Budget 2024: ಆಂಧ್ರ ರಾಜಧಾನಿ ಅಭಿವೃದ್ಧಿಗೆ 15,000 ಕೋಟಿ ರೂ. ಬಂಪರ್‌: "ಚಂದ್ರ" ಪಳ ಪಳ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್‌ನಲ್ಲಿ ಬೀಹಾರ ಹಾಗೂ ಆಂಧ್ರಪ್ರದೇಶಗಳಿಗೆ ಬಂಪರ್‌ ಕೊಡುಗೆಗಳನ್ನು ನೀಡಿದೆ. ಈ ಮೂಲಕ ಮಿತ್ರ ಪಕ್ಷಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಮೋದಿ ಸರ್ಕಾರ ಯಶಸ್ವಿಯಾಗಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-24ನೇ ಹಣಕಾಸು ವರ್ಷಕ್ಕೆ ಬಜೆಟ್ನಲ್ಲಿ ಟಿಡಿಪಿ ಚಂದ್ರಬಾಬು ನಾಯ್ಡು ಮುಖದಲ್ಲಿ ಮಂದಹಾಸ ಮೂಡಿದೆ. ಈ ಮೂಲಕ ಬಹುದಿನಗಳ ಆಂಧ್ರ ಪ್ರದೇಶದ ರಾಜಧಾನಿ ಅಭಿವೃದ್ಧಿಗೆ ಇನ್ನು ಚುರುಕು ಮುಟ್ಟುವ ಸಾಧ್ಯತೆ ಇದೆ.

Sitharaman Announces Rs 15 000 Crore for Andhra Pradesh Capital Development in Budget 2024-25

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?

ಆಂಧ್ರಪ್ರದೇಶದಲ್ಲಿ ನೂತನ ರಾಜಧಾನಿ ನಿರ್ಮಾಣದ ಬಗ್ಗೆ ಕೇಂದ್ರ ಗಮನ ಹರಿಸಲಿದೆ. ಆಂಧ್ರಪ್ರದೇಶ ಮರುಸಂಘಟನೆ ಕಾಯಿದೆಯಲ್ಲಿ ನೀಡಿರುವ ಬದ್ಧತೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಪ್ರಯತ್ನ ನಡೆಸಿದೆ. ಪ್ರಸ್ತುತ 15,000 ಕೋಟಿ ರೂ. ಆರ್ಥಿಕ ವರ್ಷ "ಹೆಚ್ಚುವರಿ ಮೊತ್ತವನ್ನು ಭವಿಷ್ಯದಲ್ಲಿ ನೀಡಲಾಗುವುದು." ಸರ್ಕಾರದ ಈ ನಿರ್ಧಾರದಿಂದ ನಾಯ್ಡು ಅತ್ಯಂತ ಹರ್ಷಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಆಂಧ್ರಪ್ರದೇಶವು ತನ್ನ ರಾಜಧಾನಿಯನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದಿಂದ 15,000 ಕೋಟಿ ರೂಪಾಯಿಗಳ ಬೆಂಬಲವನ್ನು ಪಡೆಯಲಿದೆ. ಟಿಡಿಪಿ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಇದು ಸಂತಸದ ಸುದ್ದಿ. ಟಿಡಿಪಿ ಎನ್‌ಡಿಎಯಲ್ಲಿ ಮಿತ್ರ ಪಕ್ಷವಾಗಿದ್ದು, ಕಿಂಗ್ ಮೇಕರ್ ಪಾತ್ರವನ್ನೂ ವಹಿಸುತ್ತಿದೆ.

ಟಿಡಿಪಿಯಿಂದ ಅಮರಾವತಿಯನ್ನು ಆಂಧ್ರಪ್ರದೇಶದ ರಾಜಧಾನಿಯಾಗಿ ನಿರ್ಮಿಸಲು ಮತ್ತು ಅಭಿವೃದ್ಧಿಪಡಿಸಲು ಬಯಸುವ ಬೇಡಿಕೆಯನ್ನು ಬಹುದಿನಗಳಿಂದ ಇಡಲಾಗುತ್ತಿತ್ತು. ಇದಕ್ಕಾಗಿ ಆಂಧ್ರಕ್ಕೆ 15 ಸಾವಿರ ಕೋಟಿ ನೀಡಬೇಕು. ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರಕಾರಕ್ಕೆ ಸರಕಾರ ಒಪ್ಪಿಗೆ ಸೂಚಿಸಿದ್ದು, ಇದೀಗ ಬಜೆಟ್ ನಲ್ಲಿ ನೂತನ ರಾಜಧಾನಿ ನಿರ್ಮಾಣಕ್ಕೆ ಹಣ ಘೋಷಣೆ ಮಾಡಿದೆ. ಅಮರಾವತಿಯು ವಿಜಯವಾಡದ ಸಮೀಪದಲ್ಲಿದೆ. ಅಮರಾವತಿಯನ್ನು ಮೊದಲಿನಿಂದಲೂ ಸಿದ್ಧಪಡಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+