೆ. ಈ ಕಾರಣದಿಂದಲೇ ಇಲ್ಲಿಗೊಂದು ರೈಲು ನಿಯೋಜನೆಗೊಳ್ಳಲಿದೆ. ಒಟ್ಟು 14 ಗಂಟೆಗಳಲ್ಲಿ ಈ ದೂರವನ್ನು ರೈಲು ಕ್ರಮಿಸಲಿದೆ.

3. ತಿರುವನಂತಪುರ-ಚೆನ್ನೈ ಸ್ಲೀಪರ್ ವಿಬಿ ರೈಲು

ತಿರುವನಂತಪುರ-ಚೆನ್ನೈನ 920 ಕಿಲೋ ಮೀಟರ್ ಮಾರ್ಗದಲ್ಲಿ ಸಹ ವಂದೇ ಭಾರತ್ ಸ್ಲೀಪರ್ ರೈಲು ಕಾರ್ಯಾಚರಣೆ ಆರಂಭಿಸಲಿದೆ. ಒಟ್ಟು 16.30 ಗಂಟೆಗಳಲ್ಲಿ ಈ ದೂರವನ್ನು ಕ್ರಮಿಸಲಿದೆ. ಈ ರೈಲಿನ ನಿಯೋಜನೆಯಿಂದ ಚೆನ್ನೈ-ತಿರುವನಂತಪುರಂ ರೈಲು ಪ್ರಯಾಣದಲ್ಲಿ ಮೂರು ಗಂಟೆಗಳು ಉಳಿತಾಯವಾಗಲಿದೆ. ಟಿಕೆಟ್ ದರ ಒಬ್ಬರಿಗೆ 1400 ರೂಪಾಯಿಗೂ ಅಧಿಕ ನಿಗದಿ ಆಗುವ ನಿರೀಕ್ಷೆ ಇದೆ. ಈ ವೇಳಾಪಟ್ಟಿ ಬಗ್ಗೆ ರೈಲ್ವೆ ಸಚಿವಾಲಯವು ಅಂತಿಕ ವೇಳಾಪಟ್ಟಿ ಪ್ರಕಟಿಸಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+