ನಾಪತ್ತೆಯಾಗಿದ್ದ ಸಹೋದರಿಯರನ್ನು ಸಾಮಾಜಿಕ ಮಾಧ್ಯಮದ ಮೂಲಕ ಪತ್ತೆ ಹಚ್ಚಿದ ಪೊಲೀಸರು

ಆಗ್ರಾ, ಡಿಸೆಂಬರ್‌ 20: ಎರಡು ದಿನಗಳಿಂದ ನಾಪತ್ತೆಯಾಗಿದ್ದ ಇಬ್ಬರು ಸಹೋದರಿಯರನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಹಿರಿಯ ಸಹೋದರಿಯ ಸಾಮಾಜಿಕ ಮಾಧ್ಯಮ ಖಾತೆಗೆ ಸಂದೇಶಗಳನ್ನು ರವಾನಿಸುವ ಮೂಲಕ ಪೊಲೀಸರು ಸಂಭಾಷಣೆಯನ್ನು ಆರಂಭಿಸಿದ್ದಾರೆ. ಆ ಮೂಲಕ ಇಬ್ಬರು ಸಹೋದರಿಯರನ್ನು ಪತ್ತೆ ಹಚ್ಚುವಲ್ಲಿ ಉತ್ತರ ಪ್ರದೇಶ ಪೊಲೀಸರು ಯಶಸ್ವಿ ಆಗಿದ್ದಾರೆ.

12 ನೇ ತರಗತಿ ಮತ್ತು 10 ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯರು ಡಿಸೆಂಬರ್ 16 ರಂದು ಶಾಲೆಗೆ ತೆರಳಿದ್ದರು. ಆ ನಂತರ ಶಾಲೆಯಿಂದ ಮನೆಗೆ ಅವರು ಹಿಂತಿರುಗಿರಲಿಲ್ಲ.

Sisters missing for two days traced through social media surveillance

ಇದು ಪೋಷಕರಲ್ಲಿ ಭಾರೀ ಆತಂಕವನ್ನು ಉಂಟು ಮಾಡಿತ್ತು. ಅವರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಪೊಲೀಸರು ಗಂಭೀರವಾಗಿ ತೊಡಗಿಕೊಂಡಿದ್ದರು. ಈಗ ಅವರನ್ನು ಪತ್ತೆ ಮಾಡಿ, ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.

ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದರಿಂದ ಓಡಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಅಕ್ಕನ ಸಾಮಾಜಿಕ ಮಾಧ್ಯಮ ಖಾತೆಯನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಆಕೆಯ ಸಂಬಂಧಿಕರೊಬ್ಬರ ಖಾತೆಯಿಂದ ಅವಳೊಂದಿಗೆ ಚಾಟ್ ಮಾಡಲು ಆರಂಭಿಸಲಾಯಿತು ಎಂದು ಉಪ ಪೊಲೀಸ್ ಆಯುಕ್ತ (ಪಶ್ಚಿಮ) ಸತ್ಯಜೀತ್ ಗುಪ್ತಾ ಹೇಳಿದ್ದಾರೆ.

'ನಮಗೆ ಆಕೆಯಿಂದ ಪ್ರತಿಕ್ರಿಯೆ ಬಂದಿತು. ಆಕೆಗೆ ನಮ್ಮ ಸಂಪರ್ಕ ಸಂಖ್ಯೆಯನ್ನು ಕಳುಹಿಸಿದೆವು. ಪೊಲೀಸರು ಉತ್ತರಾಖಂಡದ ಋಷಿಕೇಶದಲ್ಲಿ ಹುಡುಗಿಯರ ಸ್ಥಳವನ್ನು ಪತ್ತೆಹಚ್ಚಿದರು. ಆನ್‌ಲೈನ್ ಸಂಭಾಷಣೆಯ ಸಮಯದಲ್ಲಿ, ಅವರಿಗೆ ಹಣಕಾಸಿನ ಸಹಾಯವನ್ನು ಮಾಡಲಾಯಿತು. ಹಣದ ಅಗತ್ಯವಿದ್ದರೆ, ಅವರನ್ನು ಮೀರತ್‌ಗೆ ಬರಲು ಹೇಳಲಾಯಿತು. ಅದಕ್ಕೆ ಹುಡುಗಿಯರು ಒಪ್ಪಿಸಿದರು' ಎಂದು ಪೊಲೀಸರು ತಿಳಿಸಿದ್ದಾರೆ.

Sisters missing for two days traced through social media surveillance

ಅವರು ಪ್ರಸ್ತಾಪವನ್ನು ಒಪ್ಪಿಕೊಂಡರು. ಸಹೋದರಿಯರು ಋಷಿಕೇಶದಿಂದ ಮೀರತ್‌ಗೆ ಬರುತ್ತಿದ್ದಾಗ ಪತ್ತೆ ಹಚ್ಚಲಾಯಿತು ಎಂದು ಗುಪ್ತಾ ತಿಳಿಸಿದ್ದಾರೆ.

ಭಾನುವಾರ ಸಹೋದರಿಯರು ತಮ್ಮ ಕುಟುಂಬ ಸದಸ್ಯರೊಂದಿಗೆ ಒಂದಾದ ನಂತರ, ಅವರು ಮನೆಯಿಂದ ಏಕೆ ಹೋಗಿದ್ದೀರಿ ಎಂದು ಕೇಳಲಾಯಿತು. ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ್ದಕ್ಕಾಗಿ ನಾವು ಮನೆ ಬಿಟ್ಟು ಓಡಿ ಹೋದೆವು ಎಂದು ತಿಳಿಸಿದರು ಎಂಬುದಾಗಿ ಪೊಲೀಸರು ಹೇಳಿದ್ದಾರೆ.

ತಾನು ಐಪಿಎಸ್ ಅಧಿಕಾರಿಯಾಗಲು ಬಯಸುತ್ತೇನೆ ಎಂದು ಹಿರಿಯ ಸಹೋದರಿ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ನಮೂದಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸೆಂಬರ್ 16 ರಂದು ಅವರ ಕುಟುಂಬ ಸದಸ್ಯರು ಇಲ್ಲಿನ ಮಾಲ್ಪುರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದರು. ಆ ನಂತರ, ಪೊಲೀಸರು ಅವರನ್ನು ಪತ್ತೆಹಚ್ಚಲು ಕಣ್ಗಾವಲು ತಂಡ ಮತ್ತು ವಿಶೇಷ ಕಾರ್ಯಾಚರಣೆ ತಂಡವನ್ನು ಸಕ್ರಿಯಗೊಳಿಸಿದ್ದರು ಎಂದು ಗುಪ್ತಾ ಹೇಳಿದರು.

ಪೊಲೀಸರು ಅವರ ಶಾಲೆಯ ಮಾರ್ಗದಲ್ಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸಹ ಹುಡುಕಿದ್ದಾರೆ. ಹಿರಿಯ ಸಹೋದರಿ ಬಳಿ ಖಾತೆ ಇರುವುದು ಪತ್ತೆಯಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

ಡಿ.16ರಂದು ಬೆಳಗ್ಗೆ 7.30ಕ್ಕೆ ಶಾಲೆಗೆ ತೆರಳಿದ್ದ ಸಹೋದರಿಯರು ಮನೆಗೆ ವಾಪಸ್ಸಾಗಿರಲಿಲ್ಲ ಎಂದು ದೂರಿನಲ್ಲಿ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+