ಜಗತ್ತಿನ ಪ್ರಭಾವಿ ಪಾಸ್ ಪೋರ್ಟ್ ಸಿಂಗಾಪೂರ್, ಭಾರತಕ್ಕೆ 75ನೇ ಸ್ಥಾನ

Posted By:
Subscribe to Oneindia Kannada

ಜಗತ್ತಿನ ಅತ್ಯಂತ ಪ್ರಭಾವಿ ಪಾಸ್ ಪೋರ್ಟ್ ಸಿಂಗಾಪೂರದ್ದು ಎಂದು ಜಾಗತಿಕ ಮಟ್ಟದ ಸಂಸ್ಥೆಯೊಂದು ಗುರುತಿಸಿದೆ. ಇದೇ ಮೊದಲ ಬಾರಿಗೆ ಏಷ್ಯಾ ಖಂಡದ ದೇಶವೊಂದರ ಪಾಸ್ ಪೋರ್ಟ್ ಪ್ರಭಾವಿ ಎಂದು ಆಯ್ಕೆಯಾಗಿದ್ದು, ಭಾರತದ ಪಾಸ್ ಪೋರ್ಟ್ ಗೆ 75ನೇ ಸ್ಥಾನ ದೊರೆತಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮೂರು ಸ್ಥಾನ ಮೇಲೇರಿದೆ.

ಜರ್ಮನಿಗೆ ಎರಡನೇ ಸ್ಥಾನ, ಸ್ವೀಡನ್ ಹಾಗೂ ದಕ್ಷಿಣ ಕೊರಿಯಾ ದೇಶಗಳು ಮೂರನೇ ಸ್ಥಾನದಲ್ಲಿವೆ. ಸಿಂಗಾಪೂರ ನಾಗರಿಕರಿಗೆ ಪರಗ್ವೆ ದೇಶಕ್ಕೆ ತೆರಳಲು ವೀಸಾ ಬೇಡ ಎಂಬ ನಿಯಮ ಮಾಡಿದ್ದು, ಇದರಿಂದ ಸಿಂಗಾಪೂರ್ ಪಾಸ್ ಪೋರ್ಟ್ 159 ಅಂಕ ಪಡೆಯುವ ಮೂಲಕ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನ ತಲುಪಿದೆ.

ಆನ್ಲೈನ್ ನಲ್ಲಿ ಪಾಸ್ ಪೋರ್ಟ್ ಗಾಗಿ ಅರ್ಜಿ ಹಾಕುವುದು ಹೇಗೆ?

ಜಗತ್ತಿನ ಮೊದಲ ಹತ್ತು ಪ್ರಭಾವಿ ಪಾಸ್ ಪೋರ್ಟ್ ಗಳ ಪಟ್ಟಿಯಲ್ಲಿ ಯುರೋಪ್ ನ ದೇಶಗಳು ಪಾರಮ್ಯ ಸಾಧಿಸಿವೆ. ಕಳೆದ ಎರಡು ವರ್ಷಗಳಿಂದ ಜರ್ಮನಿ ಮುಂಚೂಣಿಯಲ್ಲಿದೆ. ಈ ವರ್ಷದ ಆರಂಭದವರೆಗೆ ಮೊದಲ ಸ್ಥಾನವನ್ನು ಸಿಂಗಾಪೂರದ ಜತೆಗೆ ಹಂಚಿಕೊಂಡಿತ್ತು.

passport

ಇದೇ ಮೊದಲ ಬಾರಿಗೆ ಏಷ್ಯಾ ಖಂಡದ ದೇಶವೊಂದು ಜಗತ್ತಿನ ಅತ್ಯಂತ ಪ್ರಭಾವಿ ಪಾಸ್ ಪೋರ್ಟ್ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ. ಸಿಂಗಾಪೂರದ ರಾಜತಾಂತ್ರಿಕ ಸಂಬಂಧ ಹಾಗೂ ಪರಿಣಾಮಕಾರಿ ವಿದೇಶಾಂಗ ನೀತಿಯಿಂದಾಗಿ ಇದು ಸಾಧ್ಯವಾಗಿದೆ ಎಂದು ಆರ್ಟನ್ ಕ್ಯಾಪಿಟಲ್ ಸಿಂಗಾಪೂರದ ವ್ಯವಸ್ಥಾಪಕ ನಿರ್ದೇಶಕರಾದ ಫಿಲಿಪ್ಪೀ ಮೇ ಹೇಳಿದ್ದಾರೆ.

ಪಾಸ್ ಪೋರ್ಟ್ ನವೀಕರಣ ಮಾಡಿಕೊಳ್ಳುವುದು ಹೇಗೆ?

ಭಾರತ ಕಳೆದ ವರ್ಷ ಎಪ್ಪತ್ತೆಂಟನೇ ಸ್ಥಾನದಲ್ಲಿತ್ತು. ಈ ಬಾರಿ ಮೂರು ಸ್ಥಾನ ಏರಿಕೆ ಕಂಡಿದೆ. ವೀಸಾ ಫ್ರೀ ಅಂಕ 51 ಇದೆ. ಇನ್ನು ಈ ಪಟ್ಟಿಯಲ್ಲಿ ಆಫ್ಘಾನಿಸ್ತಾನ 22 ಅಂಕಗಳೊಂದಿಗೆ 94ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ ಮತ್ತು ಇರಾಕ್ 26 ಅಂಕಸ ಮೂಲಕ 93ನೇ ಸ್ಥಾನದಲ್ಲಿವೆ. ಸಿರಿಯಾ 29 ಅಂಕದೊಂದಿಗೆ 92ನೇ ಸ್ಥಾನ ಹಾಗೂ ಸೊಮಾಲಿಯಾ 34 ಅಂಕ ಪಡೆದು 91ನೇ ಸ್ಥಾನದಲ್ಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Singapore has the world's "most powerful" passport, according to a global ranking topped for the first time by an Asian country with India figuring at 75th position, three notches better than its previous ranking.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