ಬ್ಲೋ ಟಾರ್ಚ್ ಬಳಸಿ ಶ್ರದ್ಧಾ ವಾಕರ್ ಮುಖ, ತಲೆ ವಿರೂಪ- ಆಪ್ತಾಬ್ ಪೊಲೀಸರಿಗೆ ಹೇಳಿದ್ದೇನು?
ಶ್ರದ್ಧಾ ಪ್ರಕರಣದ ಆರೋಪಿ ಆಫ್ತಾಬ್ ಪೂನಾವಾಲಾ ವಿಚಾರಣೆಯಲ್ಲಿ ಮತ್ತೊಂದು ಭಯಾನಕ ಸತ್ಯ ಹೊರಬಂದಿದೆ.
ದೇಶವನ್ನೇ ಬೆಚ್ಚಿ ಬೀಳಿಸಿದ ದೆಹಲಿ ಶ್ರದ್ಧಾ ವಾಕರ್ ಪ್ರಕರಣದಲ್ಲಿ ಬಗಿದಷ್ಟು ವಿಚಾರಗಳು ಹೊರಬರುತ್ತಲೇ ಇವೆ. ಪ್ರಕರಣದ ಆರೋಪಿ ಆಫ್ತಾಬ್ ಪೂನಾವಾಲಾ ವಿಚಾರಣೆಯಲ್ಲಿ ಮತ್ತೊಂದು ಭಯಾನಕ ಸತ್ಯ ಹೊರಬಂದಿದೆ. ತನ್ನ ಲಿವ್-ಇನ್ ಪಾಲುದಾರ ಶ್ರದ್ಧಾ ವಾಕರ್ ಅವರನ್ನು ಕೊಲೆ ಮಾಡಿದ ಆರೋಪಿ ಆಫ್ತಾಬ್ ಪೂನಾವಾಲಾ, ಬ್ಲೋ ಟಾರ್ಚ್ ಬಳಸಿ ಆಕೆಯ ಮುಖ ಮತ್ತು ತಲೆಯನ್ನು ವಿರೂಪಗೊಳಿಸಿದ್ದಾನೆ ಎಂದು ಪೊಲೀಸರಿಗೆ ಬಹಿರಂಗಪಡಿಸಿದ್ದಾನೆ.
ಪೊಲೀಸ್ ಚಾರ್ಜ್‌ಶೀಟ್‌ನ ಪ್ರಕಾರ, ಶ್ರದ್ಧಾ ಅವರ ಅಸ್ಥಿಗಳನ್ನು ಸುಟ್ಟು ಮತ್ತು ಅವುಗಳನ್ನು ರುಬ್ಬಿ ಹಾಕಿರುವ ಬಗ್ಗೆ ತಾನು ಈ ಹಿಂದೆ ಬಹಿರಂಗಪಡಿಸಿದ್ದು ಎಲ್ಲರನ್ನು ದಾರಿತಪ್ಪಿಸುವ ಹೇಳಿಕೆ ಎಂದು ಆಫ್ತಾಬ್ ತಪ್ಪೊಪ್ಪಿಕೊಂಡಿದ್ದಾನೆ. ಕೊಲೆಯಾದ ರಾತ್ರಿ ಅಫ್ತಾಬ್ ಹತ್ತಿರದ ಹಾರ್ಡ್‌ವೇರ್ ಅಂಗಡಿಗೆ ಹೋಗಿ ಒಂದು ಗರಗಸ, ಮೂರು ಬ್ಲೇಡ್‌ಗಳು, ಸುತ್ತಿಗೆ ಮತ್ತು ಪ್ಲಾಸ್ಟಿಕ್ ಕ್ಲಿಪ್‌ಗಳನ್ನು ಖರೀದಿಸಿದ್ದಾನೆ. ಆರೋಪಪಟ್ಟಿಯ ಪ್ರಕಾರ ಅಫ್ತಾಬ್ ತನ್ನ ತಪ್ಪೊಪ್ಪಿಗೆಯಲ್ಲಿ ಪೊಲೀಸರಿಗೆ ಈ ಹೇಳಿಕೆಯನ್ನು ನೀಡಿದ್ದಾನೆ:
*ಆಫ್ತಾಬ್ ಶ್ರದ್ಧಾಳ ದೇಹವನ್ನು ಬಾತ್ರೂಮ್ಗೆ ಸ್ಥಳಾಂತರಿಸಿದನು, ಮೊದಲು ಅವಳ ಕೈಗಳನ್ನು ಗರಗಸದಿಂದ ಕತ್ತರಿಸಿ ಪಾಲಿಥಿನ್ ಚೀಲದಲ್ಲಿ ಇರಿಸಿದನು. ಬಳಿಕ ಅವನು ತನ್ನ ಅಡುಗೆಮನೆಯ ಕೆಳಗಿನ ಕ್ಯಾಬಿನೆಟ್ನಲ್ಲಿ ಚೀಲಗಳನ್ನು ಇರಿಸಿದನು.

