ಗುಂಡೇಟು ತಗುಲಿದ್ದ ಎನ್ಐಎ ಅಧಿಕಾರಿ ಪತ್ನಿ ವಿಧಿವಶ

Subscribe to Oneindia Kannada

ನವದೆಹಲಿ, ಏಪ್ರಿಲ್. 13: ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿ ತಂಜಿಲ್ ಅಹಮದ್ ಅವರ ಪತ್ನಿ ಚಿಕತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಅಹಮದ್ ತಮ್ಮ ಹೆಂಡತಿ ಮತ್ತು ಮಕ್ಕಳೊಂದಿಗೆ ಮನೆಗೆ ವಾಪಸಾಗುತ್ತಿದ್ದ ವೇಳೆ ಏಪ್ರಿಲ್ 3 ರಂದು ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ದುಷ್ಕರ್ಮಿಗಳು ದಾಳಿ ನಡೆಸಿದ್ದರು.

ತಂಜಿಲ್ ಅಹಮದ್ ಅವರ ಪತ್ನಿ ಫರ್ಜಾನಾ ಖಟೂನ್, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಅಹಮದ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದ ವೇಳೆ ಫರ್ಜಾನ ಅವರ ದೇಹಕ್ಕೂ ನಾಲ್ಕು ಗುಂಡುಗಳು ಹೊಕ್ಕಿದ್ದವು. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.[ಗುಂಡಿಟ್ಟು ಪಠಾಣ್‌ಕೋಟ್ ತನಿಖಾಧಿಕಾರಿ ಹತ್ಯೆ]

nia

ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫರ್ಜಾನ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದರು ಎಂದು ಎನ್ ಐ ಎ ಅಧಿಕಾರಿಗಳು ತಿಳಿಸಿದ್ದಾರೆ. ಪಠಾಣ್ ಕೋಟ್ ದಾಳಿಯ ತನಿಖೆಯಲ್ಲಿ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದ ಅಧಿಕಾರಿ ಗುಂಡೇಟಿಗೆ ಬಲಿಯಾಗಿದ್ದು ಹಲವು ಅನುಮಾನಗಳಿಗೆ ಕಾರಣ ಮಾಡಿಕೊಟ್ಟಿತ್ತು.[ಎನ್‌ಐಎ ಅಧಿಕಾರಿ ತನ್ಜಿಲ್ ಹತ್ಯೆ, ಇಬ್ಬರ ಬಂಧನ]

ತಂಜಿಲ್ ಅಹ್ಮದ್ ಅವರು ಬಿಎಸ್‌ಎಫ್‌ನಲ್ಲಿ ಅಸಿಸ್ಟೆಂಟ್ ಕಮಾಂಡರ್ ಆಗಿದ್ದರು. 2009ರ ಫೆಬ್ರವರಿಯಲ್ಲಿ ಅವರನ್ನು ಎನ್‌ಐಎಗೆ ವರ್ಗಾವಣೆ ಮಾಡಲಾಗಿತ್ತು. ಮೊದಲು ಎನ್‌ಐಎ ಗುಪ್ತಚರ ವಿಭಾಗದಲ್ಲಿದ್ದ ಅವರು ನಂತರ ತನಿಖಾಧಿಕಾರಿಯಾಗಿದ್ದರು. ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸೇರಿದಂತೆ ಹಲವು ಮಹತ್ವದ ಪ್ರಕರಣಗಳ ತನಿಖೆಯನ್ನು ಅವರು ನಡೆಸುತ್ತಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The wife of NIA officer Tanzil Ahmed who was shot dead two weeks back succumbed to injuries at hospital today. Farzana aged 40 died at the AIIMS traums centre at 11 am today. After the incident Farzana was moved to the Fortis hospital. However, with her condition worsening she was shifted to the AIIMS traums centre at New Delhi. She passed away at 11 am today.
Please Wait while comments are loading...