*ಮರುದಿನ, ಬೆಳಗಿನ ಜಾವ 2 ಗಂಟೆ ಸುಮಾರಿಗೆ, ಅವನು ಛತ್ತರ್‌ಪುರ ಅರಣ್ಯ ಪ್ರದೇಶದಲ್ಲಿ ಶ್ರದ್ಧಾಳ ದೇಹದ ತೊಡೆಯ ಭಾಗವನ್ನು ವಿಲೇವಾರಿ ಮಾಡಿದನು.
*ಮುಂದಿನ 4-5 ದಿನಗಳಲ್ಲಿ, ಅಫ್ತಾಬ್ ದೇಹವನ್ನು 17 ತುಂಡುಗಳಾಗಿ ಕತ್ತರಿಸಿದ.
*ಅವನು ಅವಳ ದೇಹದ ಭಾಗಗಳನ್ನು ಒಂದೊಂದಾಗಿ ವಿಲೇವಾರಿ ಮಾಡಿದ್ದಾನೆ. ಭಾಗಗಳನ್ನು ಕೊಳೆಯದಂತೆ ತಡೆಯಲು ಹೊಸದಾಗಿ ಖರೀದಿಸಿದ ಫ್ರಿಡ್ಜ್‌ನಲ್ಲಿ ಇರಿಸಲಾಗಿತ್ತು.

*ಆತ ಶ್ರದ್ಧಾ ಅವರ ತಲೆ ಮತ್ತು ಮುಖವನ್ನು ವಿರೂಪಗೊಳಿಸಲು ಬ್ಲೋ ಟಾರ್ಚ್ ಅನ್ನು ಬಳಸಿರುವುದಾಗಿ ತಪ್ಪೊಪದಪಿಕೊಂಡಿದ್ದಾನೆ.
*ಹತ್ತಿರದ ಕಾಡಿನಲ್ಲಿ ದೇಹದ ಎಲ್ಲಾ ಭಾಗಗಳನ್ನು ಎಸೆಯುವ ಮೊದಲು ಅವಳ ಕೂದಲನ್ನು ಕತ್ತರಿಸಲಾಯಿತು ಮತ್ತು ಅವಳ ಗುರುತನ್ನು ಅಳಿಸಿಹಾಕಲಾಯಿತು.
ಶ್ರದ್ಧಾ ವಾಲ್ಕರ್ (27) ಅನ್ನು ಕತ್ತು ಹಿಸುಕಿ ಕೊಂದ ಅಫ್ತಾಬ್ ಪೂನಾವಾಲಾ, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ 300-ಲೀಟರ್ ಫ್ರಿಡ್ಜ್‌ನಲ್ಲಿ ಸುಮಾರು ಮೂರು ವಾರಗಳ ಕಾಲ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ತನ್ನ ನಿವಾಸದಲ್ಲಿ ಸಂಗ್ರಹಿಸಿದ ನಂತರ ನಗರದಾದ್ಯಂತ ಹಲವಾರು ದಿನಗಳಿಂದ ಎಸೆದಿದ್ದಾನೆ. ವಾಕರ್ ಅವರನ್ನು ಮೇ ತಿಂಗಳಲ್ಲಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಇವರಿಬ್ಬರೂ 2019ರಲ್ಲಿ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಭೇಟಿಯಾದರು. ಮುಂಬೈನಲ್ಲಿ ಸ್ವಲ್ಪ ಕಾಲ ಉಳಿದುಕೊಂಡ ನಂತರ ದೆಹಲಿಯಲ್ಲಿ ಒಟ್ಟಿಗೆ ತೆರಳಿದರು. ಅಫ್ತಾಬ್ ಮತ್ತು ಶ್ರದ್ಧಾ ಮನೆಯ ಖರ್ಚು, ದಾಂಪತ್ಯ ದ್ರೋಹ ಮತ್ತು ಇತರ ವಿಷಯಗಳ ಬಗ್ಗೆ ಜಗಳವಾಡುತ್ತಿದ್ದರು. ಇದು ಅವರ ಸಂಬಂಧವನ್ನು ಹಳಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ಕಾರಣಕ್ಕೆ ಆಫ್ತಾಬ್ ಶ್ರದ್ಧಾಳನ್ನು ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ.












Click it and Unblock the Notifications